Tag: Yaduveer Krishnadatta Chamaraja Wadiyar

ಮೈಸೂರಲ್ಲಿ 2 ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ
ಮೈಸೂರು

ಮೈಸೂರಲ್ಲಿ 2 ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ

February 7, 2021

ಮೈಸೂರು,ಫೆ.6(ಆರ್‍ಕೆ)-ಬೆಂಗಳೂರಿನ ಸಾವಯವ ಕೃಷಿಕರ ಬಳಗದ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ಸಂಸ್ಥೆಯ ಸಹಯೋಗ ದೊಂದಿಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರ ದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಗೆಡ್ಡೆ-ಗೆಣಸು ಮೇಳವನ್ನು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಪೂರ್ವಜರು ಕಾಡಿನಲ್ಲಿ ಬೆಳೆದ ನಿಸರ್ಗದತ್ತವಾದ ಗೆಡ್ಡೆ-ಗೆಣಸು, ಸಾವ ಯವ ಕೃಷಿ ಉತ್ಪನ್ನಗಳನ್ನು ಬಳಸುತ್ತಿದ್ದರಿಂದ ಆರೋಗ್ಯ ದಿಂದ ಸುದೀರ್ಘ ಕಾಲದವರೆಗೆ ಬದುಕುತ್ತಿದ್ದರು….

ನಾನು ರಾಜಕೀಯಕ್ಕೆ ಬರಲ್ಲ: ಯದುವೀರ್
ಕೊಡಗು

ನಾನು ರಾಜಕೀಯಕ್ಕೆ ಬರಲ್ಲ: ಯದುವೀರ್

January 29, 2019

ಮಡಿಕೇರಿ: ರಾಜಕೀಯ ರಂಗಕ್ಕೆ ಕಾಲಿಡುವುದಿಲ್ಲ ಎಂಬ ತನ್ನ ನಿರ್ಧಾರ ಅಚಲವಾಗಿದ್ದು, ಜನಸೇವೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕ ಮುಂದಾಗುವುದಾಗಿ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಡಿಕೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಯದುವೀರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಶಾ ಚುನಾವಣೆಗೆ ಮುನ್ನ ಮೈಸೂರು ರಾಜಮನೆತನದ ಮುಖಂಡರನ್ನು ಭೇಟಿಯಾಗುವೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯದುವೀರ್, ತಾನು ಖಂಡಿತಾ ರಾಜಕೀಯಕ್ಕೆ ಬರಲಾರೆ ಎಂದರು. ಪ್ರಕೃತಿ ವಿಕೋಪ ಪೀಡಿತ ಕೊಡಗಿನ…

ಭಕ್ತ ಸಾಗರದ ನಡುವೆ ತಾಯಿ ಚಾಮುಂಡೇಶ್ವರಿ ರಥೋತ್ಸವ
ಮೈಸೂರು, ಮೈಸೂರು ದಸರಾ

ಭಕ್ತ ಸಾಗರದ ನಡುವೆ ತಾಯಿ ಚಾಮುಂಡೇಶ್ವರಿ ರಥೋತ್ಸವ

October 24, 2018

ಮೈಸೂರು: ವಿಜಯದಶಮಿ ಮೆರವಣಿಗೆ ನಂತರ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ಇಂದು ಅಪಾರ ಭಕ್ತ ಸಮೂಹದ ನಡುವೆ ಭಕ್ತಿ-ಭಾವದಿಂದ ಅದ್ಧೂರಿಯಾಗಿ ನೆರವೇರಿತು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಈ ಪ್ರಸಿದ್ಧ ಧಾರ್ಮಿಕ ಕೈಂಕರ್ಯ ವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು. ಯದುವಂಶಸ್ಥರಾದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬೆಳಿಗ್ಗೆ 8.10 ಗಂಟೆಗೆ ವೃಶ್ಚಿಕ ಶುಭ ಲಗ್ನದಲ್ಲಿ ವೈಭವದ ಚಾಮುಂಡೇಶ್ವರಿ ಮಹಾರಥೋತ್ಸವ (ರಥಾರೋಹಣ)ಕ್ಕೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ…

ಖಾಸಗಿ ದರ್ಬಾರ್ ಆರಂಭ
ಮೈಸೂರು, ಮೈಸೂರು ದಸರಾ

ಖಾಸಗಿ ದರ್ಬಾರ್ ಆರಂಭ

October 11, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಬುಧವಾರದಿಂದ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಇಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಕೆಲ ವಿಧಿ-ವಿಧಾನಗಳನ್ನು ಪೂರೈಸಿ, ಗಮನ ಸೆಳೆದರು. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡು, ಖಾಸಗಿ ದರ್ಬಾರ್‌ಗೆ…

ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ಸೇವೆ: ಯದುವೀರ್
ಮೈಸೂರು

ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ಸೇವೆ: ಯದುವೀರ್

September 27, 2018

ಮೈಸೂರು: ಪ್ರವಾಸೋದ್ಯಮ ಇಲಾಖೆಗೆ ರಾಯಭಾರಿ ಆಗಿರುವುದರಿಂದ ಮೈಸೂರು ನಗರಕ್ಕೆ ಮತ್ತಷ್ಟು ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಯುವರಾಜ ಯದುವೀರ್ ಸಂತಸಪಟ್ಟರು. ಬುಧವಾರ ಅರಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ದಕ್ಷಿಣ ಭಾರತವನ್ನು ಪ್ರವಾಸಿಗರ ತಾಣವಾನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು. ಮೈಸೂರಿನ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿ ವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಮೈಸೂರಿನತ್ತ ಸೆಳೆಯಲು ಶ್ರಮಿಸಬೇಕಾಗಿದೆ ಎಂದ ಅವರು, ನಾಡಿನ ಜನತೆಗೆ ವಿಶ್ವ ಪ್ರವಾಸೋದ್ಯಮದ ದಿನಾ…

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್
ಮೈಸೂರು

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್

September 24, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಈ ಬಾರಿ ತಮ್ಮ ಮಗ ಆದ್ಯವೀರ್ ಒಡೆಯರ್ ಅವರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಅರಮನೆಯ ಆವರಣದಲ್ಲಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿ ಗಳಿಗೆ ಅಗತ್ಯ ವಸ್ತುಗಳುಳ್ಳ ಕಿಟ್ ವಿತರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನಾಡ ಹಬ್ಬ ದಸರಾ ಮಹೋತ್ಸವ ಅ.10ರಿಂದ ಆರಂಭಗೊಂಡು…

ಸೆ.23ರಂದು ಮೈಸೂರಲ್ಲಿ `ಹೈಫಾ ಯುದ್ಧ’ದ  ಶತಮಾನೋತ್ಸವ ಸಂಭ್ರಮ ಆಚರಣೆ
ಮೈಸೂರು

ಸೆ.23ರಂದು ಮೈಸೂರಲ್ಲಿ `ಹೈಫಾ ಯುದ್ಧ’ದ  ಶತಮಾನೋತ್ಸವ ಸಂಭ್ರಮ ಆಚರಣೆ

September 19, 2018

ಮೈಸೂರು:  ಮೈಸೂರು ಸಂಸ್ಥಾನದ ಅಶ್ವದಳ ಸೈನಿಕರು ಭಾಗಿಯಾಗಿದ್ದ ಇಸ್ರೇಲ್‍ನ `ಹೈಫಾ ಯುದ್ಧ’ದ ಶತಮಾನೋತ್ಸವ ಸಮಾರಂಭವನ್ನು ಸೆ.23ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅಂದು ಸಂಜೆ 6ಕ್ಕೆ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ‘ಹೈಫಾ ಯುದ್ಧ’ ಶತಮಾನೋತ್ಸವ ಸಂಭ್ರಮಾಚರಣೆ ಸಮಾರಂಭ ನಡೆಯ ಲಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್‍ಸಿಂಹ ಪಾಲ್ಗೊಳ್ಳಲಿದ್ದಾರೆ. ಹೈಫಾ ಯುದ್ಧದಲ್ಲಿ ಪಾಲ್ಗೊಂಡಿದ್ದ…

ಕನ್ನಡ ಭಾಷೆ-ಸಾಹಿತ್ಯ, ಕಲೆ ಉಳಿವಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ
ಹಾಸನ

ಕನ್ನಡ ಭಾಷೆ-ಸಾಹಿತ್ಯ, ಕಲೆ ಉಳಿವಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ

September 9, 2018

ಹಾಸನ: ಹತ್ತೊಂಬತ್ತನೇ ಶತಮಾನದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರಾಂತ್ಯಗಳನ್ನು ಒಗ್ಗೂಡಿಸಿದ ಮೈಸೂರು ಸಂಸ್ಥಾನ, ಭಾಷೆ-ಸಾಹಿತ್ಯ, ಕಲೆ ಉಳಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಮೈಸೂರಿನ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಾ ಪೂರ್ವ ಮತ್ತು ನಂತರದ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮೈಸೂರು ಮಹಾಸಂಸ್ಥಾನ ರಾಜ್ಯಕ್ಕೆ ಉತ್ತಮ ಆಡಳಿತ…

ರಾಜಕೀಯ ಪ್ರವೇಶ ಊಹಾಪೋಹಕ್ಕೆ ತೆರೆ ಎಳೆದ ಯುವರಾಜ
ಹಾಸನ

ರಾಜಕೀಯ ಪ್ರವೇಶ ಊಹಾಪೋಹಕ್ಕೆ ತೆರೆ ಎಳೆದ ಯುವರಾಜ

September 9, 2018

ಹಾಸನ:  ಮೈಸೂರು ಯುವರಾಜರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಕ್ಕೆ ಸ್ವತಃ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ತೆರೆ ಎಳೆದಿದ್ದಾರೆ. ಜಿಲ್ಲಾ ಕಸಾಪದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟು ಇದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು. ಮಂಡ್ಯದಿಂದ ಲೋಕಸಭೆಗೆ…

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ
ಮೈಸೂರು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ

July 25, 2018

ಬೆಂಗಳೂರು: ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರೇ, ಯದುವೀರ್ ಅವರನ್ನು ರಾಜಕೀಯಕ್ಕೆ ಕರೆತರುವ ಆಸಕ್ತಿ ಹೊಂದಿದ್ದಾರೆ. ಸಂಸತ್ ಹಾಲ್‍ನಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ನೀವು ಮೈಸೂರು ಇಲ್ಲವೆ, ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿ ಕೊಳ್ಳಿ…

1 2
Translate »