ಹಣ್ಣುಗಳನ್ನು ಮಾರುವ ಬದಲಿಗೆ ಉಪ ಉತ್ಪನ್ನ ತಯಾರಿಸಿದರೆ ರೈತರ ಆದಾಯ ಹೆಚ್ಚಳ ಸಾಧ್ಯ
ಮೈಸೂರು

ಹಣ್ಣುಗಳನ್ನು ಮಾರುವ ಬದಲಿಗೆ ಉಪ ಉತ್ಪನ್ನ ತಯಾರಿಸಿದರೆ ರೈತರ ಆದಾಯ ಹೆಚ್ಚಳ ಸಾಧ್ಯ

October 27, 2018

ಮೈಸೂರು: ಅಮೆರಿಕದ ಹವಾಯ್ ದ್ವೀಪದ ಸುಸ್ಥಿರ ಕೃಷಿಕ ಕೆನ್ ಲವ್. ಸಿಕ್ಕ ಸಿಕ್ಕ ಹಣ್ಣುಗಳನ್ನು ಬೆಳೆದು ಮಾರುಕಟ್ಟೆ ಇಲ್ಲದೆ ಒದ್ದಾಡಿ ರಸ್ತೆಗೆ ಸುರಿಯುವ ಬದಲಿಗೆ ಅದಕ್ಕೊಂದು ವಿಶಿಷ್ಟ ಚೌಕಟ್ಟು ನೀಡಿ ವ್ಯವಸ್ಥಿತ ಯೋಜನೆ ರೂಪಿಸಿದವರು ಕೆನ್ ಲವ್.
ತಮ್ಮ ಅನುಭವಗಳನ್ನು ಇತರರೊಡನೆ ಹಂಚಿ ಕೊಳ್ಳುವುದು, ಈ ನೆಪದಲ್ಲಿ ದೇಶ ಸುತ್ತುತ್ತಾ ಅಲ್ಲಿನ ಇನ್ನಷ್ಟು ಹಣ್ಣುಗಳ ಮಾಹಿತಿ ಸಂಗ್ರಹಿ ಸುತ್ತಾ ಹಣ್ಣುಗಳ ಮಾಹಿತಿ ಕ್ರೋಢೀಕರಿಸು ವುದು ಇವರ ಹವ್ಯಾಸ. ತಮ್ಮ ತೋಟದಲ್ಲಿಯೇ 75ಕ್ಕೂ ಹೆಚ್ಚು ಉಪ ಉತ್ಪನ್ನಕ್ಕೆ ಕೈ ಹಾಕಿ ಮೌಲ್ಯವರ್ಧನೆ ಮಾಡುತ್ತಾ ಬಂದಿದ್ದಾರೆ.

ಹವಾಯಿ ರೈತರನ್ನು ಒಗ್ಗೂಡಿಸಿ, ಪ್ರತಿ ವಾರ ಒಂದು ಸಂತೆ ನಡೆಸುತ್ತಾರೆ. ತಳಿಗಳ ವೈವಿಧ್ಯ ಸಂಗ್ರಹ, ಪ್ರದರ್ಶನ ನಡೆಸುತ್ತಾರೆ. ದ್ರಾಕ್ಷಿ, ಅಂಜೂರ, ಬಾಳೆಯ ಹತ್ತಾರು ತಳಿ ಸೇರಿದಂತೆ ಸಾವಿರಕ್ಕೂ ಅಧಿಕ ಹಣ್ಣುಗಳ ತಳಿಗಳನ್ನು ಹುಡುಕಿದ್ದಾರೆ. ಅವುಗಳ ಮಾಹಿತಿ ಗಳನ್ನು ಆಕರ್ಷಕ ಪೋಸ್ಟರ್ ಮಾಡಿ ಆಸಕ್ತ ರಿಗೆ ಹಂಚುತ್ತಾ ಬಂದಿದ್ದಾರೆ. ಸಾವಿರಾರು ರೈತರನ್ನು ಒಗ್ಗೂಡಿಸಿ ಹವಾಯ್ ಟ್ರೋಪಿ ಕಾನಾ ಫ್ರೂಟ್ ಗ್ರೋವರ್ಸ್ ಸಂಸ್ಥೆ ಸ್ಥಾಪಿಸಿ ಅದರ ಮುಖಾಂತರ ಇಡೀ ವಿಶ್ವವನ್ನು ಸಾವಯವ ಕೃಷಿಗೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ರೈತರನ್ನು ಪ್ರಚೋ ದಿಸುತ್ತಿದ್ದಾರೆ. ಇಂತಹ ಅನುಭವಿ ಸುಸ್ಥಿರ ಕೃಷಿಕನಿಂದ ರಾಜ್ಯದ ಹಣ್ಣು ಬೆಳೆಯುವ ರೈತರಿಗೆ ಒಂದಷ್ಟು ಮಾಹಿತಿ, ಅನುಕೂಲ, ಆದಾಯ ಗಳಿಸುವ ದಾರಿಯನ್ನು ತೋರಿ ಸುವ ನಿಟ್ಟಿನಲ್ಲಿ ಮೈಸೂರಿನ ಬೆಳಗೊಳ ದಲ್ಲಿರುವ ಬೆಳವಲ ಫೌಂಡೇಷನ್ ಮತ್ತು ಸಹಜ ಸಮೃದ್ಧ ಸಂಸ್ಥೆ ಜಂಟಿಯಾಗಿ ಬೆಳ ವಲ ಫೌಂಡೇಷನ್‍ನ ಸಹಜ ಕೃಷಿ ಆವರಣ ದಲ್ಲಿ ಶುಕ್ರವಾರ ಕೆನ್ ಲವ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.
ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗ ಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆ ಗಳ 70ಕ್ಕೂ ಹೆಚ್ಚು ಮಂದಿ ಸುಸ್ಥಿರ ಕೃಷಿ ಕರು ಭಾಗವಹಿಸಿ ಕೆನ್ ಲವ್‍ರ ಹಣ್ಣುಗಳ ಕೃಷಿ ಕುರಿತು ಮಾಹಿತಿ ಪಡೆದುಕೊಂಡರು. ಅವರಿಗೆ ಕೆನ್ ಲವ್ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ತಾವು ಸಂಗ್ರ ಹಿಸಿ, ಅಭಿವೃದ್ಧಿ ಪಡಿಸಿದ ಸಾವಿರಕ್ಕೂ ಹೆಚ್ಚು ಹಣ್ಣುಗಳ ಕುರಿತು ಮಾಹಿತಿ ನೀಡಿದರು.

ಕೆನ್ ಲವ್ ಅವರು ತಮ್ಮ ಪವರ್ ಪಾಯಿಂಟ್ ಪ್ರೆಸೆಂಟೇಷನ್‍ನಲ್ಲಿ ತಾವು ಬೆಳೆದ ನಾನಾ ರೀತಿಯ ಹಣ್ಣುಗಳ ಬಗ್ಗೆ ತಿಳಿಸಿದರು. ಮದರೋನೊ, 390 ಮಾದ ರಿಯ ಅಂಜೂರದ ಹಣ್ಣು, ಮಾಪ್‍ರಂಗ್, ಕಸ್ತೂರಿ, ಲಲಿಜಿವ್ಯ, ಓಡೆರಟ ಇನ್ನಿತರ ಮಾವಿನ ತಳಿ ಹಣ್ಣು, ಹೆಚ್ಚು ಸಿಹಿಯಾದ ಅಬಿಯು, ಮೈಸೂರು ರಾಸ್‍ಬೆರ್ರಿ, ಗ್ರೀನ್ ಸಪೋಟ, ಕ್ವೈಮುಕ್, ಓರೈ, ಬಿಗ್ ಐಲ್ಯಾಂಡ್ ಬನಾನಾ, 100 ವಿಧದ ದ್ರಾಕ್ಷಿಗಳು, ಕುಂಡ ಗಳಲ್ಲಿಯೇ ಬೆಳೆಯಬಹುದಾದ ಜಪಾನ್ ಮಾವಿನಹಣ್ಣುಗಳ ಬಗ್ಗೆ ಚಿತ್ರಸಹಿತ ವಿತರಣೆ ನೀಡಿದರು.

ಬೇರೆ ಬೇರೆ ಹಣ್ಣುಗಳಿಂದ ಸಾಸ್, ಜ್ಯೂಸ್, ಚಟ್ನಿ, ಬನಾನಾ ಕೆಚಪ್, ಉಪ್ಪಿನಕಾಯಿ ಸೇರಿದಂತೆ ನೂರಾರು ರೀತಿಯ ತಯಾ ರಿಕೆಗಳನ್ನು ಗಾಜಿನ ಬಾಟಲಿಗಳಲ್ಲಿ ತುಂಬಿ, ಮೌಲ್ಯವರ್ಧನೆ ಮಾಡಿ, ಆದಾಯ ಹೆಚ್ಚಿಸಿ ಕೊಳ್ಳುವ ಕುರಿತು ರೈತರಿಗೆ ಮಾಹಿತಿ ನೀಡಿ ದರು. ಮಾರುಕಟ್ಟೆ ಮಾಡುವ ಕುರಿತು ರೈತರಿಗೆ ಮಾಹಿತಿ ನೀಡುವ ಜೊತೆಗೆ ಶಿಕ್ಷಣ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಬೆಳವಲ ಫೌಂಡೇಷನ್‍ನ ಡಾ.ರಾಮಕೃಷ್ಣಪ್ಪ, ನೈಸರ್ಗಿಕ ಕೃಷಿಕ ಎ.ಪಿ.ಚಂದ್ರಶೇಖರ್, ಸಹÀಜ ಸಮೃದ್ಧದ ಕೃಷ್ಣಪ್ರಸಾದ್, ಸಹಜ ಕೃಷಿಕರಾದ ಕೊಡಗಿನ ಶಿವಕುಮಾರ್, ರಾಮನಗರದ ಸುರೇಂದ್ರ, ಗುಂಡ್ಲುಪೇಟೆಯ ಚಿನ್ನಸ್ವಾಮಿ ವಡ್ಡಗೆರೆ, ಚಾಮರಾಜನಗರದ ಮಹೇಶ್, ಮೈಸೂರಿನ ಶಿವಣ್ಣ, ಕೇರಳದ ಸುವೀಶ್ ಇನ್ನಿತರರು ಸಂವಾದದಲ್ಲಿ ಪಾಲ್ಗೊಂಡು ಮಾಹಿತಿ ವಿನಿಮಯ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಸಹಜ ಕೃಷಿಯಲ್ಲಿ ಬೆಳೆದಿದ್ದ ಗೂಸ್ ಬೆರ್ರಿ (ಆಮ್ಲ), ಕೊಡಗಿನ ದೊಡ್ಡ ಕಿತ್ತಳೆ, ಚಂದ್ರಬಾಳೆ, ನಂಜನಗೂಡು ರಸಬಾಳೆ, ದೊಡ್ಡ ಆಕಾರದ ಏಲಕ್ಕಿ ಬಾಳೆ. ನೇಂದ್ರ ಬಾಳೆ ಇನ್ನಿತರ ಹಣ್ಣುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು

Translate »