ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ: ಹೆಚ್.ಡಿ.ರೇವಣ್ಣ ವಿಶ್ವಾಸ
ಮೈಸೂರು

ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ: ಹೆಚ್.ಡಿ.ರೇವಣ್ಣ ವಿಶ್ವಾಸ

June 18, 2018

ಹುಬ್ಬಳ್ಳಿ: ಐದು ವರ್ಷಗಳ ಕಾಲ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದೃಢವಾಗಿ ಹೇಳಿದರು. ನಗರದಲ್ಲಿಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾವು ಸಂಪೂರ್ಣ ಐದು ವರ್ಷಗಳೂ ಅಧಿಕಾರದಲ್ಲಿ ಮುಂದುವರೆಯುತ್ತೇವೆ ಎಳ್ಳಷ್ಟೂ ಶಂಕೆ ಬೇಡ ಎಂದು ಅವರು ನುಡಿದರು. ನನಗೆ ಸೂಪರ್ ಸಿ.ಎಂ. ಎಂದು ಪಟ್ಟಕಟ್ಟಿ ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ ಎಂದು ಅವರು ನಗುತ್ತಲೇ ನುಡಿದ ಅವರು, ನಾನು ಲೋಕೋಪಯೋಗಿ ಇಲಾಖೆ ಕೆಲಸಗಳನ್ನು ಮಾತ್ರ ಮಾಡಿರುವೆ. ಅದನ್ನು ಹೊರತುಪಡಿಸಿ ಬೇರೇನೂ ಮಾಡಿಲ್ಲ ಆದರೂ ನನಗೆ ಈ ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ನನ್ನ ಮತ್ತು ಸಚಿವ ಡಿ.ಕೆ.ಶಿವಕುಮಾರ್ ನಡುವೆ ಸಂಬಂಧ ಚೆನ್ನಾಗಿಯೇ ಇದೆ ಆದರೆ ನಮ್ಮ ನಡುವೆ ಸುಮ್ಮನೇ ಜಗಳ ತಂದಿಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದರು.ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಹಲವಾರು ಇಲಾಖಾ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಿ.ಆರ್. ಟಿ.ಎಸ್. ಅಧಿಕಾರಿಗಳೊಂದಿಗೆ ಹುಬ್ಬಳ್ಳಿ-ಧಾರವಾಡ ನಡುವಿನ ಬಿ.ಆರ್.ಟಿ.ಎಸ್. ಕಾಮಗಾರಿಯ ಮಂದಗತಿ ಮತ್ತಿತರ ವಿಷಯಗಳ ಕುರಿತಂತೆಯೂ ಅವರು ಚರ್ಚೆ ನಡೆಸಿದರುಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »