ವಾಲ್ಮೀಕಿ ಜಯಂತಿ ಸಾಂಪ್ರದಾಯಿಕ ಆಚರಣೆ
ಮೈಸೂರು

ವಾಲ್ಮೀಕಿ ಜಯಂತಿ ಸಾಂಪ್ರದಾಯಿಕ ಆಚರಣೆ

October 23, 2018

ಎಚ್.ಡಿ. ಕೋಟೆ:  ವಾಲ್ಮೀಕಿ ಜಯಂತಿ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ತಾಲೂಕಿನ ಎಲ್ಲಾ ಜನತೆ ಸಹಕರಿಸುವಂತೆ ಶಾಸಕ ಸಿ.ಅನಿಲ್ ಚಿಕ್ಕಮಾದು ಮನವಿ ಮಾಡಿದರು.

ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನ ಜನತೆ ಆಶೀರ್ವಾದ ಮಾಡಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ದ್ದಾರೆ. ಈ ಬಾರಿ ಪ್ರಥಮ ಬಾರಿಗೆ ತಾಲೂಕಿ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.

ಅ.24ರಂದು ನಡೆಯಲಿರುವ ವಾಲ್ಮೀಕಿ ಜಯಂತಿ ಆಚರಣೆಗೆ ತಾಲೂಕಿ ನಾದ್ಯಂತ ಎಲ್ಲಾ ಜನಾಂಗದ ನಾಯಕರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಕೈ ಜೋಡಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಚಿಕ್ಕಣ್ಣ ಅವರು ವಾಲ್ಮೀಕಿ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ತಾಲೂಕು ನಾಯಕ ಸಂಘದ ಗೌರವಾಧ್ಯಕ್ಷ ಎಂ.ಸಿ. ದೊಡ್ಡ ನಾಯಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕೋಟೆ ತಾಲೂಕು ನಾಯಕ ಸಂಘದ ಅಧ್ಯಕ್ಷ ಶಂಭುಲಿಂಗ ನಾಯಕ, ಸರಗೂರು ತಾಲೂಕು ನಾಯಕ ಸಂಘದ ಅಧ್ಯಕ್ಷ ಪುರದ ಕಟ್ಟೆ ಬಸವರಾಜ್ ಪುಷ್ಪಾರ್ಚನೆ ಮಾಡುವ ಮೂಲಕ ಬೆಳ್ಳಿ ರಥ ಚಾಲನೆ ನೀಡಲಿದ್ದಾರೆ ಎಂದು ಶಾಸಕರು ವಿವರಿಸಿದರು.

ಈ ಬಾರಿ ಮೆರವಣಿಗೆಯಲ್ಲಿ ವೀರಗಾಸೆÀ, ಸತ್ತಿಗೆ, ಸೂರಪಾನಿ, ಕೀಲುಕುದುರೆ, ಚಂಡೆ ಕಾರ್ಯಕ್ರಮಗಳಿರುತ್ತವೆ. ಈ ಬಾರಿ ಉತ್ತಮ ಸ್ತಬ್ಧಚಿತ್ರಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ ವಾಗಿ 10000 ರೂ., ದ್ವಿತೀಯ ಬಹು ಮಾನವಾಗಿ 7000 ರೂ., ತೃತೀಯ ಬಹುಮಾನವಾಗಿ 5000 ರೂ. ನೀಡಲಾಗುವುದು. ಕೆಲ ಸಮಾಜ ಸೇವಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರ ನಾಯಕ, ಪುರಸಭಾ ಸದಸ್ಯ ಪುಟ್ಟಬಸವನಾಯಕ, ತಾಲೂಕು ಪಂಚಾಯಿತಿ ಸದಸ್ಯ ಬಿ.ಸಿ.ರಾಜು, ಎಚ್.ಡಿ.ಕೋಟೆ ತಾಲೂಕು ನಾಯಕ ಸಂಘದ ಅಧ್ಯಕ್ಷ ಶಂಭುಲಿಂಗ ನಾಯಕ, ಸರಗೂರು ತಾಲೂಕು ನಾಯಕ ಸಂಘದ ಅಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಕ್ಯಾತನಹಳ್ಳಿ ನಾಗರಾಜು, ಪ್ರಕಾಶ್, ರಾಜನಾಯಕ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Translate »