ಶಬರಿಮಲೆ ದೇವಸ್ಥಾನದ ಪರಂಪರೆ ರಕ್ಷಣೆಗೆ ಕಾನೂನು ಮಾಡಲಿ ರಾಷ್ಟ್ರೀಯ ಹಿಂದೂ ಆಂದೋಲನ ಆಗ್ರಹ
ಹಾಸನ

ಶಬರಿಮಲೆ ದೇವಸ್ಥಾನದ ಪರಂಪರೆ ರಕ್ಷಣೆಗೆ ಕಾನೂನು ಮಾಡಲಿ ರಾಷ್ಟ್ರೀಯ ಹಿಂದೂ ಆಂದೋಲನ ಆಗ್ರಹ

December 1, 2018

ಹಾಸನ: ಶಬರಿಮಲೆ ದೇವ ಸ್ಥಾನದ ಧರ್ಮಪರಂಪರೆಗಳ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕಾನೂನು ಮಾಡಿ, ಭಕ್ತರ ಮೇಲಿನ ಅಪರಾಧಗಳನ್ನು ತಕ್ಷಣ ರದ್ದು ಮಾಡಬೇಕು ಮತ್ತು ಹಿಂದು ಗಳ ಭಾವನೆ ಕೆರಳಿಸುವ ವೀರಮ್ಮಾದೇವಿ ಚಲನ ಚಿತ್ರದ ಚಿತ್ರಿಕರಣವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋ ಲನದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದರು.

ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ದೇವ ಸ್ಥಾನದೊಳಗೆ ಪ್ರವೇಶ ಮಾಡಬಹುದು ಎಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ. ಸರ್ವೋಚ್ಛ ನ್ಯಾಯಾ ಲಯದ ತೀರ್ಪಿನ ನಂತರ ಕೇರಳದ ತಿರುವನಂತಪುರಂ ಕೊಲ್ಲಮ್, ಅಲಾಪ್ಪು, ಪಠಾನಮತಿಟ್ಟಾ, ಎರ್ನಾಕುಲಂ, ಮತ್ತು ಪಾಲಕ್ಕಾಡ್‍ನಲ್ಲಿ ಅನೇಕ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಮತ್ತು ಪುರುಷರು ಮೆರವ ಣಿಗೆ ಆಯೋಜಿಸಲಾಗಿತ್ತು. ಹಾಗೂ ದೇವಾ ಲಯದ ಒಳಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದರು. ಪ್ರತಿಭಟನೆ ಮಾಡಿದ 3500ಕ್ಕೂ ಹೆಚ್ಚು ಭಕ್ತರನ್ನು ಕೇರಳ ಪೊಲೀಸರು ಬಂಧಿಸಿ ಅವರ ಮೇಲೆ ಮೊಕ ದ್ದಮೆ ದಾಖಲಿಸಿದ್ದಾರೆ. ಧರ್ಮಪರಂಪರೆಯ ರಕ್ಷಣೆಗಾಗಿ ಪ್ರತಿಭಟನೆ ಮಾಡುವ ಭಕ್ತರ ಮೇಲೆ ಪ್ರಕರಣ ದಾಖಲಿಸುವುದು ಹಾಗೂ ಅವರನ್ನು ಬಂಧಿಸುವುದು ದೌರ್ಭಾಗ್ಯ. ಈ ಪ್ರಕರಣದಲ್ಲಿ ಭಕ್ತರ ಮೇಲೆ ದಾಖ ಲಿಸಿದ ಪ್ರಕರಣಗಳನ್ನು ತಕ್ಷಣ ರದ್ದು ಮಾಡಬೇಕು. ಶಬರಿಮಲೆ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆಗಾಗಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಕಾನೂನು ಮಾಡ ಬೇಕು ಎಂದು ಒತ್ತಾಯಿಸಿದರು.

ಸನ್ನಿಲಿಯೊನ್ ನಟಿಸುತ್ತಿರುವ ‘ವೀರಮಾ ದೇವಿ” ಚಲನಚಿತ್ರದ ಚಿತ್ರೀಕರಣವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ದಕ್ಷಿಣ ಭಾರತದ ವೀರಾಂಗನೆ ‘ವೀರಮಾದೇವಿ’ಯ ಜೀವನಾಧಾರಿತ ಪ್ರದರ್ಶನಗೊಳ್ಳಲಿರುವ ಚಲನಚಿತ್ರದಲ್ಲಿ ಕೆನಡದ ಪ್ರಜೆಯಾಗಿರುವ ಪೋರ್ನ್ ನಟಿ ಸನ್ನಿ ಲಿಯೋನ್ ಹಿಂದೂ ಸಾಮ್ರಾಜ್ಯ ರಾಣಿ ವೀರಮಾದೇವಿಯ ಪಾತ್ರವನ್ನು ನಿರ್ವಹಿಸುತ್ತಿರುವುದು ಅಕ್ಷಮ್ಯ ಎಂದರು.

ಈ ಚಲನಚಿತ್ರದ ಚಿತ್ರಿಕರಣ ಈಗ ಪ್ರಾರಂಭವಾಗಿದ್ದು, ಚಲನಚಿತ್ರವು ಹಿಂದೂ ಗಳ ಭಾವನೆಯನ್ನು ಕೆರಳಿಸುತ್ತಿವೆ. ಆದ್ದರಿಂದ ಕೇಂದ್ರ ಹಾಗೂ ಕರ್ನಾಟಕ ಸರ್ಕಾರ ಸನ್ನಿ ಲಿಯೋನ ನಟಿಸುತ್ತಿರುವ `ವೀರಮಾ ದೇವಿ’ ಚಲನಚಿತ್ರದ ಚಿತ್ರೀಕರಣವನ್ನು ತಕ್ಷಣವೇ ಸ್ಥಗಿತಗೊಳುಬೇಕು. ಚಲನ ಚಿತ್ರದ ಚಿತ್ರೀಕರಣಕ್ಕಾಗಿ ನೀಡಲಾಗುವ ಎಲ್ಲ ಅನುಮತಿಗಳನ್ನು ರದ್ದುಗೊಳಿಸ ಬೇಕು. ಒಂದು ವೇಳೆ ಸರಕಾರದ ಮಧ್ಯ ಪ್ರವೇಶ ಮಾಡದೇ ಇದ್ದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ರಾಷ್ಟ್ರೀಯ ಹಿಂದೂ ಆಂದೋಲನದ ಸುಜಾತ, ಕಲಾ, ವೀಣಾ, ನವೀನ್ ಇತರರಿದ್ದರು.

Translate »