ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳ ಹೊಡೆ ಯುವುದನ್ನು ಕೇಳಿದ್ದೇವೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳ ರೆಕ್ಕೆ ಕತ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರೀಕ್ಷೆಯಂತೆ ಅತಂತ್ರ ವಿಧಾನಸಭೆ ಸೃಷ್ಟಿ ಯಾದರೆ, ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಯಾವುದರ ಜೊತೆ ಹೊಂದಾಣ ಕೆ ಮಾಡಿ ಕೊಂಡರೂ ಅದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಗಿರಬೇಕು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಥವಾ ಯಡಿಯೂರಪ್ಪ ನವರು ಮುಖ್ಯಮಂತ್ರಿಗಾದಿಗೆ ಏರಬಾರದು ಎಂಬುದು ಅವರ ತಂತ್ರವಾಗಿತ್ತು.
ಮಗನ ಪಟ್ಟಾಭಿಷೇಕದ ಸದವಕಾಶ ಉಪ ಯೋಗಿಸಿಕೊಂಡು ದೇಶದಲ್ಲಿರುವ ಬಿಜೆಪಿ ಯೇತರ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ಧುರೀಣರನ್ನು ಒಂದೇ ವೇದಿಕೆಗೆ ಕರೆತಂದು ತೃತೀಯ ರಂಗ ರಚನೆಗೆ ಭೂಮಿಕೆ ಸಜ್ಜುಗೊಳಿಸುವ ಮೂಲಕ ತಾವು ತೃತೀಯ ರಂಗದ ಮುಂಚೂಣ ಗೆ ಬರಬಹುದು ಎಂಬು ದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಅತ್ತ ಸಿದ್ದ ರಾಮಯ್ಯ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡುವುದು ಹಾಗೂ ತೃತೀಯ ರಂಗ ಬಲಪಡಿಸುವುದು- ಹೀಗೆ ದೇವೇಗೌಡರು ಮೂರು ಹಕ್ಕಿಗಳನ್ನು ಒಂದೇ ಏಟಿಗೆ ಹೊಡೆದುರುಳಿಸಿದ್ದಾರೆ.
ಬಹುತೇಕ ಬಿಜೆಪಿಯೇತರ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಹಾಗೂ ವಿರೋಧ ಪಕ್ಷದ ಸ್ಥಾನದಲ್ಲಿರುವ ಪಕ್ಷಗಳು ಉತ್ತರ-ದಕ್ಷಿಣ ದಂತಿವೆ. ಇವರನ್ನೆಲ್ಲ ಒಗ್ಗೂಡಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಗೆ ಹಾಕಿ ತೂಗಿದಂತಹ ಸಾಹಸದ ಕೆಲಸವೇ ಸರಿ. ಆದರೂ, ಈ ಇಳಿ ವಯಸ್ಸಿನಲ್ಲಿಯೂ ಗೌಡರ ಉತ್ಸಾಹ, ಹುಮ್ಮಸ್ಸು ಹಾಗೂ ಆತ್ಮವಿಶ್ವಾಸ ಮೆಚ್ಚತಕ್ಕದ್ದು. ಮುಂದೇ ನಾಗುತ್ತದೆಯೋ ಕಾದು ನೋಡೋಣ. ಪ್ರಯತ್ನ ತಪ್ಪಲ್ಲ ಎಂಬುದು ಅವರ ನಿಲುವು.
ಈ ಎಲ್ಲಾ ಪಕ್ಷಗಳ ನಾಯಕರನ್ನು ಆದಷ್ಟು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸುವ ದೊಡ್ಡ ಗೌಡರು, ಎಲ್ಲರ ಮೂಗಿಗೂ (ಪ್ರಧಾನಿ ಹುದ್ದೆ) ತುಪ್ಪ ಹಚ್ಚುತ್ತಾರೆ. ನಂತರ ಸಂದರ್ಭ ನೋಡಿ ಒಬ್ಬೊಬ್ಬರ ಹೆಗಲ ಮೇಲೂ ಕೈಯೂರಿ, ನೆಲಕಚ್ಚಿಸಿ ತಾವು ಸರ್ವಸಮ್ಮತ ನಾಯಕರು ಎಂದು ಅವರ ಬಾಯಿಂದಲೇ ಹೇಳಿಸುತ್ತಾರೆ. ರಾಜಕೀಯ ಚದುರಂಗ ಆಟದಲ್ಲಿ ನ್ಯಾಷನಲ್ ಚಾಂಪಿಯನ್ ಆಗಿರುವ ಗೌಡರಿಗೆ ಈ ವಿದ್ಯೆ ಕರಗತವಾಗಿದೆ.
ಇದೇ ರೀತಿ, ತಂದೆಗೆ ತಕ್ಕ ಮಗನಾದ ಕುಮಾರಸ್ವಾಮಿ ಅವರೂ ಬ್ರದರ್-ಬ್ರದರ್ ಎಂದು ನಗು ನಗುತ್ತಲೇ ಎಲ್ಲರ ಹೆಗಲ ಮೇಲೆ ಕೈಹಾಕಿ ಅವರ ಸ್ನೇಹ ಗಳಿಸುತ್ತಾರೆ. ಕೊನೆಗೆ ಇವರು, ಎಲ್ಲರಿಗೂ ಸಲ್ಲುವಂತಾಗಿ ಒಮ್ಮತದ ನಾಯಕನಾಗಿ ಹೊರಹೊಮ್ಮುತ್ತಾರೆ. ಹೀಗಾಗಿ ಕುಮಾರಸ್ವಾಮಿಯವರು ನಮ್ಮ ಮುಖ್ಯ ಮಂತ್ರಿಯೆಂದು ಸಿದ್ದರಾಮಯ್ಯ ಅವರ ಬಾಯಿಂದಲೇ ಹೇಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು.
ಒಂದು ವೇಳೆ ತಮ್ಮ ಲೆಕ್ಕಾ ಚಾರ ತಪ್ಪಿ ಕಾಂಗ್ರೆಸ್ ನೂರರ ಗಡಿದಾಟಿ ಕೇವಲ ಕೆಲವು ಸ್ಥಾನ ಗಳ ಕೊರತೆ ಉಂಟಾಗಿದ್ದರೆ, ಆಗ ಕಾಂಗ್ರೆಸ್ ಜೊತೆ ಕೈಜೋಡಿಸಿ ಡಾ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಿ ಎರಡೂ ವರೆ ವರ್ಷಕ್ಕೆ ರೇವಣ್ಣನವರನ್ನು ಡಿಸಿಎಂ ಮಾಡುವ ‘ಬಿ’ ತಂತ್ರವೂ ಅವರ ಬತ್ತಳಿಕೆಯಲ್ಲಿತ್ತಂತೆ. ಇದೇ ರೀತಿ ರಾಮಲಿಂಗಾ ರೆಡ್ಡಿ ಮೂಗಿಗೂ ತುಪ್ಪ ಸವರಲಾಗಿತ್ತು ಎನ್ನಲಾಗಿದೆ.
ಮಣ ್ಣನ ಮಗ ಪ್ರಧಾನಿಯಾದರು. ಅವರ ಮಗ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದರೆ, ದೊಡ್ಡ ಗೌಡರೂ 2ನೇ ಬಾರಿಗೆ ಪ್ರಧಾನಿ ಆಗುವುದನ್ನು ತಳ್ಳಿ ಹಾಕುವಂತಿಲ್ಲ. ದೇವರ ಆಟ ಬಲ್ಲವರ್ಯಾರು? ಆಗಲಿ, ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ?
ನಾನು ಸಂದರ್ಭದ ಕೂಸು ಎಂದು ಕುಮಾರ ಸ್ವಾಮಿ ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ. ಸಂದರ್ಭದ ಶಿಶು ಅಲ್ಲ, ಆ ಅನಿವಾರ್ಯತೆಯ ಸೃಷ್ಟಿಕರ್ತ ಬೇರೆ ಯಾರೂ ಅಲ್ಲ, ಅವರ ತಂದೆ ಯವರೇ ಎನ್ನುವುದು ಕಟುಸತ್ಯ. ರಾಜ್ಯದ ಜನತೆಯೂ ಇದನ್ನು ಅರಿತಿದ್ದಾರೆ.
ಆದರೆ, ನಾನೇ ಮುಂದೆಯೂ ಸಿಎಂ ಎಂದು ಹಿಮಾಲಯದ ಶಿಖರದ ಮೇಲೆ ನಿಂತು ದರ್ಪ ದಿಂದ ಅಬ್ಬರಿಸುತ್ತಿದ್ದ ಸಿದ್ದರಾಮಯ್ಯ ಈಗ ಪಾತಾಳಕ್ಕೆ ತಳ್ಳಲ್ಪಟ್ಟಿದ್ದಾರೆ. 150 ಸ್ಥಾನ ಗಳಿಸಿ ಸಿಎಂ ಆದ 24 ಘಂಟೆಯೊಳಗೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಘೀಳಿಡುತ್ತಿದ್ದ ಬಿಎಸ್‍ವೈ, ಕೇವಲ ಎರಡೂವರೆ ದಿನಗಳ ಸುಲ್ತಾನ ರಾಗಿ ಮನೆಗೆ ಮರಳಿದ್ದಾರೆ.
ಮುಖ್ಯಮಂತ್ರಿಗಳ ದೇವರು- ದೇವ ಮಾನ ವರ ಭೇಟಿ ಸಾಕು. ಎಲ್ಲಕ್ಕೂ ಇತಿಮಿತಿ ಇದ್ದರೆ ಚೆನ್ನ. ಈ ಪ್ರವಾಸ ನಿಲ್ಲಿಸಿ, ಸಮಸ್ಯೆಗಳ ಸರ ಮಾಲೆಯ ಸುಳಿಯಲ್ಲಿಯೇ ಸಿಕ್ಕಿ ಕಂಗಾ ಲಾಗಿರುವ ಮತದಾರ ಪ್ರಭುಗಳ ಮನೆಬಾಗಿಲಿಗೆ ಹೋಗಿ ಕಷ್ಟ ಸುಖ ವಿಚಾರಿಸುವಂತಾದರೆ ಇದೇ ಜನತಾ ಜನಾರ್ದನನ ಸೇವೆ ಮಾಡಿದಂತೆ.
ಅಲ್ಲದೆ, ವಿಧಾನಸೌಧ, ವಿಕಾಸ ಸೌಧಗಳನ್ನು ದೇವಸ್ಥಾನಗಳಾಗಿ ಪರಿವರ್ತಿಸಬಾರದು. ಸಚಿವರ ಕೊಠಡಿಗಳು ಗುಡಿ-ಗೋಪುರ-ಮಸೀದಿ-ಚರ್ಚುಗಳಾಗ ಬಾರದು. ಸ್ಪರ್ಧೆಗೆ ಬಿದ್ದವರಂತೆ ಕೊಠಡಿಗಳನ್ನು ಅಲಂಕರಿಸಿ ಪೂಜೆ ಮಂಗಳಾರತಿ ಮಾಡಬಾರದು. ಇದೆಲ್ಲಾ ವೈಯಕ್ತಿಕ ಹಾಗೂ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು. ಇಲ್ಲದಿದ್ದರೆ ವಿಧಾನ ಸೌಧದ ಆವರಣದ ಮೂಲೆಯೊಂದರಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ದೇವಸ್ಥಾನ ವೊಂದನ್ನು ನಿರ್ಮಿಸಿ, ಎಲ್ಲರೂ ವಿಧಾನಸೌಧಕ್ಕೆ ಬರುವ ಮುನ್ನ, ಅಲ್ಲಿಗೆ ಹೋಗಿ ನಿತ್ಯ ಪೂಜೆ ಮಾಡಿಸಿ ಬರಲಿ.
ವಿಧಾನಸೌಧದಲ್ಲಿ ಖಾತೆಗಳಿಗೆ ಅನುಗುಣ ವಾಗಿ ನಿರ್ದಿಷ್ಠ ಕೊಠಡಿಗಳನ್ನು ಗೊತ್ತುಪಡಿಸಬೇಕು (ಕೇಂದ್ರ ಸರ್ಕಾರದಲ್ಲಿರುವ ರೀತಿ). ಉದಾ ಹರಣೆಗೆ- ಮುಖ್ಯಮಂತ್ರಿಗಳು, ಪಕ್ಕದ ಕೊಠಡಿ- ಉಪಮುಖ್ಯಮಂತ್ರಿಗಳಿಗೆ. ತದನಂತರ ಗೃಹ ಇಲಾಖೆ, ಹಣಕಾಸು, ಕೈಗಾರಿಕೆ, ವಾರ್ತೆ- ಹೀಗೆ ಕ್ರಮಬದ್ಧ ಖಾಯಂ ಕೊಠಡಿಗಳಿರಬೇಕು.
ಇದರಿಂದ ಸಾರ್ವಜನಿಕರು, ಅಧಿಕಾರಿಗಳ ಭೇಟಿಯ ಗೊಂದಲಗಳು ತಪ್ಪುತ್ತವೆ. ಮುಖ್ಯ ಮಂತ್ರಿಗಳೂ ಕೂಡ ಅಧಿಕೃತ ನಿವಾಸದಲ್ಲಿಯೇ ವಾಸಿಸಬೇಕು. ಅವರೇನಾದರೂ ಸ್ವಂತ ನಿವಾಸ ದಲ್ಲಿ ಉಳಿದುಕೊಂಡರೆ, ಸರ್ಕಾರದ ವೆಚ್ಚ ಕಡಿಮೆ ಮಾಡಬಹುದು ಎಂಬುದು ಕೇವಲ ತೋರಿಕೆಯ ವಿಷಯ ವಾಗುತ್ತದೆ. ಏಕೆಂದರೆ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆದ ವೆಚ್ಚ, ರೆಸಾರ್ಟ್ ನಲ್ಲಿರುವ ಶಾಸಕರಿಗೆ ಮಾಡಿರುವ ಖರ್ಚು- ದುಡ್ಡು ಯಾರದ್ದೇ ಆಗಿರಲಿ- ಇದು ದುಂದುವೆಚ್ಚವಲ್ಲವೇ? ಅಲ್ಲದೇ, ಅಧಿಕಾರಿಗಳ ತುರ್ತು ಭೇಟಿ, ಗಣ್ಯ ವ್ಯಕ್ತಿಗಳ ಜೊತೆ ಸಮಾಲೋಚನೆ, ಸಭೆ- ಹೀಗೆ ಹಲವು ವಿಚಾರಗಳ ದೃಷ್ಟಿಯಿಂದ ಮುಖ್ಯಮಂತ್ರಿಗಳು, ಸರ್ಕಾರದ ಅಧಿಕೃತ ನಿವಾಸದಲ್ಲಿ ಉಳಿಯುವುದು ಸೂಕ್ತ. ಇದೇ ರೀತಿ ಖಾತೆಗಳಿಗೆ ಅನು ಗುಣವಾಗಿ ಸಚಿವರ ಅಧಿಕೃತ ನಿವಾಸಗಳನ್ನೂ ಖಾಯಂ ಗೊಳಿಸಬೇಕು. ಜೊತೆಗೆ ಸಚಿವರ ಆಪ್ತ ಸಿಬ್ಬಂದಿ ಯಲ್ಲೂ ಎಲ್ಲ ಜಾತಿ, ವರ್ಗ, ಧರ್ಮದವರ ನೇಮಕ ವಾಗಬೇಕು. ಇನ್ನು ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವರ ಸನ್ಮಾನಕ್ಕೆ ಕಡಿವಾಣ ಹಾಕಬೇಕು. ಯಾವ ರೀತಿ ಪರಾಕ್ರಮ ಪ್ರದರ್ಶಿಸಿ ಯುದ್ಧಗೆದ್ದು ಬಂದಿದ್ದಾರೆಂದು ಇವರಿಗೆಲ್ಲ ಸನ್ಮಾನ? ರೆಸಾರ್ಟ್‍ನಲ್ಲಿ ಚೆನ್ನಾಗಿ ಉಂಡು-ತಿಂದು-ತೇಗಿ ಮಜಾ-ಮಸ್ತಿ ಮಾಡಿ ಬಂದ ವರಿಗೇಕೆ ಈ ಆದರ? ಸರಳ ಸಜ್ಜನರಂತೆ ನಡೆದು ಕೊಂಡರೆ ಘನತೆ ಗೌರವ ಹೆಚ್ಚುತ್ತದೆ. ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಆಡಂಬರದಿಂದ ಮೆರೆದರೆ ಮತದಾರರ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ. ಇನ್ನು ಒಂದೇ ವರ್ಷದೊಳಗೆ ಲೋಕಸಭಾ ಚುನಾವಣೆ ಬರಲಿದೆ.
ಹೊಸನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಯಿತೆಂಬಂತೆ ಹಳೆಯ ದನ್ನು ಕೆದಕದೆ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುವುದು ಸಮ್ಮಿಶ್ರ ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಾಗಲೀ, ಮಾಧ್ಯಮ ಮಿತ್ರರಾಗಲೀ ಸರ್ಕಾರದ ಮೇಲೆ (ಸಿಎಂ) ಏಕಕಾಲದಲ್ಲಿ ಮುಗಿಬಿದ್ದು, ನಿಂತ ಹೆಜ್ಜೆಯಲ್ಲಿಯೇ ಪ್ರಣಾಳಿಕೆಯಲ್ಲಿರುವ ಎಲ್ಲ ಅಂಶಗಳೂ ಜಾರಿಯಾಗಬೇಕೆಂಬ ಹಠ ಹಿಡಿಯುವುದು ಸಲ್ಲದು. ಮೈತ್ರಿ ಸರ್ಕಾರದ ಹೊಂದಾಣ ಕೆ, ಪ್ರಣಾಳಿಕೆಗಳ ಅವಲೋಕನಕ್ಕೆ ಕಾಲಾವಕಾಶದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಸರ್ಕಾರಕ್ಕೆ ಆರು ತಿಂಗಳ ಹನಿಮೂನ್‍ಗೆ ಅವಕಾಶ ಕಲ್ಪಿಸುವುದು ಸೂಕ್ತ. ವಿಧಾನ ಸಭೆ ಯಲ್ಲಿ ಶಾಸಕರಿಂದ ವಿಶ್ವಾಸ ಮತ ಗಳಿಸುವು ದರ ಜೊತೆಗೆ ರಾಜ್ಯದ ಜನತೆಯ ವಿಶ್ವಾಸ ಗಳಿಸುವುದೂ ಸಮ್ಮಿಶ್ರ ಸರ್ಕಾರಕ್ಕೆ ಸವಾಲಾಗಿದೆ.