ಹರ್ಷೋದ್ಘಾರದೊಂದಿಗೆ ಹೊಸ ವರ್ಷ 2019ಕ್ಕೆ ಸ್ವಾಗತ
ಮೈಸೂರು

ಹರ್ಷೋದ್ಘಾರದೊಂದಿಗೆ ಹೊಸ ವರ್ಷ 2019ಕ್ಕೆ ಸ್ವಾಗತ

January 1, 2019

ಮೈಸೂರು: ಎಲ್ಲೆಲ್ಲೂ ನೂತನ ವರ್ಷದ ಸಂಭ್ರಮಾ ಚರಣೆ. 2018ಕ್ಕೆ ಗುಡ್ ಬೈ ಹೇಳಿ 2019ಕ್ಕೆ ಕಾಲಿಟ್ಟ ಸಂತಸದ ಕ್ಷಣ. ಈ ಎಲ್ಲಾ ಕ್ಷಣಗಳು ಕಂಡು ಬಂದಿದ್ದು ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ರಾತ್ರಿ…

ಒಂದೆಡೆ ಅರಮನೆ ತನ್ನ ದೀಪಾಲಂಕಾರದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಪ್ರೇಮಿಗಳು, ಯುವಜನತೆ, ನವ ಜೋಡಿಗಳು ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಹಾಡಿ, ಕುಣಿಯುವುದ ರೊಂದಿಗೆ ಹೊಸ ವರ್ಷವನ್ನು ಹರ್ಷೊ ಲ್ಲಾಸದ ನಡುವೆ ಬರಮಾಡಿಕೊಂಡರು.

ಹೊಸ ವರ್ಷದ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಹೋಟೆಲ್‍ಗಳು ವಿದ್ಯುತ್ ದೀಪಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ನೂತನ ಜೋಡಿ ಗಳು, ಯುವಕರು ಹೊಸ ವರ್ಷದ ಆಚ ರಣೆಗಾಗಿ ಸೋಮವಾರÀ ಸಂಜೆಯೇ ಹೋಟೆಲ್‍ಗಳಿಗೆ ಲಗುಬಗೆಯಿಂದ ಧಾವಿ ಸಿದರು. ರಾತ್ರಿ 8.30ಕ್ಕೆ ಆರಂಭವಾದ ಹೊಸ ವರ್ಷದ ಆಚರಣೆಯ ಸಂಭ್ರಮ ರಾತ್ರಿ 12ರವರೆಗೂ ಮುಂದುವರೆಯಿತು. ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟ ಯುವಕ-ಯುವತಿಯರು ಡ್ಯಾನ್ಸ್, ಗೇಮ್, ಫ್ಯಾಷನ್ ಶೋ ಮತ್ತಿತರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. ಆದರೆ ಎಲ್ಲಿಯೂ ಅಸಭ್ಯ ವರ್ತನೆಗೆ ಆಸ್ಪದ ನೀಡಲಿಲ್ಲ. ಎಲ್ಲಾ ಹೋಟೆಲ್‍ಗಳಲ್ಲಿಯೂ ಡಿಜೆ ಮತ್ತು ಎಂಸಿ ಮ್ಯೂಸಿಕ್‍ಗೆ ಎಲ್ಲರೂ ಉತ್ಸುಕತೆಯಿಂದ ಕುಣಿದು ಕುಪ್ಪಳಿಸಿದರು.

ಅರಮನೆಯಲ್ಲಿ ಹೊಸ ವರ್ಷಾಚರಣೆ: ಪ್ರತಿ ವರ್ಷ ಅರಮನೆ ಆವರಣದಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಅರಮನೆ ಜಯಮಾರ್ತಾಂಡ ಮಹಾದ್ವಾರದ ಮುಂಭಾಗದ ದೊಡ್ಡ ಕೆರೆ ಮೈದಾನದಲ್ಲಿ(ವಾಹನ ನಿಲುಗಡೆ ಸ್ಥಳ) ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಗೆ ಅರಮನೆ ದೀಪಾಲಂಕಾರದ ಸ್ವಿಚ್ ಆನ್ ಆಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಮಂದಿ ಸಾರ್ವಜನಿಕರು ನಾನಾ ರೀತಿಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾತ್ರಿ 12 ಗಂಟೆ ಮುಟ್ಟುತ್ತಲೇ ಎಲ್ಲರೂ ಒಂದೇ ಬಾರಿಗೆ `ಹ್ಯಾಪಿ ನ್ಯೂ ಇಯರ್’ ಎಂದು ಕೂಗಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಿಸಿದರು. ಸ್ನೇತರು, ಬಂಧು ಗಳೊಂದಿಗೆ ಶುಭಾಶಯ ವಿನಿಮಯ ಮಾಡಿ ಕೊಂಡರು. ರಸ್ತೆಯಲ್ಲಿ ಸಿಕ್ಕವರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಹೊಸ ವರ್ಷಾಚರಣೆ ಹಿನ್ನೆಲೆ ಅಹಿತಕರ ಘಟನೆ ಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಎಲ್ಲಾ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಹೋಟೆಲ್ ಸಂದೇಶ್ ದಿ ಪ್ರಿನ್ಸ್: ಲೈವ್ ಬ್ಯಾಂಡ್(ಫ್ಯಾಷನ್ ಮ್ಯೂಸಿಕ್ ಬ್ಯಾಂಡ್), ಸುಮರಾಜ್ ಕುಮಾರ್ ಅವರಿಂದ ಮ್ಯಾಜಿಕ್ /ಪಪೆಟ್ ಶೋ, ಫ್ಯಾಷನ್ ಶೋ, ಗೇಮ್ಸ್, ಡಿಜೆ, ಡ್ಯಾನ್ಸ್ ಫ್ಲೂರ್ (ಬೆಲ್ಲಿ ಡ್ಯಾನ್ಸ್, ಯುವಿ ಡ್ಯಾನ್ಸ್, ಫೈರ್ ಡ್ಯಾನ್ಸ್) ಆಯೋಜಿಸಲಾಗಿತ್ತು. ಅತಿಥಿ, ಗ್ರಾಹಕ ಜೋಡಿಗೆ 6,499 ರೂ., ಸಿಂಗಲ್ಸ್‍ಗೆ 3,999 ರೂ. ಹಾಗೂ 6-15 ವರ್ಷದೊಳಗಿನ ಮಕ್ಕಳಿಗೆ 1199 ರೂ. ನಿಗದಿಪಡಿಸಲಾಗಿತ್ತು. ಆಹಾರ, ಡ್ರಿಂಕ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ರ್ಯಾಡಿಸನ್ ಬ್ಲೂ: ಡಿಜೆ ಜತೆಗೆ 6,000 ರೂ. ಮತ್ತು 7,500 ರೂ. ಎಂಬ 2 ವೆರೈಟಿಗಳಿದ್ದು, 6 ಸಾವಿರ ರೂ.ಗೆ 4 ಡ್ರಿಂಕ್ಸ್ ಕೂಪನ್ ಹಾಗೂ 7,500 ರೂ.ಗೆ 8 ಡ್ರಿಂಕ್ಸ್ ಕೂಪನ್ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿತ್ತು.

ಗ್ರ್ಯಾಂಡ್ ಮಕ್ರ್ಯೂರಿ: ಲೈವ್ ಬ್ಯಾಂಡ್(ಫ್ಯಾಷನ್ ಮ್ಯೂಸಿಕ್ ಬ್ಯಾಂಡ್), ಜೋಡಿಗಳಿಗೆ 6,999 ರೂ., ಸಿಂಗಲ್ಸ್‍ಗೆ 4,999, ಹಾಗೂ 6-15 ವರ್ಷದೊಳಗಿನ ಮಕ್ಕಳಿಗೆ 1,300 ರೂ. ನಿಗದಿ ಪಡಿಸಿದ್ದು, ಆಹಾರ, ಡ್ರಿಂಕ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ರುಚಿ ದ ಪ್ರಿನ್ಸ್: ಲೈವ್ ಬ್ಯಾಂಡ್(ಫ್ಯಾಷನ್ ಮ್ಯೂಸಿಕ್ ಬ್ಯಾಂಡ್), ಗೇಮ್ಸ್, ಡಿಜೆ, ಡ್ಯಾನ್ಸ್ ಫ್ಲೂರ್(ಬೆಲ್ಲಿ ಡ್ಯಾನ್ಸ್, ಯುವಿ ಡ್ಯಾನ್ಸ್, ಫೈರ್ ಡ್ಯಾನ್ಸ್) ಆಯೋಜಿಸ ಲಾಗಿತ್ತು. ಜತೆಗೆ ಜೋಡಿಗಳಿಗೆ 2,999 ರೂ., ಸಿಂಗಲ್ಸ್‍ಗೆ (ಪುರುಷ)1,999 ಮತ್ತು (ಮಹಿಳೆ)1,499 ರೂ. ಹಾಗೂ 6-15 ವರ್ಷದೊಳಗಿನ ಮಕ್ಕಳಿಗೆ 999 ರೂ. ನಿÀಗದಿ ಪಡಿಸಿದ್ದು, ಆಹಾರ, ಡ್ರಿಂಕ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಲೀ ರುಚಿ: ಲೈವ್ ಬ್ಯಾಂಡ್(ಫ್ಯಾಷನ್ ಮ್ಯೂಸಿಕ್ ಬ್ಯಾಂಡ್), ಫ್ಯಾಷನ್ ಶೋ, ಗೇಮ್ಸ್, ಡಿಜೆ, ಡ್ಯಾನ್ಸ್ ಫ್ಲೂರ್(ಬೆಲ್ಲಿ ಡ್ಯಾನ್ಸ್, ಯುವಿ ಡ್ಯಾನ್ಸ್, ಫೈರ್ ಡ್ಯಾನ್ಸ್) ಆಯೋ ಜಿಸಲಾಗಿತ್ತು. ಜತೆಗೆ ಜೋಡಿಗಳಿಗೆ 5,499 ರೂ., ಸಿಂಗಲ್ಸ್‍ಗೆ (ಪುರುಷ)3,499 ಮತ್ತು (ಮಹಿಳೆ)2,599 ರೂ. ನಿಗದಿಪಡಿಸಿದ್ದು, ಆಹಾರ, ಡ್ರಿಂಕ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಲೋಬೋಸ್ ಕೋರ್ಟ್‍ಯಾರ್ಡ್: `ಲೈಫ್ ಈಶ್ ಎ ಬೀಚ್’ ಪರಿಕಲ್ಪನೆಯಲ್ಲಿ ಲೈವ್ ಬ್ಯಾಂಡ್(ಫ್ಯಾಷನ್ ಮ್ಯೂಸಿಕ್ ಬ್ಯಾಂಡ್), ಫ್ಯಾಷನ್ ಶೋ, ಗೇಮ್ಸ್, ಡಿಜೆ, ಡ್ಯಾನ್ಸ್ ಫ್ಲೂರ್(ಬೆಲ್ಲಿ ಡ್ಯಾನ್ಸ್, ಯುವಿ ಡ್ಯಾನ್ಸ್, ಫೈರ್ ಡ್ಯಾನ್ಸ್) ಆಯೋಜಿಸಲಾಗಿತ್ತು. ಜತೆಗೆ ಜೋಡಿಗಳಿಗೆ 5,499 ರೂ., ಸಿಂಗಲ್ಸ್‍ಗೆ (ಪುರುಷ)3,499 ಮತ್ತು (ಮಹಿಳೆ)2,599 ರೂ. ನಿಗದಿ ಪಡಿಸಿದ್ದು, ಆಹಾರ, ಡ್ರಿಂಕ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.