ತಂಬಾಕಿನ ದುಷ್ಪರಿಣಾಮದ ಜಾಗೃತಿ ಅಗತ್ಯ: ನ್ಯಾಯಾಧೀಶ ಎನ್.ಆರ್.ಚೆನ್ನಕೇಶವ ಅಭಿಪ್ರಾಯ, ವಿವಿಧೆಡೆ ತಂಬಾಕು ರಹಿತ ದಿನಾಚರಣೆ
ಹಾಸನ

ತಂಬಾಕಿನ ದುಷ್ಪರಿಣಾಮದ ಜಾಗೃತಿ ಅಗತ್ಯ: ನ್ಯಾಯಾಧೀಶ ಎನ್.ಆರ್.ಚೆನ್ನಕೇಶವ ಅಭಿಪ್ರಾಯ, ವಿವಿಧೆಡೆ ತಂಬಾಕು ರಹಿತ ದಿನಾಚರಣೆ

June 1, 2018

ಹಾಸನ: ‘ತಂಬಾಕಿನ ಸೇವನೆಯಿಂದ ಉಂಟಾಗುವ ದುಷ್ಪರಿ ಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ ಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎನ್.ಆರ್. ಚೆನ್ನಕೇಶವ ಹೇಳಿದರು.

ನಗರದ ಜಿಲ್ಲಾ ಕಾರಾಗೃದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ನಡೆದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಸಾವನ್ನಪ್ಪುತ್ತಿ ದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಯರೂ ಕೂಡ ತಂಬಾಕು ವ್ಯಸನೀಯರಾಗಿ ರುವುದು ಆತಂಕದ ವಿಚಾರವಾಗಿದ್ದು, ತಂಬಾಕು ಸೇವನೆಯಿಂದ ಮುಕ್ತರಾಗು ವಂತೆ ಜಾಗೃತಿ ಮೂಡಿಸುವ ಕೆಲಸವಾಗ ಬೇಕು ಎಂದು ತಿಳಿಸಿದರು.

ತಂಬಾಕಿನಲ್ಲಿ ಕ್ಯಾನ್ಸರ್ ಕಾರಕ ವಸ್ತು ಗಳು ಇರುವುದರಿಂದ ಇದು ಮನುಷ್ಯನ ದೇಹದಲ್ಲಿ ಸೇರಿ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತದೆ. ಇದರಿಂದ ವಿಶ್ವದಲ್ಲಿ 6 ಬಿಲಿಯನ್‍ನಷ್ಟು ಜನರು ಸಾವನ್ನ ಪ್ಪುತ್ತಿದ್ದಾರೆ. ಈ ಪೈಕಿ ಧೂಮಪಾನದಿಂದ ಮೃತ ಪಟ್ಟವರೇ ಹೆಚ್ಚು. ದಕ್ಷಿಣ ಆಫ್ರಿಕಾ ಧೂಮ ಪಾನಿಗಳ ತವರೂರಾಗಿ ಪರಿಣಮಿ ಸಿದೆ. ಯೂರೋಪ್, ಉತ್ತರಅಮೆರಿಕ, ಉಗಾಂಡಾ, ಕೀನ್ಯಾ ಇತರೆ ದೇಶಗಳಲ್ಲಿ ಧೂಮಪಾನಿ ಗಳ ಸಂಖ್ಯೆ ಹೆಚ್ಚಾಗಿದೆ ಎಂದರು.

ತಂಬಾಕು ವ್ಯಸನದಿಂದ ದೂರವಾದ 20 ನಿಮಿಷದಲ್ಲಿ ರಕ್ತದೊತ್ತಡ ಕಡಿಮೆ ಯಾಗುತ್ತದೆ. ಹೃದಯ ಬಡಿತ ಸ್ಥಿಮಿತಕ್ಕೆ ಬರುತ್ತದೆ. 12 ಗಂಟೆ ನಂತರ ರಕ್ತದಲ್ಲಿ ಕಬ್ಬಿಣದ ಅಂಶ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮೂರು ವಾರಗಳಲ್ಲಿ ಶ್ವಾಸಕೋಶ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. 9 ತಿಂಗಳಲ್ಲಿ ಕೆಮ್ಮು ಮತ್ತು ವೇಗದ ಉಸಿರಾಟ ಹತೋಟಿಗೆ ಬರುತ್ತದೆ ಎಂದು ಮಾಹಿತಿ ನೀಡಿದರು.

ತಂಬಾಕು ವ್ಯಸನದಿಂದ ಮುಕ್ತರಾಗಿ ಸುವ ಉದ್ದೇಶದಿಂದ ಸರ್ಕಾರ ತಂಬಾಕು ಪ್ಯಾಕೇಟ್ ಮೇಲೆ ಕ್ಯಾನ್ಸರ್ ಸಂಬಂಧಿತ ಚಿತ್ರವನ್ನು ದೊಡ್ಡದಾಗಿ ಮುದ್ರಿಸಲಾಗು ತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಗರಿಷ್ಠ ಪ್ರಮಾಣದ ದಂಡ ವಿಧಿಸ ಲಾಗುತ್ತಿದೆ. ಬಿಡಿ-ಬಿಡಿಯಾಗಿ ಸಿಗರೇಟ್ ಮಾರಾಟ ಮಾಡುವುದಕ್ಕೆ ನಿಷೇಧ ಹೇರ ಲಾಗಿದೆ ಎಂದು ತಿಳಿಸಿದರು. ಈ ವೇಳೆ ಪ್ರಾಧ್ಯಾಪಕ ಡಾ.ಸಿ.ಎನ್. ಜಗದೀಶ್ ಅವರು, ತಂಬಾಕಿನಿಂದಾಗುವ ದುಷ್ಪರಿಣಾ ಮಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಸಿ.ಕೆ.ಬಸವರಾಜ್, ವಕೀಲ ಸಂಘದ ಅಧ್ಯಕ್ಷ ಎಂ.ಡಿ.ವೆಂಕಟೇಶ್, ಕಾರ್ಯದರ್ಶಿ ಎಂ.ಕೆ.ಧರಣಿ, ಕಾರಾಗೃಹ ಅಧೀಕ್ಷಕ ಓಬಳೇಶಪ್ಪ, ವಕೀಲರಾದ ಜಿ.ಎನ್. ಸುಗುಣ, ಮಂಜೇಗೌಡ ಹಾಜರಿದ್ದರು.

ಬೇಲೂರು ವರದಿ: ಪಟ್ಟಣದ ನ್ಯಾಯಾ ಲಯದ ಆವರಣದಲ್ಲಿ ಗುರುವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶಶಿಧರ್ ಎಂ.ಗೌಡ ಅವರು ಉದ್ಘಾಟಿಸಿದರು.

ಈ ವೇಳೆ ಸಿವಿಲ್ ನ್ಯಾಯಾಧೀಶ ಸಿ.ನಾಗೇಶ್ ಮಾತನಾಡಿ, ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಕೇವಲ ಆಚರಣೆ ಮಾಡಿದರೆ ಸಾಲದು ಅದನ್ನು ಪ್ರತಿಯೊಬ್ಬರೂ ಅರಿತು ಜಾಗೃತರಾಗಬೇಕು. ತಂಬಾಕು ಸೇವನೆಯಿಂದ ದೂರವಾಗಬೇಕು. ಆರೋಗ್ಯವಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ರೈತರು ಬೆಳೆದ ಪದಾರ್ಥಗಳಿಗೆ ಬೆಲೆ ಇಲ್ಲದಿದ್ದರೂ ಸಹ ತಂಬಾಕು ಉತ್ಪನ್ನ ಗಳಿಗೆ ಹಾಗೂ ತಂಬಾಕುಗಳಿಗೆ ದುಬಾರಿ ಬೆಲೆ ನೀಡಿ ಕೂಲಿ ಕಾರ್ಮಿಕರು ಹಾಗೂ ಬಡ ಜನರು ಇದಕ್ಕೆ ದಾಸರಾಗಿ ಬಲಿಯಾಗು ತ್ತಿರುವುದು ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಕೀಲ ಸಂಘದ ಅಧ್ಯಕ್ಷ ರತೀಶ್ ಮಾತ ನಾಡಿ, ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ 70ರಷ್ಟು ಜನರು ತಂಬಾಕು ವ್ಯಸನೀಯರಾಗುತ್ತಿದ್ದಾರೆ. ಇದ ರಿಂದಾಗಿ ಪರಸರ ನಾಶವಾಗುವುದಲ್ಲದೆ ತಮ್ಮ ಆರೋಗ್ಯವನ್ನು ಹಾಳುಮಾಡಿ ಕೊಳ್ಳುತ್ತಿದ್ದಾರೆ ಎಂದÀರು. ಕಾರ್ಯಕ್ರಮ ದಲ್ಲಿ ವೈದ್ಯ ಡಾ.ಹರೀಶ್ ಬಾಬು, ವಕೀಲ ಸಂಘದ ಕಾರ್ಯದರ್ಶಿ ಸಿದ್ದೇಗೌಡ, ವಕೀಲರಾದ ಮೋತಿಲಾಲ್ ಚೌದರಿ, ಕುಮಾರ್, ಜಿ.ಸಿ.ಪುಟ್ಟಸ್ವಾಮಿಗೌಡ, ಚಂದ್ರು ಹಾಜರಿದ್ದರು.

Translate »