ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ

October 27, 2018

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ 10 ದಿನಗಳ ಕಾಲ `ಗಾಂಧಿಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಜೆಎಸ್‍ಎಸ್ ಅರ್ಬನ್ ಹಾತ್, ನವದೆಹ ಲಿಯ ವಸ್ತ್ರ ಮಂತ್ರಾಲಯ ಸಹಯೋಗ ದೊಂದಿಗೆ ಅ.26ರಿಂದ ನ.4ರವರೆಗೆ ಆಯೋ ಜಿಸಿರುವ ಈ ಮೇಳದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ 100 ಮಂದಿ ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ಉತ್ಕøಷ್ಟ ಕಲಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.

ಈ ಮೇಳದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಟೆರ್ರಾಕೊಟ್ಟ, ಪೇಪರ್ ಮೆಷೀ, ರತ್ನ ಕಂಬಳಿ, ಹತ್ತಿ ಜಮಖಾನ, ಅನುಕರಣೆ ಆಭರಣಗಳು, ಮರದ ಅರಗಿನ ಕಲಾ ವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ತಂಜಾ ವೂರ್/ ಮೈಸೂರು ಶೈಲಿಯ ಚಿತ್ರಕಲೆ, ಕಲಾತ್ಮಕ ಚರ್ಮದ ಚಪ್ಪಲಿಗಳು, ಗೊಂಬೆಗಳು, ಕಛ್ ಪ್ರದೇಶದ ಕಸೂತಿ. ಛತ್ತೀಸ್ ಘಡ್‍ನ ದೋಖ್ರಾ ಎರಕದ ವಸ್ತುಗಳು, ಚಂದೇರಿ/ಪಟೋಲ ಸೀರೆಗಳು, ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಶೀತಲ ಪಟ್ಟಿ, ಬಿದಿರು-ಬೆತ್ತದ ವಸ್ತುಗಳು, ಅಲಂ ಕಾರಿಕ ಹೂಗಳು, ಚಿಕನ್ ಎಂಬ್ರಾಯಿಡರಿ, ಜಮಖಾನ, ಉತ್ತರ ಪ್ರದೇಶದ ಕಲಾತ್ಮಕ ಲೋಹದ ವಸ್ತುಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಮುದ್ರಿತ ಜವಳಿ, ಬಿಹಾರದ ಮಧು ಬನಿ ಚಿತ್ರಕಲೆ, ಪೂಲಕಾರಿ, ಅರಗಿನ ಬಳೆ ಗಳು ಹಾಗೂ ಮತ್ತಿತರೆ ಆಕರ್ಷಣೀಯ ಕಲಾತ್ಮಕ ವಸ್ತುಗಳ ಪ್ರದರ್ಶನ ಮತ್ತು ಮಾರಾ ಟಕ್ಕೆ ಲಭ್ಯವಿವೆ. 10 ದಿನಗಳ ಮೇಳವು ಪ್ರತಿ ದಿನ ಬೆಳಿಗ್ಗೆ 10.30ರಿಂದ ರಾತ್ರಿ 9 ಗಂಟೆ ವರೆಗೆ ತೆರೆದಿದ್ದು, ಮದ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿಸಬಹುದಾಗಿದೆ.

ಇದೇ ಸಂದರ್ಭದಲ್ಲಿ ಪತ್ರಕರ್ತ ರವಿ ಹೆಗಡೆ ಅವರು `ಗಾಂಧಿ ಶಿಲ್ಪ ಬಜಾರ್’ ಉದ್ಘಾಟಿಸಿ, ಮಾತನಾಡಿ, ನಾನು ದೆಹಲಿಗೆ ಹೋದಾಗ ತಪ್ಪದೇ ಬೇಟಿ ನೀಡುವ ಜಾಗ ಡೆಲ್ಲಿ ಹಾತ್. ಅಲ್ಲಿ ಅದ್ಭುತವಾದ ಕರಕು ಶಲ ವಸ್ತುಗಳನ್ನು ನೋಡುವುದಲ್ಲದೇ, ಬೇರೆ ಬೇರೆ ರಾಜ್ಯಗಳ ತಿಂಡಿ, ತಿನಿಸುಗಳು, ಊಟ ಪಾನೀಯಗಳು ಒಂದೇ ಸ್ಥಳದಲ್ಲಿ ಸಿಗಲಿವೆ. ಅಂಥಹ ಒಂದು ಜಾಗ ಕರ್ನಾಟಕದಲ್ಲಿಯೂ ಆಗಬೇಕೆಂದು ಸುಮಾರು 6 ವರ್ಷಗಳಿಂದ ಮಂತ್ರಿಗಳಿಗೆ ಮನವಿ ಮಾಡುತ್ತಿದ್ದೆ. ದೆಹಲಿ ಹಾತ್ ರೀತಿಯಲ್ಲಿ ಕರ್ನಾಟಕದಲ್ಲೂ ಮಾಡಲು 2 ಬಾರಿ ಬಜೆಟ್‍ನಲ್ಲಿ ಸೇರಿಸಲಾಗಿತ್ತು. ಆದರೆ ಜಾರಿಯಾಗಿರಲಿಲ್ಲ. ಮೈಸೂರಿನಲ್ಲಿ ಜೆಎಸ್‍ಎಸ್ ಸಂಸ್ಥೆಯವರು ಈಗಾಗಲೇ ಈ ರೀತಿಯಾಗಿ 10 ವರ್ಷದ ಹಿಂದೆಯೇ ಮಾಡಿದ್ದಾರೆ ಎಂದರು. ಇದನ್ನು ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟದ ರೀತಿ ಪ್ರಸಿದ್ಧಿಗಳಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಬೆಟ್ಸೂರಮಠ, ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಬಸಪ್ಪ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ರಂಗನಾಥಯ್ಯ, ಭಾರತ ಸರ್ಕಾರ ಜವಳಿ ಮಂತ್ರಾಲಯ ಕರಕುಶಲ ಕೇಂದ್ರದ ಸಹಾ ಯಕ ನಿರ್ದೇಶಕ ಪಿ.ಶಶಿಧರ್, ಸಂಯೋ ಜಕ ರಾಕೇಶ್ ರೈ ಮತ್ತಿತರರಿದ್ದರು.

Translate »