ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಸಲಹೆ: ವನ ಮಹೋತ್ಸವಕ್ಕೆ ಚಾಲನೆ ನೀಡಿದ ಸಾಲು ಮರದ ತಿಮ್ಮಕ್ಕ
ಹಾಸನ

ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಸಲಹೆ: ವನ ಮಹೋತ್ಸವಕ್ಕೆ ಚಾಲನೆ ನೀಡಿದ ಸಾಲು ಮರದ ತಿಮ್ಮಕ್ಕ

June 1, 2018

ಹಾಸನ: ‘ಗಿಡ, ಮರಗಳು ಇದ್ದರೇ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿ, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಪರಿಸರ ಕಾಳಜಿ ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಮುಂದಾಗಬೇಕು’ ಎಂದು ಪರಿಸರವಾದಿ ಸಾಲುಮರದ ತಿಮ್ಮಕ್ಕ ಸಲಹೆ ನೀಡಿದರು.

ನಗರದ ಕೆ.ಆರ್.ಪುರಂನಲ್ಲಿರುವ ಮಣಿ ಆಸ್ಪತ್ರೆಯಲ್ಲಿ ಗುರುವಾರ ಆಸ್ಪತ್ರೆಯ 12ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಶ್ವ ಪರಿಸರ ದಿನಾಚರಣೆ, ಗರ್ಭಿಣಿ ಯರ ತೀವ್ರ ನಿಗಾ ಘಟಕ ಉದ್ಘಾಟನೆ, ಆರೋಗ್ಯೋತ್ಸವ ಹಾಗೂ ವನಮಹೋ ತ್ಸವ ಕಾರ್ಯಕ್ರಮಗಳನ್ನು ಗಿಡಕ್ಕೆ ನೀರೆರೆ ಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಿಡ, ಮರಗಳು ಹೆಚ್ಚು ಬೆಳೆದರೆ ಉತ್ತಮ ಮಳೆಯಾಗುತ್ತದೆ. ಇದರಿಂದ ಉತ್ತಮ ಪರಿಸರ ನಿರ್ಮಾಣವಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಖಾಸಗಿಕರಣದಿಂದ ಮರಗಳನ್ನು ಕತ್ತರಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಮಳೆ ಕಡಿಮೆಯಾಗಿ ನೀರಿನ ತತ್ವರ ಉಂಟಾ ಗಿದೆ. ರೈತರು ಬೆಳೆ ನಷ್ಟ ಅನುಭವಿಸು ತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ವಿವಾಹವಾಗಿ 25 ವರ್ಷವಾ ದರೂ ಮಕ್ಕಳು ಆಗಲಿಲ್ಲ. ಆಗ ನಾನು ಗಿಡ ಗಳನ್ನು ನೆಟ್ಟು ಅವುಗಳನ್ನೇ ನನ್ನ ಮಕ್ಕಳಂತೆ ಪೋಷಿಸಿದೆ. ಅದರಂತೆ ಗಿಡಗಳು ಮರ ಗಳಾಗಿ ಬೆಳೆಯಿತು. ಉತ್ತಮ ಪರಿಸರ ನಿರ್ಮಾಣವಾಯಿತು’ ಎಂದು ತಮ್ಮ ಜೀವನದ ಅನುಭವನ್ನು ಹಂಚಿಕೊಂಡರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಆರೋಗ್ಯ ಹದಗೆಟ್ಟರೇ ಆಸ್ಪತ್ರೆಗೆ ಹೋಗುತ್ತೇವೆ. ಆದರೆ, ಆಸ್ಪತ್ರೆಗಳು ಖಾಯಿಲೆಗೆ ಚಿಕಿತ್ಸೆ ನೀಡುತ್ತದೆ. ಹೊರತು ಆರೋಗ್ಯ ಕಾಪಾಡಿ ಕೊಳ್ಳಲು ಉತ್ತಮ ಪರಿಸರ ನೀಡುವುದಿಲ್ಲ. ಅದಕ್ಕೆ ಪೂರಕವಾದ ಪರಿಸರ ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಸ್ವಾತಂತ್ರ್ಯ ಬಂದು 70ವರ್ಷವಾದರೂ ಸಾಂಕ್ರ್ರಾಮಿಕ ರೋಗ ತಡೆಗಟ್ಟುವಲ್ಲಿ ನಾವು ವಿಫಲರಾಗಿದ್ದೇವೆ. ಉತ್ತಮ ಆರೋಗ್ಯ ಲಭಿಸಬೇಕಾದರೆ ಅಗತ್ಯವಿರುವಷ್ಟು ಗಿಡನೆಟ್ಟು ಬೆಳೆಸಬೇಕು. ಕುಡಿಯಲು ಉತ್ತಮ ನೀರು, ಒಳ್ಳೆಯ ಗಾಳಿ, ಸಮತೋಲನ ಪರಿಸರ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯದಿಂದ ವಿಷ ಅನಿಲ ಹೆಚ್ಚುತ್ತಿದೆ. ಶುದ್ಧ ನೀರು ದೊರೆಯದಿ ದ್ದರೂ ಕುದಿಸಿದ ನೀರನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಉತ್ತಮ ಪರಿಸರಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ದಲ್ಲಿ ರೋಟರಿ ಕ್ಲಬ್‍ನ ಶಿವಕುಮಾರ್, ಡಿ.ಮೋಹನ್, ರಮಾನಂದ್, ಮಣಿ ಆಸ್ಪತ್ರೆಯ ಸೌಮ್ಯರಾಣಿ, ಯತೀಶ್‍ಕುಮಾರ್, ಪರಿಸರ ಸೇವಕ ಬಳ್ಳೂರು ಉಮೇಶ್, ವೈದ್ಯ ರಾದ ಡಾ.ರಾಜಲಕ್ಷ್ಮಿ, ಡಾ.ದಿನೇಶ್ ಹಾಜರಿದ್ದರು.

Translate »