ಮಾಜಿ ಸಿಎಂ ಎಸ್.ಎಂ.ಕೃಷ್ಣರ ಭೇಟಿಯಾದ   ಡಿ.ಕೆ.ಶಿವಕುಮಾರ್ ಹೊಸ ವರ್ಷದ ಶುಭಾಶಯ ಕೋರಿಕೆ
ಮೈಸೂರು

ಮಾಜಿ ಸಿಎಂ ಎಸ್.ಎಂ.ಕೃಷ್ಣರ ಭೇಟಿಯಾದ ಡಿ.ಕೆ.ಶಿವಕುಮಾರ್ ಹೊಸ ವರ್ಷದ ಶುಭಾಶಯ ಕೋರಿಕೆ

January 2, 2019

ಬೆಂಗಳೂರು: ಪ್ರತಿಪಕ್ಷ ಬಿಜೆಪಿಯ ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿಯದೇ ನಾವು ಸಾರ್ವಜನಿಕ ದೃಷ್ಟಿ ಯಿಂದ ಸಂಪರ್ಕ ರಸ್ತೆ ಹಾಗೂ ಅಭಿ ವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮನಾಂತರ ವಾಗಿ ಮೇಕೆದಾಟು ಯೋಜನೆಗೆ ಸಂಬಂಧಿ ಸಿದಂತೆ ಸಮಾಲೋಚನೆ ನಡೆಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಇಲಾಖೆ ಹೊಣೆ ಹೊತ್ತಿರುವ ಉಪ ಮುಖ್ಯ ಮಂತ್ರಿ ಡಾ. ಜಿ.ಪರಮೇಶ್ವರ್ ಸ್ಟೀಲ್ ಬ್ರಿಡ್ಜ್ ನಿರ್ಮಾಣವನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇವೆ ಎಂಬ ಹೇಳಿಕೆಗೆ ಪುಷ್ಟಿ ಕೊಟ್ಟು ಅಭಿವೃದ್ಧಿ ಕಾರ್ಯಗಳಲ್ಲಿ ಲೋಪದೋಷಗಳಿದ್ದರೆ ಹೇಳಲಿ, ಅದು ಬಿಟ್ಟು ಬ್ಲಾಕ್‍ಮೇಲ್ ಮಾಡಿ ದರೆ ನಾವು ಮಣಿಯುವವರಲ್ಲ.

ಬೆಂಗಳೂರು ಉತ್ತರ ದಿಕ್ಕಿನ ಸಂಪರ್ಕ ಮಾಡಲು ಕನಿಷ್ಠ ಮೂರರಿಂದ ನಾಲ್ಕು ಗಂಟೆಯಾಗುತ್ತದೆ. ಇದರಿಂದ ಸಂಚಾರಿ ದಟ್ಟಣೆ ಸಂದರ್ಭದಲ್ಲಿ ಜನರು ಇನ್ನಿಲ್ಲದ ಕಷ್ಟಪಡುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಚಾಲುಕ್ಯ ವೃತ್ತದಿಂದ ಹೆಬ್ಬಾಳ, ಮೇಲು ಸೇತುವೆವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮರು ಚಾಲನೆ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದರು. ಈ ಮಧ್ಯೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿಗಳು ಸಾರ್ವಜನಿಕ ಅಭಿ ಪ್ರಾಯದ ಮೇರೆಗೆ ಏರ್‍ಪೋರ್ಟ್ ರಸ್ತೆ ಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಪುನರ್ ಪರಿಶೀಲನೆ ಮಾಡುತ್ತಿದ್ದೇವೆ ಎಂದಿ ದ್ದಾರೆ. ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್‍ವರೆಗೆ ಸ್ಟೀಲ್ ಬ್ರಿಡ್ಜ್ ಅವಶ್ಯಕತೆ ಇದೆ. ಇದರಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ಸುಗಮವಾಗುತ್ತದೆ.

ರಾಜಕೀಯ ಒತ್ತಡಕ್ಕೆ ಮಣಿದು ಸಿದ್ದ ರಾಮಯ್ಯ ನೇತೃತ್ವದ ಸರ್ಕಾರ ಯೋಜನೆ ಯನ್ನು ಕೈಬಿಟ್ಟಿತ್ತು. ಆದರೆ ದಿನದಿಂದ ದಿನಕ್ಕೆ ಜನ ಮತ್ತು ವಾಹನ ಒತ್ತಡ ಹೆಚ್ಚಿ ರುವ ಹಿನ್ನೆಲೆಯಲ್ಲಿ ನಾವು ಯೋಜನೆ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತಿದ್ದೇವೆ.
ಈ ಸೇತುವೆ ನಿರ್ಮಾಣದಿಂದ ಉತ್ತರಕ್ಕೆ ಸುಗಮ ಸಂಪರ್ಕ ಕಲ್ಪಿಸುವುದರ ಜೊತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇವಲ 20 ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದರು.

Translate »