ಬೇಲೂರಿನಲ್ಲಿ ಕೋರೇಗಾಂವ್ ವಿಜಯೋತ್ಸವ ಆಚರಣೆ
ಹಾಸನ

ಬೇಲೂರಿನಲ್ಲಿ ಕೋರೇಗಾಂವ್ ವಿಜಯೋತ್ಸವ ಆಚರಣೆ

January 3, 2019

ಬೇಲೂರು: ಕೇವಲ 500 ಜನ ಮಹರ್ ಸೈನಿಕರು 28 ಸಾವಿರ ಪೇಶ್ವೆ ಸೈನಿಕ ರನ್ನು ಧ್ವಂಸ ಮಾಡಿ ಕೋರೇಗಾಂವ್ ಯುದ್ಧ ವನ್ನು ಗೆದ್ದಿರುವುದು ಪ್ರಪಂಚದ ಇತಿಹಾಸ ದಲ್ಲಿ ಅಪೂರ್ವವಾದದ್ದು ಎಂದು ಕರ್ನಾ ಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಹಾಸನ ಜಿಲ್ಲಾ ಪ್ರಧಾನ ಸಂಚಾ ಲಕ ಬಿ.ಎಲ್.ಲಕ್ಷ್ಮಣ್ ಹೇಳಿದರು.

201ನೇ ಕೋರೇಗಾಂವ್ ವಿಜಯೋ ತ್ಸವದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಮೇಣದ ಬತ್ತಿಗಳನ್ನು ಹಚ್ಚಿ ಭೀಮ ಕೋರೇಗಾಂವ್ ವೀರ ಯೋಧರಿಗೆ ಗೌರವ ಸಮರ್ಪಿಸಿ, ವಿಜಯೋತ್ಸವ ಆಚರಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಅಸ್ಪøಶ್ಯರು ಬದುಕುಳಿದು ಜೀವನ ನಡೆಸುತಿದ್ದಾರೆ ಎಂದರೆ ಅದಕ್ಕೆ ಭೀಮ ಕೋರೇಗಾಂವ್ ವೀರ ಯೋಧರೇ ಕಾರಣ ಎಂದರು.

ಇದೇ ಸಂದರ್ಭ ಭಾರತಕ್ಕೆ ಆಗಮಿಸಿದ್ದ ಬ್ರಿಟೀಷರ ವಿರುದ್ಧ ಪೇಶ್ವೆ ಸೈನ್ಯ ಯುದ್ಧದ ಸಿದ್ಧತೆಯಲ್ಲಿತ್ತು. ಈ ಸಂದರ್ಭದಲ್ಲಿ ಅಸ್ಪøಶ್ಯರ ನಾಯಕ ಸಿದ್ಧನಾಕ ಪೇಶ್ವೆ ರಾಜ ಬಾಜಿರಾ ಯನ ಹತ್ತಿರ ಹೋಗಿ ನಿಮ್ಮ ಪರವಾಗಿ ಬ್ರಿಟೀ ಷರ ವಿರುದ್ಧ ಯುದ್ಧ ಮಾಡುತ್ತೇವೆ. ನಮಗೆ ಸ್ವತಂತ್ರವಾಗಿ ಬದುಕಲು ಅವಕಾಶ ಕೊಡಿ ಎಂದಾಗ ರೊಚ್ಚಿಗೆದ್ದ ಬಾಜಿರಾಯ, ಸಿದ್ಧ ನಾಕನನ್ನು ಅವಮಾನಗೊಳಿಸಿ ಕಳುಹಿಸು ತ್ತಾನೆ. ಇಂತಹ ಸಂದರ್ಭದಲ್ಲಿ ಬ್ರಿಟೀಷರೊಂ ದಿಗೆ ಮಾತಕತೆ ನಡೆಸಿದ ಸಿದ್ಧನಾಕ ಹಾಗೂ 500 ಮಹರ್ ಸೈನಿಕರು ತಮ್ಮ ಹಕ್ಕು ಮತ್ತು ಉಳಿವಿಗಾಗಿ 28 ಸಾವಿರ ಪೇಶ್ವೆ ಸೈನಿಕರ ವಿರುದ್ಧ 1818ರ ಜನವರಿ 1ರಂದು ಭೀಮಾ ನದಿ ತೀರದ ಕೋರೇಗಾಂವ್‍ನಲ್ಲಿ ಬ್ರಿಟೀಷರ ಸೈನ್ಯದೊಂದಿಗೆ ಸತತವಾಗಿ 12 ಗಂಟೆಗಳ ಕಾಲ ವಿಶ್ರಾಂತಿ, ಆಹಾರ ನೀರಿನ ಅರಿವಿಲ್ಲದೆ ಘೋರವಾದ ಯುದ್ಧ ಮಾಡುತ್ತಾರೆ. ಈ ಯುದ್ಧದಲ್ಲಿ 22 ಮಹಾರ್ ಸೈನಿಕರು ವೀರ ಮರಣವನ್ನಪ್ಪಿ, ಕೆಲವರು ಗಾಯಗೊಂಡು ಅಭೂತಪೂರ್ವ ಗೆಲುವಿಗೆ ಕಾರಣರಾಗಿ ಪೇಶ್ವೆ ಸಾಮಾಜ್ಯವನ್ನು ಅಂತ್ಯಗೊಳಿಸು ತ್ತಾರೆ. ಈ ಕೋರೇಗಾಂವ್ ಯುದ್ಧವು ಅಸ್ಪø ಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿ ಸ್ಫೂರ್ತಿಯ ಸಂಕೇತವಾದ್ದ ರಿಂದ ಡಾ.ಬಿ.ಆರ್.ಅಂಬೇಡ್ಕರ್ ರವರು ಪ್ರಪಂಚದ ಯಾವ ಮೂಲೆಯಲ್ಲಿದ್ದರು ಜನವರಿ 1 ರಂದು ಮಾತ್ರ ಕೋರೇಗಾಂವ್ ನಲ್ಲಿರುವ ವಿಜಯ ಸ್ಥಂಬಕ್ಕೆ ಬಂದು ಗೌರವ ಸಮರ್ಪಿಸುತಿದ್ದರು. ಈ ಹಿನ್ನೆಲೆಯಲ್ಲಿ 2019ನೇ ಜನವರಿ 1ಕ್ಕೆ 201ನೇ ಕೋರೇಗಾಂವ್ ವಿಜ ಯೋತ್ಸವ ಆಚರಿಸುತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನ ಸಂಚಾಲಕ ಕೃಷ್ಣಯ್ಯ, ತಾಲೂಕು ಸಂ. ಸಂಚಾಲಕರಾದ ನಿಂಗರಾಜು, ಹೊಯ್ಸಳ, ಧರ್ಮಯ್ಯ, ಪ್ರವೀಣ್, ಪ್ರದೀಪ್, ಮಲ್ಲಿ ಕಾರ್ಜುನ್, ರುದ್ರೇಶ್, ಮಹೇಶ್, ಭದ್ರಯ್ಯ, ಕುಳ್ಳಿಬಾಬು, ಗಂಗಾಧರ್, ಜಗ ದೀಶ್, ಪುನೀತ್, ಚಂದ್ರಪ್ಪ, ಕುಮಾರ್, ಮಂಜುನಾಥ್, ಲಕ್ಷ್ಮಣ್, ಓಂಕಾರ್ ಇನ್ನಿತರರಿದ್ದರು. .

Translate »