ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಶೇ.79.91ರಷ್ಟು ಮತದಾನ
ಮೈಸೂರು

ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಶೇ.79.91ರಷ್ಟು ಮತದಾನ

June 9, 2018

ಮೈಸೂರು:  ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಇಂದು ನಡೆದ ಚುನಾವಣೆ ಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆ ಒಳಗೊಂಡು ಶೇ.79.91ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮೈಸೂರು ನಗರದ 10 ತಾಲೂಕು ಕೇಂದ್ರಗಳಲ್ಲಿ ಯಾವುದೇ ಗೊಂದಲವಿಲ್ಲದೆ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ 9 ಗಂಟೆವರೆಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ 5.97ರಷ್ಟು, ಬೆಳಿಗ್ಗೆ 11 ಗಂಟೆವರೆಗೆ ಶೇ.22.69 ರಷ್ಟು ಮಧ್ಯಾಹ್ನ 1 ಗಂಟೆವರೆಗೆ ಶೇ.45.06ರಷ್ಟು, ಮಧ್ಯಾಹ್ನ 3 ಗಂಟೆವರೆಗೆ ಶೇ.65.27 ರಷ್ಟು ಹಾಗೂ ಸಂಜೆ 5 ಗಂಟೆವರೆಗೆ ಶೇ.80.88ರಷ್ಟು ಮತದಾನವಾಗಿದೆ. ಮೈಸೂರು ಜಿಲ್ಲೆಯಲ್ಲಿ 9643, ಮಂಡ್ಯ ದಲ್ಲಿ 4859, ಚಾಮರಾಜನಗರದಲ್ಲಿ 1899 ಹಾಗೂ ಹಾಸನ ಜಿಲ್ಲೆಯಲ್ಲಿ 4,277 ಮಂದಿ ಮತದಾರರಿದ್ದು, ಒಟ್ಟು 20,678 ಮಂದಿ ಪೈಕಿ ಇಂದು 16,523 ಮಂದಿ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಶೇ.77.12, ಮಂಡ್ಯದಲ್ಲಿ ಶೇ.83.92, ಚಾಮರಾಜನಗರದಲ್ಲಿ ಶೇ.86.41 ಹಾಗೂ ಹಾಸನ ಜಿಲ್ಲೆಯಲ್ಲಿ ಶೇ.83.88ರಷ್ಟು ಮತದಾನ ದಾಖಲಾಗಿದೆ. ಮೈಸೂರು ಜಿಲ್ಲೆಯಲ್ಲಿ 18, ಮಂಡ್ಯದಲ್ಲಿ 9, ಹಾಸನದಲ್ಲಿ 10 ಹಾಗೂ ಚಾಮರಾಜನಗರ ದಲ್ಲಿ 5 ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಶಿಕ್ಷಕರು ಉತ್ಸುಕತೆ ಯಿಂದ ಸಾಲುಗಟ್ಟಿ ನಿಂತು ಮತದಾನ ಮಾಡಿದ್ದು, ಬೆಳಿಗ್ಗೆ 10 ಗಂಟೆ ನಂತರ ಬಿರುಸುಗೊಂಡ ಮತದಾನ, ಮಧ್ಯಾಹ್ನ 1 ಗಂಟೆಯಿಂದ 2.30 ಗಂಟೆವರೆಗೆ ನೀರಸವಾಗಿತ್ತಲ್ಲದೆ, ನಂತರ ಮತ್ತೆ ತೀವ್ರಗೊಂಡು ಕಡೇ ಒಂದು ಗಂಟೆ ಅವಧಿಯಲ್ಲಿ ಬಿರುಸಿನಿಂದ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದರು.

ಮಾಮೂಲಿನಂತೆ ಮತಗಟ್ಟೆಗಳ ಬಳಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಟೇಬಲ್ ಹಾಕಿಕೊಂಡು ಕುಳಿತು ಮತದಾರರಿಗೆ ಮತಗಟ್ಟೆಯಲ್ಲಿ ಬೂತ್ ಇರುವ ಸ್ಥಳ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ದೃಢಪಡಿಸಿ ಸಹಾಯ ಮಾಡುತ್ತಿದ್ದುದು ಕಂಡು ಬಂದಿತು.

ಮೈಸೂರಿನ ಪೀಪಲ್ಸ್ ಪಾರ್ಕ್ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ವಿಜಯನಗರ 2ನೇ ಹಂತದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆಟ್ರ್ಸ್, ಗೋಕುಲಂ 3ನೇ ಹಂತದ ಕಾಟೂರು ರಸ್ತೆಯ ಮೈಸೂರು ವೆಸ್ಟ್ ಲಯನ್ಸ್, ರಾಜೇಂದ್ರನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬಿ.ಎನ್.ರಸ್ತೆಯ ಚರ್ಚ್ ಬಳಿಯ ಸೆಂಟ್ ಫಿಲೋಮಿನಾ ಕಿರಿಯ ಪ್ರಾಥಮಿಕ ಬಾಲಕಿ ಯರ ಶಾಲೆ, ಶೇಷಾದ್ರಿ ಅಯ್ಯರ್ ರಸ್ತೆಯ ವಿದ್ಯಾವರ್ಧಕ ಪ್ರೌಢಶಾಲೆ, ಸಿದ್ಧಾರ್ಥನಗರದ ಗೀತಾ ಶಿಶು ಶಿಕ್ಷಣ ಸಂಸ್ಥೆ, ಕೃಷ್ಣಮೂರ್ತಿಪುರಂನ 6ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ, ಕುವೆಂಪು ನಗರದ ಶ್ರೀಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ಶಿಕ್ಷಣ ಕಾಲೇಜು ಹಾಗೂ ರಾಮನುಜಾ ರಸ್ತೆ ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗಳ ಮತಗಟ್ಟೆ ಗಳಲ್ಲಿ ಮತದಾನ ಮಾಡಲು ಸಕಲ ವ್ಯವಸ್ಥೆ ಮಾಡಲಾಗಿತ್ತು.

ಇವಿಎಂ ಮತಯಂತ್ರಗಳ ಬಳಕೆ ಇಲ್ಲವಾದ್ದರಿಂದ ಬ್ಯಾಲೆಟ್ ಪೇಪರ್‍ನಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಾಶಸ್ತ್ಯದ ಮತಗಳನ್ನು ಅಂಕಿಗಳನ್ನು ನಮೂದಿಸುವ ಮೂಲಕ ಶಿಕ್ಷಕರು ಹಾಕುತ್ತಿದ್ದರು. ಮತ ಚಲಾವಣೆ ಮಾಡಿದವರ ಎಡಗೈನ ಉಂಗುರ ಬೆರಳಿಗೆ ಅಳಿಸಲಾರದ ಶಾಯಿಯನ್ನು ಹಾಕಲಾಯಿತು. ಬಿ.ನಿರಂಜನ್ ಮೂರ್ತಿ (ಬಿಜೆಪಿ), ಮರಿತಿಬ್ಬೇಗೌಡ (ಜೆಡಿಎಸ್), ಎಂ.ಲಕ್ಷಣ (ಕಾಂಗ್ರೆಸ್) ಅವರು ಚುನಾವಣೆಯಲ್ಲಿ ಸ್ಪರ್ಧಿಯೊಡ್ಡಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದು, ಪಕ್ಷೇತರರಾದ ಎ.ಹೆಚ್.ಗೋಪಾಲಕೃಷ್ಣ, ಡಿ.ಕೆ.ತುಳಸಪ್ಪ, ಡಾ.ಎಸ್‍ಬಿಎಂ ಪ್ರಸನ್ನ, ಡಾ.ಮಹದೇವ, ಎಂ.ಎನ್. ರವಿಶಂಕರ್ ಹಾಗೂ ಪಿ.ಎ.ಶರತ್‍ರಾಜ್ ಅವರೂ ಸಹ ಅಭ್ಯರ್ಥಿ ಗಳಾಗಿದ್ದು, ಬ್ಯಾಲೆಟ್ ಪೇಪರ್‍ನಲ್ಲಿ ಅಭ್ಯರ್ಥಿಗಳ ಜೊತೆಗೆ ನೋಟಾ (ಓoಟಿe oಜಿ ಣhe ಚಿbove) ಕಾಲಂ ಸಹ ಇದ್ದು, ಅಭ್ಯರ್ಥಿ ಗಳು ಇಷ್ಟವಾಗದಿದ್ದಲ್ಲಿ ‘ನೋಟಾ’ಗೂ ಸಹ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಚುನಾವಣಾಧಿಕಾರಿಯಾದ ಮೈಸೂರು ವಿಭಾಗದ ರೀಜನಲ್ ಕಮೀಷ್ನರ್ ಪಿ.ಹೇಮಲತಾ ಅವರು ಇಂದು ಕ್ಷೇತ್ರದಾದ್ಯಂತ ಸಂಚರಿಸಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿ ದರು. ಎಲ್ಲಾ ಮತಗಟ್ಟೆಗಳಲ್ಲಿ ಆಯಾ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿತ್ತು.

ರಜೆ ನೀಡಿದ್ದರಿಂದ ಮತದಾನ ಹೆಚ್ಚಳ

ರಜೆ ಘೋಷಿಸಿದ್ದರಿಂದ ಇಂದು ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಶೇ.77.12, ಮಂಡದಲ್ಲಿ ಶೇ.83.92, ಚಾಮರಾಜ ನಗರದಲ್ಲಿ ಶೇ.86.41 ಹಾಗೂ ಹಾಸನ ಜಿಲ್ಲೆಯಲ್ಲಿ ಶೇ.83.88 ರಷ್ಟು ಅಂದರೆ ನಾಲ್ಕೂ ಜಿಲ್ಲೆಗಳಿಂದ ಒಟ್ಟಾರೆ ಶೇ.80.88ರಷ್ಟು ಶಿಕ್ಷಕರು ಮತ ಚಲಾಯಿಸಿದ್ದಾರೆ.

ಎಲ್ಲಾ ಸರ್ಕಾರಿ, ಖಾಸಗಿ, ಅನುದಾನ ರಹಿತ ಶಾಲಾ-ಕಾಲೇಜು ಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು ಹಾಗೂ ಪದವೀ ಧರರಿರುವ ಸಂಸ್ಥೆಗಳಿಗೆ ಇಂದು ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು ರಜೆ ಘೋಷಿಸಿದ್ದರು. ಆದ್ದರಿಂದ ತಾಲೂಕು ಕೇಂದ್ರಗಳ ಮತ ಕೇಂದ್ರಗಳಿಗೆ ತೆರಳಿ ಹಕ್ಕು ಚಲಾಯಿಸಲು ಅವಕಾಶವಾದ ಕಾರಣ ದಕ್ಷಿಣ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆ ಯಲ್ಲಿ ಶೇಕಡಾವಾರು ಮತದಾನ ಹೆಚ್ಚಾಗಲು ಕಾರಣ ಎನ್ನಲಾಗಿದೆ.

Translate »