ಬೆಂಗಳೂರು: ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿರುವ ಐಷಾರಾಮಿ ಜೆಟ್ ವಿಮಾನ ಕೊನೆಗೂ ಹರಾಜಾಗಿದೆ.
ಕನಿಷ್ಠ ಮೂರು ಬಾರಿ ವಿಫಲವಾಗಿದ್ದ ಹರಾಜು ಪ್ರಕ್ರಿಯೆ ಹಾಗೂ ಸುದೀರ್ಘವಾದ ಕಾನೂನು ಪ್ರಕ್ರಿಯೆಯ ಬಳಿಕ ಏರ್‍ಬಸ್ ಎ319-133 ಸಿ ವಿಟಿ ವಿಜೆಎಂ ಎಂಎಸ್‍ಎನ್ 2650 ಜೆಟ್‍ನ್ನು ಕೊನೆಗೂ ಹರಾಜು ಮಾಡಲಾಗಿದೆ.
ಅಮೆರಿಕ ಮೂಲದ ಏವಿಯೇಶನ್ ಮ್ಯಾನೇಜ್‍ಮೆಂಟ್ ಸೇಲ್ಸ್ ಎಎಲ್‍ಸಿ 35 ಕೋಟಿ ರೂ.ಗೆ ಲಕ್ಸುರಿ ಜೆಟ್‍ನ್ನು ಖರೀದಿಸಿತು. ಈ ಹಿಂದೆ ಸೇವಾ ತೆರಿಗೆ ಇಲಾಖೆ ನಡೆಸಿದ ಇ-ಹರಾಜಿಗಿಂತ ಹೆಚ್ಚು ಮೊತ್ತದ ಬಿಡ್‍ಗಳು ಸಲ್ಲಿಕೆಯಾಗಿದ್ದವು. ಈಗ ದಿವಾಳಿಯಾಗಿರುವ ಮಲ್ಯ ಮಾಲೀಕತ್ವದ ಕಿಂಗ್‍ಫಿಶರ್ ಏರ್‍ಲೈನ್ಸ್ ಸೇವಾ ತೆರಿಗೆ ಇಲಾಖೆಗೆ ನೀಡಬೇಕಾದ ಬಾಕಿ ಹಾಗೂ ದಂಡಗಳ ವಸೂಲಾತಿಗೆ ಮಲ್ಯಗೆ ಸೇರಿದ ಲಕ್ಸುರಿ ಜೆಟ್‍ನ್ನು ಹರಾಜು ಮಾಡಲಾಗಿದೆ.
ಮಲ್ಯಗೆ ಲಕ್ಸುರಿ ಜೆಟ್‍ನಲ್ಲಿ 25 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಪ್ರಯಾಣಿಸಬಹುದು. ಇದರಲ್ಲಿ ಬೆಡ್‍ರೂಮ್, ಬಾತ್‍ರೂಮ್, ಬಾರ್ ಹಾಗೂ ಕಾನ್ಫರೆನ್ಸ್ ಏರಿಯಾ ಸಹಿತ ಹಲವು ಸೌಲಭ್ಯಗಳಿವೆ.
ಮಲ್ಯನ ಜೆಟ್‍ನ್ನು ಜಪ್ತಿ ಮಾಡಿದ್ದ ಸೇವಾ ತೆರಿಗೆ ಇಲಾಖೆ ವಿಮಾನವನ್ನು ಛತ್ರಪತಿ ಶಿವಾಜಿ ಇಂಟರ್‍ನ್ಯಾಷನಲ್ ಟರ್ಮಿನಲ್‍ನಲ್ಲಿ ಪಾರ್ಕ್ ಮಾಡಿತ್ತು. ಮಲ್ಯ ವಿಮಾನ ಪಾರ್ಕ್ ಮಾಡಿದ್ದರಿಂದ ಏರ್‍ಪೆÇೀರ್ಟ್‍ನಲ್ಲಿ ಜಾಗದ ಸಮಸ್ಯೆ ಎದುರಾಗಿದ್ದು ನಮಗೆ ಗಂಟೆಗೆ 13ರಿಂದ 15,000 ರೂ. ನಷ್ಟವಾಗುತ್ತಿದೆ ಎಂದು ಏರ್‍ಪೆÇೀರ್ಟ್ ಆಪರೇಟರ್‍ಗಳು ಬಾಂಬೆ ಹೈಕೋರ್ಟ್‍ಗೆ ತಿಳಿಸಿದ್ದರು.
ಬಾಂಬೆ ಹೈಕೋರ್ಟ್ ಈ ವರ್ಷದ ಏಪ್ರಿಲ್‍ನಲ್ಲಿ ನೀಡಿದ ತೀರ್ಪಿನಲ್ಲಿ ಬೆಂಗಳೂರಿನಲ್ಲಿ ಮಲ್ಯಗೆ ಸೇರಿದ ಜೆಟ್‍ನ್ನು ಹರಾಜು ಮಾಡುವಂತೆ ಆದೇಶಿಸಿತ್ತು.