ಮತ್ತೆ ಸಿಎಂ ಆಗುವ ದುರಾಸೆ ನನಗಿಲ್ಲ
ಮೈಸೂರು

ಮತ್ತೆ ಸಿಎಂ ಆಗುವ ದುರಾಸೆ ನನಗಿಲ್ಲ

October 27, 2018

ಶಿವಮೊಗ್ಗ: ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ದುರಾಸೆ ನನಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮತ್ತೊಮ್ಮೆ ಸಿಎಂ ಆಗುವ ದುರಾಸೆ ನನಗೆ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದರೆ ನೋಡೋಣ ಎಂದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತೇನೆ ಎನ್ನುವುದು ಕೇವಲ ಭ್ರಮೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಪ ವಿತ್ರ ಎಂದು ಹೇಳುತ್ತಾರೆ. ಆದರೆ, ಜೆಡಿಎಸ್ ಜತೆ ಈ ಹಿಂದೆ ಬಿಜೆಪಿ ಮೈತ್ರಿ ಮಾಡಿಕೊಂಡಿರಲಿಲ್ವಾ? ಬೇರೆ ರಾಜ್ಯಗಳಲ್ಲೂ ಇತರೆ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿಲ್ವಾ? ಇದು ಪವಿತ್ರ ಮೈತ್ರಿಯೋ ಎಂದು ವ್ಯಂಗ್ಯವಾಡಿದರು. ಮೈತ್ರಿ ಸರ್ಕಾರಕ್ಕೂ, ಉಪ ಚುನಾವಣಾ ಫಲಿ ತಾಂಶಕ್ಕೂ ಸಂಬಂಧವಿಲ್ಲ. ಐದು ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ. ಈ ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ ಎಂದರು.

Translate »