ಮೈಸೂರಲ್ಲಿ ವಾಹನ ಚಾಲಕರಿಗೆ ಉಡುಗೊರೆ ನೀಡಿ ಸಂಚಾರಿ ಪೊಲೀಸರಿಂದ ಹೊಸ ವರ್ಷದ ಶುಭಾಶಯ
ಮೈಸೂರು

ಮೈಸೂರಲ್ಲಿ ವಾಹನ ಚಾಲಕರಿಗೆ ಉಡುಗೊರೆ ನೀಡಿ ಸಂಚಾರಿ ಪೊಲೀಸರಿಂದ ಹೊಸ ವರ್ಷದ ಶುಭಾಶಯ

January 2, 2019

ಮೈಸೂರು: ಮೈಸೂರು ಪೊಲೀಸರು ಜನಸ್ನೇಹಿಗಳಾಗುತ್ತಿದ್ದಾರೆ. ಮೈಸೂರು ಪೊಲೀಸರು, ಲಾಡು, ಗ್ರೀಟಿಂಗ್ಸ್ ಕಾರ್ಡ್ ನೀಡುವ ಮೂಲಕ ಇಂದು ನಾಗರಿಕರಿಗೆ ಕಾನೂನು ಪಾಲನೆ ಅರಿವು ಮೂಡಿಸುವುದರೊಂದಿಗೆ ಹೊಸ ವರ್ಷದ ಶುಭಾಶಯ ಕೋರಿದರು.

ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತ ತಪ್ಪಿಸಿ, ಅಮೂಲ್ಯ ಜೀವ ಉಳಿಸುವ ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಜಾಗೃತಿ ಮೂಡಿಸಿದ ಸಂಚಾರ ಪೊಲೀ ಸರು, ಡಿಎಲ್, ಆರ್‍ಸಿ ಬುಕ್, ಇನ್ಷೂ ರೆನ್ಸ್ ಸರಿಯಾಗಿಟ್ಟುಕೊಂಡು ವಾಹನ ವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಿ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿದ ಚಾಲಕರಿಗೆ ಉಡುಗೊರೆ ನೀಡಿದ ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಅವರು, ನಾಗರಿಕರ ಪ್ರೀತಿಗೆ ಪಾತ್ರರಾದರು.
ಮೈಸೂರು ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ದ್ವಿಚಕ್ರ ವಾಹನ ಹಾಗೂ ಕಾರು ಚಾಲನೆ ಮಾಡುವವರಿಗೆ ಉಡುಗೊರೆ, ಲಾಡು ಹಾಗೂ ಗ್ರೀಟಿಂಗ್ ಕಾರ್ಡ್ ನೀಡಿ ಶುಭಾಶಯ ಕೋರುವ ಮೂಲಕ ಸಂಚಾರ ನಿಯಮ ಪಾಲಿಸಿ, ಬೇರೆಯವರಿಗೂ ಸಲಹೆ ನೀಡಿ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ.ಅಮಟೆ ಸಲಹೆ ನೀಡಿದರು.

ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್, ಈ ವಿನೂತನ ಕಾರ್ಯಕ್ರಮ ವನ್ನು ಆಯೋಜಿಸಿ ಜನರ ಪ್ರೀತಿ ಗಳಿಸುವ ಮೂಲಕ ಮೈಸೂರು ನಗರದಲ್ಲಿ ಸುರಕ್ಷಾ ಸಂಚಾರ ವ್ಯವಸ್ಥೆ ಜಾರಿಗೆ ಪ್ರಯತ್ನಿಸಿದ್ದಾರೆ.

ನಂತರ ಎಲ್ಲಾ ಸಂಚಾರ ಠಾಣೆಗಳ ಇನ್ಸ್ ಪೆಕ್ಟರ್‍ಗಳು ಹಾಗೂ ಸಿಬ್ಬಂದಿ ತಮ್ಮ ವ್ಯಾಪ್ತಿಗಳಲ್ಲಿ ಸಿಹಿ, ಉಡುಗೊರೆ ಹಾಗೂ ಗ್ರೀಟಿಂಗ್ ಕಾರ್ಡ್ ನೀಡುವ ಮೂಲಕ ಜನರಿಗೆ ಸಂಚಾರ ನಿಯಮ ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಿದರು.

Translate »