ಹಾಸನ: ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್ 5 ರಂದು ಹಾಸನದಿಂದ ಮಾಹಾರಾಷ್ಟ್ರದ ದಾದರ್ ಯಾತ್ರೆ ತೆರಳಲಾಗುವುದು ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ನಿರ್ವಾಹಣಯ್ಯ ಕೆ.ಎಸ್. ಕೆಲವತ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತ ನಾಡಿ, ಡಿ.5ರಂದು ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಮಾಹಾರಾಷ್ಟ್ರದ ದಾದರ್ ನಲ್ಲಿ ನಡೆಯುವ ಯಾತ್ರೆಗೆ ರಾಷ್ಟ್ರಾದ್ಯಂತ, ರಾಜ್ಯಾದ್ಯಂತ ಜನ ಸಾಗರ ಸೇರಲಿದೆ. ಈ ಯಾತ್ರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ರಿಪಬ್ಲಿಕ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಆನಂದರಾಜ್ ನೇತೃತ್ವದಲ್ಲಿ ಯಾತ್ರಾ ಕಾರ್ಯಕ್ರಮ ಜರುಗಲಿದೆ ಎಂದರು.
ರಾಜ್ಯ ಅಧ್ಯಕ್ಷ ಜಿಗಣಿ ಶಂಕರ್‍ರವರ ನೇತೃತ್ವದಲ್ಲಿ ಮೈಸೂರು ವಿಭಾಗದ ಹಾಸನ, ಕೊಡಗು, ಚಿಕ್ಕಮಗಳೂರು, ಚಾಮ ರಾಜನಗರ ಈ ಪ್ರಾಂತ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದಾದರ್‍ಗೆ ಪ್ರಯಾಣ ಬೆಳೆಸಲಿ ದ್ದಾರೆ. ಮಹಾ ಪರಿನಿಬ್ಬಾಣ ದಿನದ ಅಂಗ ವಾಗಿ ಹಾಸನ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಯನ್ನು ಸ್ವಚ್ಛಗೊಳಿಸಿ ಕ್ಯಾಂಡಲ್ ಹಚ್ಚಿ ದೀಪ ಬೆಳಗಿಸಿ 2018 ಡಿಸೆಂಬರ್ 5 ರಂದು ಚಾಲುಕ್ಯ ಎಕ್ಸ್‍ಪ್ರೆಸ್ ರೈಲು ಮಾರ್ಗ ವಾಗಿ ಬೆಳಿಗ್ಗೆ 8 ಗಂಟೆಗೆ ಅರಸೀಕೆರೆಯಿಂದ ಮಾಹಾರಾಷ್ಟ್ರದ ದಾದರ್‍ನಲ್ಲಿ ಜರುಗುವ ಯಾತ್ರೆಗೆ ಹೊರಡುವುದಾಗಿ ಹೇಳಿದರು. ಈ ಯಾತ್ರೆಗೆ ಎಲ್ಲಾ ಧಮ್ದ ಬುದ್ದಿ ಜೀವಿ ಗಳು, ಹರಿಕಾರರು, ಸಂಘ ಪರಿವಾರದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಲು ಮನವಿ ಮಾಡಿದರು.
2019 ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಸ್ಪರ್ದೆ ಮಾಡಲಿದ್ದಾರೆ. ಆಂದ್ರ ಮತ್ತು ತೆಲಂಗಣ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾ ವಣೆಗೆ ಅಭ್ಯರ್ಥಿಗಳನ್ನು ರಿಪಬ್ಲಿಕ್ ಸೇನೆವತಿ ಯಿಂದ ಆನಂದರಾಜ್ ಅಂಬೇಡ್ಕರ್ ಮತ್ತು ಜಿಗಣಿ ಶಂಕರ್ ನೇತೃತ್ವದಲ್ಲಿ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುವುದಾಗಿ ಹೇಳಿದರು.
ಬೇಲೂರಿನಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ 2018 ಡಿಸೆಂಬರ್ 1 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1ರ ವರೆಗೂ ಜಿಲ್ಲಾ ಘಟಕದಿಂದ ಸ್ವಚ್ಛತೆ ಮಾಡಲಾಗು ವುದು. ಅರಸೀಕೆರೆ ಅಂಬೇಡ್ಕರ್ ವೃತ್ತದ ಸ್ವಚ್ಛತೆಯನ್ನು ಅಂದು ಸಂಜೆ 5 ರಿಂದ 7 ಗಂಟೆಯವರೆಗೂ, ಗೊರೂರು ಅಂಬೇಡ್ಕರ್ ವೃತ್ತವನ್ನು ಡಿಸೆಂಬರ್ 2 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೂ, ಅಂದು ಸಂಜೆ 5 ರಿಂದ 7 ಗಂಟೆಯ ವರೆಗೂ ಅರಕಲಗೂಡು ಅಂಬೇಡ್ಕರ್ ವೃತ್ತ ಸ್ವಚ್ಛ ಮಾಡುವುದು. ಡಿಸೆಂಬರ್ 3 ರಂದು ಹೊಳೆನರಸೀಪುರ ಅಂಬೇಡ್ಕರ್ ವೃತ್ತವನ್ನು ಸ್ವಚ್ಛ, ಅಂದು ಸಂಜೆ 5 ರಿಂದ 7ರ ವರೆಗೂ ಅತ್ನಿ ಅಂಬೇಡ್ಕರ್ ವೃತ್ತ ಸ್ವಚ್ಛತೆ, ಡಿಸೆಂಬರ್ 4 ರಂದು ಹಾಸನದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಅಂಬೇಡ್ಕರ್ ವೃತ್ತದವನ್ನು ಬೆಳಿಗ್ಗೆ 11 ಗಂಟೆಗೆ ಮಾಡುವುದಾಗಿ ವಿವರ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಡಾ: ಬಿ.ಆರ್. ಅಂಬೇಡ್ಕರ್‍ರವರ ಹೆಸರನ್ನು ನಾಮಕರಣ ಮಾಡಬೇಕು, ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿಂದುಳಿದ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾ ಭ್ಯಾಸ ಮಾಡಲು ಹಾಸ್ಟೇಲ್, ಊಟ, ವಸತಿ ಇಲ್ಲದೆ ಪರಿತಪಿಸಬೇಕಾಗಿದೆ. ಹಿಂದಿನ ಸರಕಾರ ವಿದ್ಯಾರ್ಥಿಗಳಿಗೆ ಯಾವ ಸೌಲಭ್ಯವನ್ನು ಒದಗಿಸಿದೇ ಅದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ, ಚನ್ನರಾಯಪಟ್ಟಣ, ಆಲೂರು ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಜಿಲ್ಲಾ ಗೌರವಾಧ್ಯಕ್ಷ ಡಿ. ಗೋಪಾಲ್ ಡಿ.ಎಂ.ಹಳ್ಳಿ, ಕಾನೂನು ಸಲಹೆಗಾರ ಬಿ.ಆರ್. ಜಗದೀಶ್, ಕೆ.ಆರ್.ಎಸ್. ಜಿಲ್ಲಾ ಉಪಾಧ್ಯಕ್ಷ ಹೆಚ್.ಟಿ. ಸೋಮಣ್ಣ ಇತರರು ಇದ್ದರು.