ಚಾಮರಾಜನಗರ: ಫಲಾನುಭವಿಯೊಬ್ಬರಿಗೆ ಸಬ್ಸಿಡಿ ಹಣ ಬಿಡುಗಡೆಗೆ ಲಂಚ ಸ್ವೀಕರಿಸುವ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಗಳಿಬ್ಬರು ನಗರದ ಜಿಲ್ಲಾಡಳಿತ ಭವನ ದಲ್ಲಿ ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎನ್.ಕೆಂಪಯ್ಯ ಹಾಗೂ ಪ್ರಥಮ ದರ್ಜೆ ಸಹಾಯಕ ಪ್ರಕಾಶ ಎಸಿಬಿ ಬಲೆಗೆ ಬಿದ್ದವರು.
ಘಟನೆ ವಿವರ: ಚಾಮರಾಜನಗರದ ಮಹೇಶ ಎಂಬುವರು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಕ್ಕೆ ಕಾರು ಖರೀದಿಸಲು ಅರ್ಜಿ ಸಲ್ಲಿಸಿದ್ದರು. ಕಾರಿನ ಸಬ್ಸಿಡಿ ಹಣ 2.5 ಲಕ್ಷ ರೂ. ಬಿಡು ಗಡೆಗೊಳಿಸಲು ನಿಗಮದ ಜಿಲ್ಲಾ ವ್ಯವ ಸ್ಥಾಪಕ ಎನ್.ಕೆಂಪಯ್ಯ, ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಲಂಚ ಕೇಳಿದ್ದರು. ಮಾತುಕತೆ ನಡೆದು ಈ ಇಬ್ಬರಿಗೆ 7 ಸಾವಿರ ರೂ. ಕೊಡುವುದಾಗಿ ಮಹೇಶ್ ಒಪ್ಪಿಕೊಂಡಿದ್ದರು. ಇದರಿಂದ ಬೇಸತ್ತ ಮಹೇಶ್ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಎನ್.ಕೆಂಪಯ್ಯ ಹಾಗೂ ಪ್ರಕಾಶ್ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದರು. ದೂರು ದಾಖ ಲಿಸಿಕೊಂಡ ಎಸಿಬಿ ಅಧಿಕಾರಿಗಳು ಇಂದು ಪೂರ್ವ ನಿಯೋಜಿತ ದಂತೆ ಜಿಲ್ಲಾಡಳಿತ ಭವನದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಕಚೇರಿ ಯಲ್ಲಿ ಮಹೇಶ್‍ನಿಂದ ಎನ್.ಕೆಂಪಯ್ಯ ಹಾಗೂ ಪ್ರಕಾಶ್ 7 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದಂತೆಯೇ ದಾಳಿ ನಡೆಸಿದರು. ಈ ವೇಳೆ ಅಧಿಕಾರಿ ಮತ್ತು ನೌಕರ ಗಲಿ ಬಿಲಿಗೊಂಡರು ಎನ್ನಲಾಗಿದೆ. ಕಚೇರಿಯಲ್ಲಿ ಹಣ ಪಡೆದಿದ್ದು ಸಾಬೀತಾದ ಕಾರಣ ದೂರನ್ನು ದಾಖಲಿಸಿಕೊಂಡು ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು ಎಂದು ಎಸಿಬಿ ಇನ್ಸ್‍ಪೆಕ್ಟರ್ ಶ್ರೀಕಾಂತ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಎಸಿಬಿ ಇನ್ಸ್‍ಪೆಕ್ಟರ್ ಗೋಪಾಲಕೃಷ್ಣ ಮತ್ತು ಸಿಬ್ಬಂದಿ ದಾಳಿ ಯಲ್ಲಿ ಭಾಗವಹಿಸಿದ್ದರು.