ಶಾಸಕರ ಪ್ರದೇಶಾಭಿವೃದ್ಧಿಯಡಿ ಶಿಕ್ಷಣ, ಆರೋಗ್ಯಕ್ಕೂ ಹಣ ಮೀಸಲಿಡಲು ಸಿಎಂ ಆದೇಶ
ಮೈಸೂರು

ಶಾಸಕರ ಪ್ರದೇಶಾಭಿವೃದ್ಧಿಯಡಿ ಶಿಕ್ಷಣ, ಆರೋಗ್ಯಕ್ಕೂ ಹಣ ಮೀಸಲಿಡಲು ಸಿಎಂ ಆದೇಶ

June 14, 2019

ಬೆಂಗಳೂರು: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೂ ಹಣ ಮೀಸಲಿಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಆದೇಶಿಸಿ ದ್ದಾರೆ. ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತನಾಡಿದ ಅವರು, ಶಾಸಕರ ನಿಧಿ ಕೇವಲ ರಸ್ತೆ, ಕುಡಿಯುವ ನೀರು ಸೇರಿದಂತೆ ಕೆಲವೇ ನಿರ್ದಿಷ್ಟ ಯೋಜನೆಗಳಿಗೆ ವೆಚ್ಚವಾಗುತ್ತಿದೆ, ಇನ್ನು ಮುಂದೆ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ, ಸ್ಥಳೀಯ ಆಸ್ಪತ್ರೆಗಳ ಅಭಿವೃದ್ಧಿಗೆ ವೆಚ್ಚ ಮಾಡುವಂತೆ ಸೂಚಿಸಿದ್ದಾರೆ. ತುಳಿತಕ್ಕೆ ಒಳಗಾ ದವರು ಮತ್ತು ಶೋಷಿತ ವರ್ಗದವರಿಗೆ ದೇವ ರಾಜ ಅರಸು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಲು ಹೆಚ್ಚಿನ ಆಸಕ್ತಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವಸತಿ ಯೋಜನೆಗಳಿಗೆ ನಿರ್ದಿಷ್ಟ ಹಣ ನೀಡಿ ಒಂದೇ ವರ್ಷದಲ್ಲಿ ಸೂರು ನೀಡಬೇಕು, ಆರೋಗ್ಯ, ಶಿಕ್ಷಣದಂತಹ ಯೋಜನೆಗಳಿಗೆ ಅಗತ್ಯವಿರುವಷ್ಟು ಹಣ ವೆಚ್ಚ ಮಾಡಬೇಕು. ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಕೂಡಲೇ ಜಮೀನು ಗುರುತಿಸಬೇಕು.

ಎಲ್ಲ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ನಡೆಸಬೇಕು ಎಂದು ಆದೇಶಿಸಿದರು.

Translate »