Tag: Yelandur

ಅಪರಿಚಿತ ವಾಹನ ಡಿಕ್ಕಿ, ಪುನುಗು ಬೆಕ್ಕು ಸಾವು
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ, ಪುನುಗು ಬೆಕ್ಕು ಸಾವು

July 3, 2018

ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪರೂಪದ ಪುನುಗು ಬೆಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ. ನಿಶಾಚಾರಿ ಜೀವಿಯಾಗಿರುವ ಪುನುಗು ಬೆಕ್ಕು ರಾತ್ರಿ ವೇಳೆ ತನ್ನ ಆಹಾರ ಅರಸಿ ಹೋಗುತ್ತದೆ. ಅಂಬಳೆ, ಹೊಮ್ಮ, ಕಂದಹಳ್ಳಿ ಸೇರಿದಂತೆ ಸುವರ್ಣಾವತಿ ನದಿಯ ದಡದಲ್ಲಿ ಹೆಚ್ಚಾಗಿ ಇವು ಕಾಣಸಿಗುತ್ತದೆ. ಜೊತೆಗೆ, ಇಲ್ಲಿ ನವಿಲು, ಚುಕ್ಕೆ ಜಿಂಕೆಗಳು, ಮೊಲ, ಕಾಡು ಅಳಿಲು, ಹಾವು ಸೇರಿದಂತೆ ವಿರಳ ಪ್ರಬೇಧದ ಸರಿಸೃಪಗಳು ಹಾಗೂ ಹಲವು ಕಾಡು ಪ್ರಾಣಿಗಳು…

ಗಿರಿಜನರೊಂದಿಗೆ ಗಲಾಟೆ ಬೇಡ, ಕಾನೂನು ಹೋರಾಟ ಮಾಡಿ
ಚಾಮರಾಜನಗರ

ಗಿರಿಜನರೊಂದಿಗೆ ಗಲಾಟೆ ಬೇಡ, ಕಾನೂನು ಹೋರಾಟ ಮಾಡಿ

July 1, 2018

ಸುತ್ತೂರು ಇರಸವಾಡಿ ಗ್ರಾಮಸ್ಥರಿಗೆ ಸಿಪಿಐ ರಾಜೇಶ್ ಸಲಹೆ ಯಳಂದೂರು: ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದ ಅರಣ್ಯದಂಚಿನಲ್ಲಿರುವ ಕೆ.ದೇವ ರಹಳ್ಳಿ ಗ್ರಾಮದಲ್ಲಿ ಸುಮಾರು 57ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ವಾಸ ವಾಗಿದ್ದು, ಅವರ ಮೇಲೆ ಕೃಷಿ ಜಮೀನಿನ ವಿಚಾರವಾಗಿ ಇರಸವಾಡಿ ಹಾಗೂ ಸುತ್ತೂರು ಗ್ರಾಮಸ್ಥರು 2017ರ ಅಕ್ಟೋಬರ್‍ನಲ್ಲಿ ಗಲಾಟೆ ಮಾಡಿದ್ದರು. ಈ ಸಂಬಂಧ ಗಿರಿ ಜನರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆ ಸಿಪಿಐ ರಾಜೇಶ್ ನೇತೃ ತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಗ್ರಾಮಸ್ಥರ ಸಭೆ ನಡೆಸಲಾಯಿತು. ಸಿಪಿಐ ರಾಜೇಶ್…

ರಂಗಪ್ಪನ ಸನ್ನಿಧಿಯಲ್ಲಿ ಜೂಜಾಟ
ಚಾಮರಾಜನಗರ

ರಂಗಪ್ಪನ ಸನ್ನಿಧಿಯಲ್ಲಿ ಜೂಜಾಟ

June 28, 2018

18 ಜೂಜುಕೋರರ ಸೆರೆ 51,200 ನಗದು, 2 ಕಾರು ವಶ ಯಳಂದೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಜೂಜಾಟದಲ್ಲಿ ತೊಡಗಿದ್ದ 18 ಮಂದಿ ಜೂಜುಕೋರರನ್ನು ಬಂಧಿಸಿ 51,200 ರೂ. ಹಾಗೂ 2 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಳಿಗಿರಿರಂಗನಬೆಟ್ಟದ ಲೋಕೋಪ ಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಪ್ರಭಾವಿಗಳ ಗುಂಪೊಂದು ಮೋಜುಮಸ್ತಿ ಯಲ್ಲಿ ತೊಡಗಿದೆ ಎಂಬ ಮಾಹಿತಿ ಹಿನ್ನೆ ಲೆಯಲ್ಲಿ ಯಳಂದೂರು ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಅವರು ಸಬ್‍ಇನ್ಸ್…

ಶೌಚಾಲಯ ಬಂದ್: ಪಪಂ ಕಚೇರಿ ಮುಂದೆ ರೈತರ ಪ್ರತಿಭಟನೆ
ಚಾಮರಾಜನಗರ

ಶೌಚಾಲಯ ಬಂದ್: ಪಪಂ ಕಚೇರಿ ಮುಂದೆ ರೈತರ ಪ್ರತಿಭಟನೆ

June 27, 2018

ಯಳಂದೂರು: ಕಳೆದ ಮೂರು ದಿನ ಗಳಿಂದ ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕರ ಶೌಚಾ ಲಯವನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅನಾನುಕೂಲವಾಗಿದೆ ಇಂದು ಪ.ಪಂ. ಆಡಳಿತದ ವಿರುದ್ಧ ತಾಲೂಕು ರೈತ ಸಂಘದ ಕಾರ್ಯಕರ್ತರು ಪ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕರ ಶೌಚಾಲಯ ಬಂದ್ ಮಾಡಿದ್ದರಿಂದ ದೂರದ ಊರುಗಳಿಂದ ಬರುವ ಸಾರ್ವಜನಿಕರು ಮತ್ತು ಬಿಳಿಗಿರಿ ರಂಗಸ್ವಾಮಿ ಬೆಟ್ಟಕ್ಕೆ ಹೋಗುವ ಭಕ್ತರು, ಪ್ರವಾಸಿಗರಿಗೆ ಅನಾನುಕೂಲವಾಗಿದೆ. ಶೌಚಾಲಯವಿಲ್ಲದೆ ಹೆಂಗಸರು, ಮಕ್ಕಳು, ಪುರುಷರ ಪಾಡು…

ಯಳಂದೂರನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಧ್ರುವನಾರಾಯಣ ಸೂಚನೆ
ಚಾಮರಾಜನಗರ

ಯಳಂದೂರನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಧ್ರುವನಾರಾಯಣ ಸೂಚನೆ

June 24, 2018

ಯಳಂದೂರು:  ‘ಜಿಲ್ಲೆಯ ಅತ್ಯಂತ ಚಿಕ್ಕ ತಾಲೂಕಾಗಿದ್ದರೂ ಅತ್ಯಂತ ವಿಶೇಷವಾಗಿ ಗುರುತಿಸಿಕೊಂಡಿರುವ ಯಳಂದೂರು ಪಟ್ಟಣವನ್ನು ಪ್ರವಾಸೋದ್ಯಮ ತಾಣವಾಗಿ ರೂಪಿಸಲು ಕ್ರಮವಹಿಸಬೇಕು’ ಎಂದು ಸಂಸದ ಆರ್.ಧ್ರುವನಾರಾಯಣ ಅವರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಸೂಚನೆ ನೀಡಿದರು. ಪಟ್ಟಣದ ಬಳೇಮಂಟಪ, ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ, ಗೌರೇ ಶ್ವರ ದೇಗುಲಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.ಪಟ್ಟಣದಲ್ಲಿರುವ ಬಳೇಮಂಟಪ ರಾಜ್ಯ ದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿರುವ ಸ್ಮಾರಕವಾಗಿದೆ. ಇದರ ಅನತಿ ದೂರದಲ್ಲಿ ರುವ ಜಹಗೀರ್ದಾರ್ ಬಂಗಲೆಯನ್ನು ದಿವಾನ್ ಪೂರ್ಣಯ್ಯ…

ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಪ್ರತಿಭಟನೆ

June 24, 2018

ಯಳಂದೂರು: ವಿವಿಧ ಬೇಡಿಕೆ ಈಡೇರಿ ಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು. ನಾಡ ಮೇಗಲಮ್ಮ ದೇವಾಲಯದಿಂದ ಮೆರವಣಿಗೆ ಆರಂಭಿಸಿದ ನೌಕರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಗ್ರಾಮ ಪಂಚಾಯಿತಿ ನೌಕರರು ಕನಿಷ್ಠ ವೇತನವಿಲ್ಲದೆ ಸಂಕಷ್ಟದಲ್ಲಿ ಜೀವನ ನಡೆ ಸುತ್ತಿದ್ದಾರೆ. ತಿಂಗಳಿಗೆ ಸರಿಯಾಗಿ ಸಂಬಳ ದೊರೆಯುತ್ತಿಲ್ಲ ಎಂದು ದೂರಿದರು. ನೌಕರರಿಗೆ ಇಎಫ್‍ಎಂಎಸ್ ಮೂಲಕ ವೇತನ ನೀಡಲು ಆದೇಶ ಹೊರಡಿಸಿರು ವುದು ಸಂತಸ ವಿಚಾರವಾಗಿದೆ. ಆದರೆ, ಈ ಆದೇಶಕ್ಕೆ ಇನ್ನೂ 17 ಸಾವಿರ…

ಇಂದು ಅಂಬಳೆ ಚಾಮುಂಡೇಶ್ವರಿ ರಥೋತ್ಸವ
ಚಾಮರಾಜನಗರ

ಇಂದು ಅಂಬಳೆ ಚಾಮುಂಡೇಶ್ವರಿ ರಥೋತ್ಸವ

June 22, 2018

ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಶ್ರೀಚಾಮುಂಡೇಶ್ವರಿ ಚಿರಬಿಂಬ ಹಾಗೂ ನೂತನ ರಥ ಸಮರ್ಪಣಾ ಮಹೋತ್ಸವ ನಾಳೆ (ಜೂ.22) ಮಧ್ಯಾಹ್ನ 12.45 ರಿಂದ 1.40 ರಲ್ಲಿ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ನಡೆಯಲಿದ್ದು, ಶ್ರೀ ಚಾಮುಂಡೇಶ್ವರಿ ಅಮ್ಮ ನವರ ಬ್ರಹ್ಮರಥೋತ್ಸವವೂ ನಡೆಯಲಿರುವುದರಿಂದ ಗ್ರಾಮ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ದೇವಾಲಯದ ಅವರಣದಲ್ಲಿ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಚಿರಬಿಂಬ, ರಥಬಿಂಬ, ಶುದ್ದಿನೇತ್ರೋ ನ್ಮಿಲನ, ಧೇನು, ಕುಂಬ, ದೀಪಾಗ್ನಿ, ನಿರೀಕ್ಷಣೆ, ಕಲ್ಪೋಕ್ತ, ಸಪ್ತಮಾತೃ ಕಾಕಲಶ ಸ್ಥಾಪನೆ, ವೇದಿಕಾ, ಮಂಟಪಾರ್ಚನೆ, ರಥಬಿಂಬ,…

ಯಳಂದೂರು ಬಳಿ ಹೆಬ್ಬಾವು ಪತ್ತೆ
ಚಾಮರಾಜನಗರ

ಯಳಂದೂರು ಬಳಿ ಹೆಬ್ಬಾವು ಪತ್ತೆ

June 22, 2018

ಯಳಂದೂರು: ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾ ಮೀಸಲು ಅರಣ್ಯದಂಚಿನಲ್ಲಿರುವ ಜಾವನೆ (ಜಾಕ್ಲಿನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್) ಫಾರಂನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು ಸ್ನೇಕ್ ಮಹೇಶ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ವ್ಯಾಪ್ತಿಗೆ ಬರುವ ಜಾವನೆ ಫಾರಂನಲ್ಲಿ ಇಂದು ಬೆಳಿಗ್ಗೆ ಈ ಹೆಬ್ಬಾವು ಕಾಣ ಸಿಕೊಂಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಎಸಿಎಫ್ ನಾಗರಾಜು ಸಿಬ್ಬಂದಿಗ ಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಂತೇಮರಹಳ್ಳಿ ಉರಗ ತಜ್ಞ ಮಹೇಶ್ ಅವರನ್ನು ಕರೆಸಿ ಹೆಬ್ಬಾವು ಹಿಡಿಸಿ…

ಸಾವಯವ ಗೊಬ್ಬರದಿಂದ ಉತ್ತಮ ಬೆಳೆ
ಚಾಮರಾಜನಗರ

ಸಾವಯವ ಗೊಬ್ಬರದಿಂದ ಉತ್ತಮ ಬೆಳೆ

June 21, 2018

ಯಳಂದೂರು: ರೈತರು ತಾವೇ ಗೊಬ್ಬರ ತಯಾರಿಸಿಕೊಂಡು ಬೆಳೆಗಳನ್ನು ಬೆಳೆಯು ವುರಿಂದ ಉತ್ತಮ ಆದಾಯವನ್ನು ಪಡೆ ಯಬಹುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್.ಯೋಗೇಶ್ ಸಲಹೆ ನೀಡಿದರು. ಅವರು ಬುಧವಾರ ಪಟ್ಟಣದ ಕೃಷಿ ಇಲಾಖೆಯ ಕಚೇರಿಯ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ನಮ್ಮ ಭೂಮಿ ಕೇವಲ ನಮ್ಮ ಹಿರಿಯರು ಕೊಟ್ಟ ಸ್ವತ್ತಲ್ಲ. ಇದು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡುವ ಉಡುಗೊರೆಯಾಗಬೇಕು. ಚಾಮರಾಜನಗರ ಜಿಲ್ಲೆ ಸುಧಾರಿತ ಕೃಷಿ ಪದ್ಧತಿಯ ಅಳ ವಡಿಕೆಯಲ್ಲಿ…

ಯಳಂದೂರಿನಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ
ಚಾಮರಾಜನಗರ

ಯಳಂದೂರಿನಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

June 20, 2018

ಯಳಂದೂರು: ರೈತರು ಕೃಷಿ ಚಟುವಟಿಕೆಗೆ ಬ್ಯಾಂಕ್‍ಗಳಲ್ಲಿ ಚಿನ್ನ ಗಿರಿವಿ ಇಟ್ಟಿರು ವುದನ್ನು ಹರಾಜು ಮಾಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದರಿಂದ ರೈತರು ಪ್ರತಿಭಟನೆ ನಡೆಸಿದರು ಪಟ್ಟಣದ ಕೆನರಾ ಬ್ಯಾಂಕ್ ಮತ್ತು ಎಸ್‍ಬಿಐ ಬ್ಯಾಂಕ್‍ಗಳಲ್ಲಿ ರೈತರು ಕೃಷಿ ಗಾಗಿ ಚಿನ್ನ ಗಿರಿವಿ ಇಟ್ಟಿದ್ದರು. ಗಿರಿವಿ ರೈತರ ಅವಧಿ ಮುಗಿದಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹರಾಜು ಮಾಡಲು ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದ ರೈತರು ಫಸಲಿಗೆ ನಿಗದಿತ ಬೆಲೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ರಾಜ್ಯ ಮತ್ತು ಕೇಂದ್ರ ಸರಕಾರ…

1 2 3 4
Translate »