ಹೊಸ ವರ್ಷದ ಮೊದಲ ದಿನ ಮೈಸೂರಲ್ಲಿ  ದೈವದ ಮೊರೆ ಹೋದ ಆಸ್ತಿಕರು
ಮೈಸೂರು

ಹೊಸ ವರ್ಷದ ಮೊದಲ ದಿನ ಮೈಸೂರಲ್ಲಿ ದೈವದ ಮೊರೆ ಹೋದ ಆಸ್ತಿಕರು

January 2, 2019

ಮೈಸೂರು: ಯುವ ಸಮುದಾಯವು ಸೋಮವಾರ ರಾತ್ರಿಯಿಡೀ ಮೋಜು ಮಸ್ತಿಯೊಂದಿಗೆ ಹೊಸ ವರ್ಷವನ್ನು ಸಂತಸದಿಂದ ಬರ ಮಾಡಿಕೊಂಡರೆ, 2019ರ ಮೊದಲ ದಿನ ವಾದ ಇಂದು ಆಸ್ತಿಕ ಮಹಾಶಯರು ಮೈಸೂರಿನ ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡಿದರು.

ಮುಂಜಾನೆಯಿಂದ ರಾತ್ರಿವರೆಗೂ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರು. ಸಾವಿರಾರು ಮಂದಿ ಇದೇ ವೇಳೆ ಪರಸ್ಪರ ಹೊಸ ವರ್ಷದ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡರು. ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಮೈಸೂರು ನಗರ ದಾದ್ಯಂತ ದೇವಸ್ಥಾನಗಳಲ್ಲಿ ಜನವೋ ಜನ.

ಶ್ರೀ ಯೋಗಾನರಸಿಂಹ ಸ್ವಾಮಿಗೆ ಮುಂಜಾನೆ 3 ಗಂಟೆಯಿಂದಲೇ ಅಭಿಷೇಕ, ಅರ್ಚನೆ, ಮಂಗಳಾರತಿ ಮಾಡಿದ ನಂತರ ಬೆಳಿಗ್ಗೆ 5 ಗಂಟೆಯಿಂದ ಭಕ್ತರಿಗೆ ಸ್ವಾಮಿ ದರ್ಶ ನಕ್ಕೆ ಅವಕಾಶ ನೀಡಲಾಯಿತು. ದೇವಸ್ಥಾನದ ಮುಖ್ಯಸ್ಥ ಪ್ರೊ.ಭಾಷ್ಯಂ ಸ್ವಾಮೀಜಿ, ವ್ಯವ ಸ್ಥಾಪಕ ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಪೂರೈಸಲಾಯಿತು.

ಭಕ್ತಾದಿಗಳು ಸಾಲುಗಟ್ಟಿ ನಿಂತು ಶ್ರೀ ಯೋಗಾನರಸಿಂಹ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ಪ್ರತಿಯೊಬ್ಬ ರಿಗೂ ಲಾಡು ಪ್ರಸಾದವನ್ನು ತಡರಾತ್ರಿವರೆಗೂ ನೀಡಲಾಯಿತು. ಪೂರ್ವ ನಿಗದಿಯಂತೆ ಇಂದು 2 ಲಕ್ಷ ಲಾಡು ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು ಎಂದು ಪ್ರೊ.ಭಾಷ್ಯಂ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಚಾಮುಂಡಿ ಬೆಟ್ಟ: ಹೊಸ ವರ್ಷದ ಅಂಗವಾಗಿ ಇಂದು ಚಾಮುಂಡಿಬೆಟ್ಟದಲ್ಲಿ ರುವ ಅಧಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ವಾಹನಗಳಲ್ಲಿ, ಮೆಟ್ಟಿಲುಗಳ ಮೂಲಕ ದೇವರ ಸನ್ನಿಧಿಗೆ ಧಾವಿಸಿದ ಭಕ್ತಾದಿಗಳು ದೇವರ ದರ್ಶನ ಪಡೆದರು.

ಸ್ಥಳೀಯರಲ್ಲದೇ ಹೊಸ ವರ್ಷಾ ಚರಣೆಗೆಂದು ಮೈಸೂರಿಗೆ ಆಗಮಿಸಿದ ಪ್ರವಾಸಿಗರ ದಂಡೂ ಚಾಮುಂಡಿಬೆಟ್ಟಕ್ಕೆ ಬಂದಿದ್ದರಿಂದ ದೇವರ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಅದೇ ರೀತಿ ದಾಸೋಹ ಭವನದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ವಿನಿಯೋಗ ಮಾಡಲಾಯಿತು.

ಹೆಬ್ಬಾಳದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಉತ್ತನಹಳ್ಳಿಯ ಜ್ವಾಲಾ ಮುಖಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ಒಂಟಿಕೊಪ್ಪಲಿನ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನ, ಮಾತೃಮಂಡಳಿ ಸರ್ಕಲ್‍ನ ಶ್ರೀ ಚಂದ್ರ ಮೌಳೇಶ್ವರ ದೇವಸ್ಥಾನ, ಪಡುವಾರ ಹಳ್ಳಿಯ ಮಹದೇಶ್ವರ ಗಣಪತಿ ದೇವ ಸ್ಥಾನ, ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕುವೆಂ ಪುನಗರದ ಬಂದಂತಮ್ಮ ಕಾಳಮ್ಮ ದೇವ ಸ್ಥಾನ, ದಿವಾನ್ಸ್ ರಸ್ತೆಯ ಶ್ರೀ ಅಮೃತೇ ಶ್ವರ ದೇವಸ್ಥಾನ, ಇರ್ವಿನ್ ರಸ್ತೆಯ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಮೈಸೂರಿನ ಎಲ್ಲಾ ದೇವಾಲಯ ಗಳಲ್ಲಿ ಇಂದು ನಡೆದ ವಿಶೇಷ ಪೂಜಾ ವಿಧಿ- ವಿಧಾನಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು.

Translate »