ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ನ.20ರೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ತಿಳಿಸಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮತದಾನ ಪಟ್ಟಿಯ ಪರಿಷ್ಕರಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅನುಸರಿಸ ಬೇಕಾದ ಕ್ರಮಗಳ ಕುರಿತು ಮತಗಟ್ಟೆ ಅಧಿಕಾರಿಗಳಿಗೆ, ವಿವಿಧ ಪಕ್ಷಗಳ ಬೂತ್‍ಮಟ್ಟದ ಏಜೆಂಟರುಗಳಿಗೆ ಸಲಹೆ ನೀಡಿದರು.
ಚುನಾವಣೆಯ ಸಂದರ್ಭದಲ್ಲಿ ಮತ ದಾರರ ಪಟ್ಟಿಯಿಂದ ಹೆಸರು ಕೈಬಿಡ ಲಾಗಿದೆ ಎಂಬ ಆರೋಪ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಚುನಾ ವಣಾ ಆಯೋಗದ ನಿರ್ದೇಶನದ ಮೇರೆಗೆ ಅಕ್ಟೋಬರ್ 10ರಿಂದಲೇ ಪಟ್ಟಿ ಪರಿಷ್ಕರಣೆಗೆ ಆಕ್ಷೇಪಣೆ ಹಾಗೂ ಹೆಸರು ನೋಂದಾಯಿಸಲು ಅರ್ಜಿ ಸ್ವೀಕರಿಸಲಾಗು ತ್ತಿದ್ದು, ನವೆಂಬರ್ 20ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಭಿಯಾನದಲ್ಲಿ ವಿವಿಧ ಪಕ್ಷಗಳ ಬೂತ್ ಮಟ್ಟದ ಏಜೆಂಟರು (ಬಿಎಲ್‍ಎ) ಮತದಾರರ ಪಟ್ಟಿ ಪರಿ ಷ್ಕರಣೆಗಾಗಿ ಬರುವ ಬೂತ್ ಮಟ್ಟದ ಅಧಿ ಕಾರಿಗಳಿಗೆ (ಬಿಎಲ್‍ಒ) ಸಹಕರಿಸಬೇಕು. ಬಿಎಲ್‍ಒ ಹಾಗೂ ಬಿಎಲ್‍ಎಗಳು ಸಂಪರ್ಕದಲ್ಲಿದ್ದರೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ತ್ವರಿತಗತಿಯಲ್ಲಿ ಮಾಡ ಬಹುದಾಗಿದೆ. ಅಲ್ಲದೆ ಮತದಾರರ ಪಟ್ಟಿ ಯಿಂದ ಹೆಸರು ಕೈ ಬಿಡಲಾಗಿದ್ದರೆ, ಅಂತ ಹವರ ಹೆಸರನ್ನು ಮತ್ತೆ ಪಟ್ಟಿಗೆ ಸೇರಿಸಲು ಸಹಕಾರಿಯಾಗಲಿದೆ. ಅರ್ಹರಿಗೆ ಮತದಾನದ ಹಕ್ಕು ದೊರಕಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಒಂದು ಮತಗಟ್ಟೆಯಲ್ಲಿ 1400ಕ್ಕಿಂತ ಹೆಚ್ಚು ಮತದಾರರು ಇರುವುದಿಲ್ಲ. ಪಕ್ಷ ಗಳ ಏಜೆಂಟರು ಬಿಎಲ್‍ಒಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡಿದರೆ 18 ವರ್ಷ ಮೇಲ್ಪಟ್ಟ ಯಾವೊಬ್ಬ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವುದಕ್ಕೆ ಸಾಧ್ಯವಾಗು ವುದಿಲ್ಲ. ಹೆಸರು ಸೇರ್ಪಡೆಗೆ ನಮೂನೆ-6 ಹಾಗೂ ಒಂದು ಫೋಟೊ, ವಿಳಾಸ ಮತ್ತು ವಯಸ್ಸು ದೃಢಪಡಿಸುವ ದಾಖಲೆ ಗಳನ್ನು ನೀಡಬೇಕು. ಮತದಾರರ ಹೆಸರನ್ನು ಕೈಬಿಡುವುದಕ್ಕೆ ನಮೂನೆ-7, ಹೆಸರು ತಿದ್ದು ಪಡಿ ಮಾಡಲು ನಮೂನೆ-8 ಹಾಗೂ ತಿದ್ದು ಪಡಿ ಕುರಿತ ದಾಖಲೆಗಳನ್ನು ನೀಡಬೇಕು. ಬೇರೆ ಮತಗಟ್ಟೆಗೆ ವರ್ಗಾವಣೆ ಮಾಡು ವುದಕ್ಕೆ ನಮೂನೆ-8ಎ ಹಾಗೂ ವಿಳಾಸ ದೃಢೀಕರಣದ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕೆಂದು ಅವರು ತಿಳಿಸಿದರು.
ಯಾರ್ಯಾರು, ಎಲ್ಲೆಲ್ಲಿ: ಮೈಸೂರಿನ ಕೃಷ್ಣ ರಾಜ ಕ್ಷೇತ್ರ, ಚಾಮರಾಜ ಹಾಗೂ ನರ ಸಿಂಹರಾಜ ಕ್ಷೇತ್ರದ ಮತದಾರರು ಮೈಸೂರು ನಗರಪಾಲಿಕೆಯ ಕಚೇರಿಯಲ್ಲಿ ಮತದಾ ರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿ ದಂತೆ ಅರ್ಜಿ ಸಲ್ಲಿಸಬಹುದು. ಮಾಹಿತಿ ಗಾಗಿ 0821-2418800 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಮೈಸೂರಿನ ಮಿನಿ ವಿಧಾನಸೌಧದ ತಾಲೂಕು ಕಚೇರಿಯಲ್ಲಿ(0821-2414 811). ವರುಣಾ ಕ್ಷೇತ್ರ ಹಾಗೂ ನಂಜನ ಗೂಡು ಕ್ಷೇತ್ರದ ಮತದಾರರು ನಂಜನ ಗೂಡು ತಾಲೂಕು ಕಚೇರಿಯಲ್ಲಿ (08221 -223108). ಪಿರಿಯಾಪಟ್ಟಣ ಕ್ಷೇತ್ರದ ಮತದಾರರು ಪಿರಿಯಾಪಟ್ಟಣದ ತಾಲೂಕು ಕಚೇರಿಯಲ್ಲಿ (08223-274175).
ಹುಣಸೂರು ಕ್ಷೇತ್ರದ ಮತದಾರರು ಹುಣಸೂರಿನ ತಾಲೂಕಿನ ಕಚೇರಿ (08222-252040), ಹೆಚ್.ಡಿ. ಕೋಟೆ ಕ್ಷೇತ್ರ ಮತದಾರರು ಹೆಚ್.ಡಿ.ಕೋಟೆ ತಾಲೂಕು ಕಚೇರಿ (08228-255325), ಟಿ.ನರಸೀಪುರ ಕ್ಷೇತ್ರದ ಮತದಾರರು ಟಿ. ನರಸೀಪುರ ತಾಲೂಕು ಕಚೇರಿ (08227- 261233)ಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸಭೆಯಲ್ಲಿ ಚುನಾವಣೆ ಶಾಖೆಯ ಅಧೀಕ್ಷಕ ರಾಮಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೆ.ರಾಧ, ಬಿಎಲ್‍ಒಗಳು, ವಿವಿಧ ಪಕ್ಷದ ಮುಖಂಡರಾದ ಈಶ್ವರ್ ಚಕ್ಕಡಿ, ಪೈಲ್ವಾನ್ ಚಿಕ್ಕಪುಟ್ಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.