ಐಎಂಎ ಕಚೇರಿಗೆ ಅಧಿಕೃತ ಬೀಗಮುದ್ರೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಕಾರು ಪತ್ತೆ
ಮೈಸೂರು

ಐಎಂಎ ಕಚೇರಿಗೆ ಅಧಿಕೃತ ಬೀಗಮುದ್ರೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಕಾರು ಪತ್ತೆ

June 14, 2019

ಬೆಂಗಳೂರು: ಐಎಂಎ ಹಗ ರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿ ಕೊಂಡಿರುವ ಎಸ್‍ಐಟಿ ತಂಡ ಅಧಿಕೃತ ವಾಗಿ ಐಎಂಎ ಕಚೇರಿ ಸೀಜ್ ಮಾಡಿದೆ. ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆ ಲರ್ಸ್ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದ್ದಾರೆ. ಐಎಂಎ ವಂಚನೆ ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆ ಎಸ್‍ಐಟಿ ಮಳಿಗೆಯನ್ನು ಸೀಜ್ ಮಾಡಿದೆ. ಇತ್ತ ಮನ್ಸೂರ್‍ಖಾನ್ ಕಾರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಸಿಸಿಬಿ ಪೆÇಲೀಸರು ಕೆಐ ಎಎಲ್‍ನಲ್ಲಿ ಕಾರು ವಶಕ್ಕೆ ಪಡೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಮನ್ಸೂರ್ ಕಾರು ಕೆಐಎಎಲ್ ನಲ್ಲಿ ಪತ್ತೆ ಆಗಿರುವು ದರಿಂದ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಅನುಮಾನ ವ್ಯಕ್ತವಾಗಿದೆ. ಲಭ್ಯವಾಗಿರುವ ಮಾಹಿತಿ ಅನ್ವಯ ಮನ್ಸೂರ್ ಖಾನ್ ಜೂ.6ರಂದು ಕೆಐಎಎಲ್‍ನಲ್ಲಿ ಕಾರು ಬಿಟ್ಟು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದ್ದು, ರೇಂಜ್ ರೋವಾರ್ ಕಾರನ್ನು ನಿಲ್ಲಿಸಿ ಬಹಳ ದಿನಗಳಾದರು ಕಾರು ತೆಗೆಯಲು ಯಾರೂ ಬಾರದ ಹಿನ್ನೆಲೆ ವಿಮಾನ ನಿಲ್ದಾಣದ ಅಧಿಕಾರಿ ಗಳು ಪರಿಶೀಲನೆ ನಡೆ ಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಕಾರನ್ನ ವಶಕ್ಕೆ ಪಡೆದಿರುವ ಸಿಸಿಬಿ ಪೆÇಲೀಸರು ಪರಿ ಶೀಲನೆ ನಡೆಸಿದ್ದಾರೆ. ಮನ್ಸೂರ್ ಖಾನ್ ವಿದೇಶಕ್ಕೆ ತೆರಳಿದ್ದಾನೆ ಎಂಬ ಮಾತಿಗೆ ಸದ್ಯ ಸಾಕಷ್ಟು ಪುಷ್ಟಿ ನೀಡಿದ್ದು, ಇದೀಗ ಕಾರು ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆತ ನಿಜಕ್ಕೂ ವಿದೇಶಕ್ಕೆ ತೆರಳಿದ್ದಾನಾ ಅಥವಾ ಬೇರೆ ಕಡೆ ತೆರಳಿದ್ದಾನಾ ಎಂಬದನ್ನು ಪೆÇಲೀಸರು ಖಚಿತಪಡಿಸಿಕೊಳ್ಳಲು ತನಿಖೆ ಚುರುಕುಗೊಳಿಸಿದ್ದಾರೆ.

Translate »