ಹಾಸನ: ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಪುರಂ ಬಳಿ ಕುವೆಂಪು ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಬಹುಮಹಡಿ ಕಟ್ಟಡಕ್ಕೆ ಕೊನೆಗೆ ಬೀಗ ಮುದ್ರೆ ಬಿದ್ದಿದ್ದು, ಕಟ್ಟಡ ಮಾಲೀ ಕರಿಗೆ ಎಚ್ಚರಿಕೆ ಗಂಟೆ ಶುರುವಾಗಿದೆ.
ಇಂದು ಮುಂಬೈ ಉದ್ದೆಮಿ ಬೇಲೂರೇ ಗೌಡ ಅವರ ಐಶ್ವರ್ಯ ಹೊಟೇಲ್ ಕಟ್ಟಡ ಒತ್ತುವರಿ ತೆರವು ಹಿನ್ನೆಲೆ ನಗರಸಭೆ ಆಯುಕ್ತ ಪರಮೇಶ್, ಸಿಬ್ಬಂದಿಯೊಂದಿಗೆ ತೆರಳಿ ಕಟ್ಟಡದ ತೆರವಾಗಬೇಕಾದ ಜಾಗ ಗುರುತು ಮಾಡಿದರು. ಹೊಟೇಲ್ ಕಟ್ಟಡ ನಿರ್ಮಾಣ ವೇಳೆ ನಗರಸಭೆಯಿಂದ 1,700 ಚದರ ಅಡಿಗೆ ಅನುಮತಿ ಪಡೆದು, ನಿಯಮ ಉಲ್ಲಂಘಿಸಿ 7,000 ಚದರ ಅಡಿಯಷ್ಟು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದರಿಂದ ನಿತ್ಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾ ಗುತ್ತಿದ್ದು, ವಾಹನ ದಟ್ಟಣೆ ಏರ್ಪಡುತ್ತಿತ್ತು. ಅಲ್ಲದೆ ಪಾದಚಾರಿಗಳ ಸಂಚಾರಕ್ಕೂ ತೀವ್ರ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಹಿಂದೆಯೂ ಸಹ ಸೂಚನೆ ನೀಡಿದ್ದರೂ ಸಹ ಒತ್ತುವರಿ ತೆರವು ಮಾಡಿರಲಿಲ್ಲ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಒತ್ತುವರಿ ತೆರ ವಿಗೆ ಇಂದು ಅಧಿಕಾರಿ ಗಳು ಕಟ್ಟಡಕ್ಕೆ ಬೀಗ ಮುದ್ರೆ ಹಾಕಿದರು.
ಇಂದು ಬೆಳಿಗ್ಗೆ ಐಶ್ವರ್ಯ ಹೊಟೇಲ್‍ಗೆ ಜೆಸಿಬಿಯೊಂದಿಗೆ ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿ ಜೊತೆ ಆಗಮಿಸಿ ಕಟ್ಟಡಕ್ಕೆ ನೀಡಲಾಗಿದ್ದ ನೀರಿನ ಸಂಪರ್ಕ ಹಾಗೂ ಯುಜಿಡಿ ಸಂಪರ್ಕ ಕಡಿತಗೊಳಿಸಿದರು. ಬಳಿಕ ನಗರಸಭೆಯ ಅಧಿಕಾರಿಗಳು ಈ ಕಟ್ಟಡಕ್ಕಿದ್ದ ಎಲ್ಲಾ ಪ್ರವೇಶ ದ್ವಾರಗಳನ್ನು ಬೀಗ ಮುದ್ರೆ ಹಾಕಿ ಬಂದ್ ಮಾಡಿದರು.
ಒತ್ತುವರಿಯಾಗಿರುವ ಕಟ್ಟಡದ ಭಾಗ ನೆಲಸಮ ಮಾಡುವವರೆಗೆ ಕಟ್ಟಡದ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಸೂಚನಾ ಫಲಕ ಅಳವಡಿಸಿದ್ದು, ಸೂಚನಾ ಪ್ರತಿಯನ್ನು ಆಯುಕ್ತರು ಪೊಲೀಸರಿಗೆ ನೀಡಿದರು.ಒಂದು ವೇಳೆ ಕಟ್ಟಡದ ಮಾಲೀಕರು ಅತಿಕ್ರಮ ಪ್ರವೇಶ ಮಾಡಿದರೆ ಅಥವಾ ವಾಣಿಜ್ಯ ವ್ಯವಹಾರಗಳಿಗೆ ಕಟ್ಟಡ ಬಳಸಿ ಕೊಂಡರೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬಹುದಾಗಿದೆ.
ಸದ್ಯ ಕಟ್ಟಡ ತೆರವಿಗೆ ಸುಧಾರಿತ ತಂತ್ರ ಜ್ಞಾನದ ಯಂತ್ರಗಳ ಅಗತ್ಯವಿದ್ದು, ಯಂತ್ರ ಗಳು ಬಂದ ನಂತರ ಕಟ್ಟಡ ಒತ್ತುವರಿ ಭಾಗ ತೆರವು ಕಾರ್ಯಾಚರಣೆ ಮುಂದುವರೆ ಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.