ಅರಿಶಿಣ ಕಳವು: ಆರೋಪಿಗಳ ಬಂಧನ
ಚಾಮರಾಜನಗರ

ಅರಿಶಿಣ ಕಳವು: ಆರೋಪಿಗಳ ಬಂಧನ

April 30, 2018

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದ ಜಮೀನಿನಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಅರಿಶಿಣವನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಇಬ್ಬರು ಕೂಲಿ ಕಾರ್ಮಿಕರನ್ನು ಬಂಧಿಸಿರುವ ಬೇಗೂರು ಠಾಣೆ ಪೆÇಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಹೇಶ್ ಹಾಗೂ ಮಹೇಶ್ ಬಂಧಿತರು. ಹಸಗೂಲಿ ಗ್ರಾಮದ ಬಸಪ್ಪ ಎಂಬುವರು ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದ ಅರಿಶಿಣ ಕಳ್ಳತನವಾಗಿರುವ ಬಗ್ಗೆ ಬೇಗೂರು ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಜಮೀನಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಗ್ರಾಮದ ಮಹೇಶ್ ಹಾಗೂ ಮಹೇಶ್ ಎಂಬಿಬ್ಬರು ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಾವು ಅರಿಶಿಣವನ್ನು ಕದ್ದು ಮಾರಾಟ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ.

Translate »