ಹಳ್ಳಿಗಳಲ್ಲಿ ಈಗ ಯುವಕರು ಜೀವನ ಕಟ್ಟಿಕೊಳ್ಳುವಂತಹ ವಾತಾವರಣವಿಲ್ಲ
ಮೈಸೂರು

ಹಳ್ಳಿಗಳಲ್ಲಿ ಈಗ ಯುವಕರು ಜೀವನ ಕಟ್ಟಿಕೊಳ್ಳುವಂತಹ ವಾತಾವರಣವಿಲ್ಲ

October 27, 2018

ಮೈಸೂರು: ಪ್ರಸ್ತುತ ಹಳ್ಳಿಗಳ ಸಾಂಸ್ಕøತಿಕ ಜೀವನ ಶೈಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಇಂದಿನ ಯುವಕರು ಜೀವನ ಕಟ್ಟಿಕೊಳ್ಳುವಂಥ ಪೂರಕ ವಾತಾವರಣವಿಲ್ಲ ಎಂದು ಮಹಾ ರಾಣಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ವಿ.ವಸಂತ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಅಖಿಲ ಭಾರ ತೀಯ ಸಾಹಿತ್ಯ ಪರಿಷತ್ ವತಿಯಿಂದ  ಲೇಖಕ ಸಾತನೂರು ದೇವರಾಜು ರಚಿತ `ಚಿಂತನ ದೀಪ್ತಿ’, `ನೆನಪುಗಳು ಸಾಯುವುದಿಲ್ಲ’, ಹಾಗೂ `ಓದು ಬರವಣಿಗೆಯ ಶತ್ರುವೇ?’, ಕೃತಿಗಳ ಕುರಿತು ಮಾತನಾಡಿದರು.

ಲೇಖಕ ದೇವರಾಜು ರಚಿತ ಕೃತಿಗಳಲ್ಲಿ ಪ್ರಸ್ತಾಪಿಸಿರುವ ವಿಷಯಗಳಲ್ಲಿ ಎಲ್ಲಿಯೂ ಆಕ್ರೋಶವಿಲ್ಲ. ವಿಚಾರಗಳನ್ನು ಗಂಭೀರ ವಾಗಿಯೂ ತೆಗೆದುಕೊಂಡಿಲ್ಲ. ಆದರೆ, `ನೆನಪುಗಳು ಸಾಯುವುದಿಲ್ಲ’ ಲೇಖನ ದಲ್ಲಿ ಸಂಕ್ರಾಂತಿ ಹಬ್ಬದ ಹಿಂದಿನ ಆಚರಣೆ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ಹಬ್ಬ ದಲ್ಲಿ ರಾಸುಗಳನ್ನು ಅಲಂಕರಿಸಿ, ಪೂಜಿಸುವ ನೆನಪುಗಳನ್ನು ಬರೆದಿದ್ದಾರೆ. ಓದುಗರಿಗೆ ಹೇಳುವ ವಿಚಾರವನ್ನು ಬಹಳ ಸೂಕ್ಷ್ಮ ವಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

ಹಳ್ಳಿಯಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ಬಹುತೇಕ ಯುವಕರು, ತನ್ನಪ್ಪ ಕೃಷಿಕ ಅಥವಾ ರೈತ ಎಂದು ಎದೆಯು ಬ್ಬಿಸಿ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಬದಲಾಗಿ ಕೃಷಿಯ ಬಗ್ಗೆ ಯುವಕರಲ್ಲಿ ಕೀಳರಿಮೆಯಿದೆ. ಏಕೆಂದರೆ, ಇವತ್ತಿನ ಕೃಷಿ ಚಟುವಟಿಕೆಗಳಲ್ಲಿ ಎಲ್ಲವೂ ಯಾಂತ್ರಿಕ ಮಯವಾಗಿದೆ. ಹಿಂದಿನಷ್ಟು ಸಂಕ್ರಾಂತಿ ಸಡಗರವಿಲ್ಲ. ಹಬ್ಬ-ಹರಿದಿನಗಳು ಕೃತಕ ಆಚರಣೆ ಆಗಿರುವುದರಿಂದ ಹಳ್ಳಿಯ ಬದುಕನ್ನು ಗ್ರಾಮೀಣ ಪ್ರದೇಶದ ಯುವ ಕರು ಕೀಳರಿಮೆಯಿಂದ ನೋಡುವಂತಾ ಗಿರುವುದು ಬೇಸರದ ಸಂಗತಿ ಎಂದರು.

ಆದರೆ, ನಗರದ ಪ್ರದೇಶದಲ್ಲಿರುವ ಯುವ ಕರು ತನ್ನ ಅಪ್ಪ ಡಿಸಿ ಅಥವಾ ಬೇರೆ ಹುದ್ದೆಯಲ್ಲಿ ರುವುದನ್ನು ಬಹಳ ಹೆಮ್ಮೆಯಿಂದ ಹೇಳು ಕೊಳ್ಳುತ್ತಾರೆ. ಹಳ್ಳಿ ಮತ್ತು ನಗರ ಪ್ರದೇಶ ದಲ್ಲಿರುವ ಜೀವನ ಶೈಲಿಯ ವ್ಯತ್ಯಾಸದ ಬಗ್ಗೆ ಲೇಖಕ ಸಾತನೂರು ದೇವರಾಜು ಅವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ ಎಂದರು. ಮೊನ್ನೆ ನಡೆದ ನವರಾತ್ರಿ ಸಂದರ್ಭ ದಲ್ಲಿ ಚಾಮುಂಡೇಶ್ವರಿ ಹಬ್ಬವನ್ನು ಇಡೀ ದೇಶವೇ ಆಚರಿಸುತ್ತಿದ್ದಾಗ, ಮೈಸೂರಿನ ಕೆಲವು ವಿಚಾರವಂತರು ಮಹಿಷಾಸುರ ಜಯಂತಿ ಆಚರಣೆ ಮಾಡಿದರು. ಆದರೆ, ನಾವು ಏಕೆ ಆಚರಣೆ ಮಾಡುತ್ತಿದ್ದೀವಿ ಎಂಬು ದನ್ನು ಸ್ಪಷ್ಟವಾಗಿ, ಸ್ಫುಟವಾಗಿ ಜನತೆಗೆ ತಿಳಿಸಲಿಲ್ಲ. ಈ ಆಚರಣೆಯಿಂದ ಸಮಾಜ ದಲ್ಲಿ ವಿಚಾರ ಮಂಥನ ಆಗುವುದಕ್ಕಿಂತ, ಜನರಲ್ಲಿ ದ್ವೇಷದ ಕಿಚ್ಚು ಹೆಚ್ಚಿಸಿತ್ತು. ಇದ ರಿಂದ ಸಮಾಜಕ್ಕೇನು ಲಾಭ ಎಂದು ಪ್ರಶ್ನಿಸಿ ದರು. ಪ್ರಗತಿಪರ ಸಾಹಿತಿಗಳು ಸಮಾಜದ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸು ತ್ತಾರೆ. ವಿಚಾರ ಕೆಣಕಿದ ನಂತರ ಅರ್ಧಕ್ಕೆ ಕೈ ಬಿಟ್ಟು ಹೋಗುತ್ತಾರೆ. ಇದರಿಂದ ವಿಚಾರ ವಂತರು ಪ್ರಶ್ನಿಸುವ ವಿಚಾರಗಳು ಸಮಾ ಜಕ್ಕೆ ಅರ್ಥವಾಗುವುದಿಲ್ಲ. ಬದಲಾಗಿ, ಸಮಾಜ ದಲ್ಲಿ ಕಿಚ್ಚು ಹಚ್ಚಿದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಲೇಖಕ ದೇವ ರಾಜು ಅವರ ಸಾಹಿತ್ಯದಲ್ಲಿರುವ ಅನೇಕ ದ್ವಂದ್ವ ಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದರು.

`ನೆನಪುಗಳು ಸಾಯುವುದಿಲ್ಲ’ ಕೃತಿಯಲ್ಲಿ ಅವನತಿಯತ್ತ ಕೃಷಿ/ಕೃಷಿಕ, ಪರೀಕ್ಷೆಯಲ್ಲ, ಸತ್ವ ಪರೀಕ್ಷೆ, ಸಾವೆಂಬ ಸ್ನೇಹಿತ, ನಾನೊಂದು  ಕನಸು ಕಂಡೆ, ಸಮಯ ನಿರ್ವಹಣೆ, ದೃಢ ನಿರ್ಧಾರ,  ಬಾಲ್ಯ ಎಷ್ಟೊಂದು ಮಧುರ, ಲಿಂಗತಾರತಮ್ಯ, ಸಮಸ್ಯೆಗಳ ಸುಳಿಯಲ್ಲಿ ನಮ್ಮ ವಿದ್ಯಾರ್ಥಿಗಳು, ನಮಸ್ಕಾರ, ಮದುವೆ ಸ್ವರ್ಗದಲ್ಲಿ ನಿಶ್ಚರ್ಯವಾಗುತ್ತದೆಯೇ? ಲೇಖನಗಳು, ಓದುಗರ ಗಮನ ಸೆಳೆಯು ತ್ತವೆ ಎಂದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಯ ದರ್ಶಿ ಡಾ.ಈ.ಸಿ.ನಿಂಗರಾಜ್ ಗೌಡ,  ಡಾ.ಕೆ.ಭೈರವಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಘುನಂದನ್ ಉಪಸ್ಥಿತರಿದ್ದರು.

Translate »