ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಹಿನ್ನೆಲೆ: ಈ ವಿಧಿಗಳಲ್ಲಿ ಏನಿದೆ
ಮೈಸೂರು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಹಿನ್ನೆಲೆ: ಈ ವಿಧಿಗಳಲ್ಲಿ ಏನಿದೆ

August 6, 2019

ಸಂವಿಧಾನದ ವಿಧಿ 370
ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದ ವಿಚಾರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ಅಸ್ತಿತ್ವಕ್ಕೆ ಬಂದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರವಾಗಿ ಉಳಿಯುವ ಬಯಕೆಯನ್ನು ಹೊಂದಿದ್ದರು. ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೋರುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟು ಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ಅನ್ನು ಸೇರ್ಪಡೆ ಗೊಳಿಸಲಾಯಿತು. ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ 6 ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನ ವನ್ನು ಹೊಂದಬಹುದು. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯ ವಾಗುತ್ತದೆ. ಭಾರತ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿ ಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗು ವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ. ರಾಷ್ಟ್ರಪತಿ ಏನಾದರೂ ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರ್ಕಾರದ ಶಿಫಾರಸು ಅಗತ್ಯ.

ಸಂವಿಧಾನದ ವಿಧಿ 35(ಎ)
ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.
ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು. ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ-ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ. ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತ ವಾಗಿ ನೆಲೆಸುವಂತಿಲ್ಲ. ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರ್ಕಾರದ ವಿದ್ಯಾರ್ಥಿವೇತನ ಪಡೆಯುವಂತಿಲ್ಲ.ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ. ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ. ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 35(ಎ)ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು -ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ. ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವ ಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ. ಆದರೆ, ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಜನಸಾಮಾನ್ಯರು ಹಾಗೂ ಗಡಿ ಭದ್ರತಾ ಪಡೆಗಳ ನಡುವಿನ ನಿರಂತರ ಚಕಮಕಿಯ ಕಾರಣದಿಂದಾಗಿಯೇ ಕಲಂ 370 ಹಾಗೂ 35(ಎ) ತಿದ್ದುಪಡಿ ತರಬೇಕು ಎಂಬ ಕೂಗು ಬಲವಾಗಿಯೇ ಕೇಳಿಬರುತ್ತಿತ್ತು. ಈ ಕುರಿತು ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ, ಆದರೆ, ಇದೀಗ ಈ ಕೂಗಿಗೆ ರಾಜಕೀಯ ಬಣ್ಣವೂ ಪ್ರಾಪ್ತಿಯಾಗಿದ್ದು, ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕಾರ್ಯರೂಪಕ್ಕೆ ತಂದಿದೆ.

ಈ ವಿಧಿಗಳ ರದ್ಧತಿ ಫಲವೇನು?
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗುತ್ತಿದೆ. ಕೇಂದ್ರದ ಎಲ್ಲ ಕಾನೂನು ಗಳು, ಇನ್ನು ನೇರವಾಗಿ ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯ ಆಗಲಿದೆ. ಕಾಶ್ಮೀರದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಇನ್ನು ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿರು ತ್ತದೆ. ಇಲ್ಲಿ ರಾಜ್ಯಪಾಲರೇ ಪರಮಾಧಿಕಾರ ಹೊಂದಿರುತ್ತಾರೆ. ಇದುವರೆಗೆ ಕೆಲವರಿಗೆ ಮಾತ್ರ ದೊರೆಯುತ್ತಿದ್ದ ತಾರತಮ್ಯದ ಸೌಲಭ್ಯಗಳು ಇರುವುದಿಲ್ಲ. ಒಟ್ಟಾರೆ ಜಮ್ಮು ಮತ್ತು ಕಾಶ್ಮೀರವು ಭಾರತ ಸರ್ಕಾರದ ಸಂಪೂರ್ಣ ಹಿಡಿತಕ್ಕೆ ಬರುತ್ತದೆ. ನಿರ್ಭೀತಿಯಿಂದ ಅಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಾಡಬಹುದು ಜಮ್ಮು-ಕಾಶ್ಮೀರಕ್ಕೆ ದಿಲ್ಲಿಯಂತೆಯೇ ಪ್ರತ್ಯೇಕ ಶಾಸಕಾಂಗ, ವಿಧಾನಸಭೆ, ಸರ್ಕಾರ ಇರುತ್ತದೆ. ಲಡಾಖ್ ಪ್ರದೇಶವೂ ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಇಲ್ಲಿ ಪ್ರತ್ಯೇಕ ಶಾಸಕಾಂಗ ಇರುವುದಿಲ್ಲ (ಚಂಡೀಗಢದಂತೆ).

ಇನ್ನು ದೇಶದ ಯಾವುದೇ ಪ್ರಜೆ ಅಲ್ಲಿ ಜಮೀನು ಖರೀದಿಸಬಹುದು. ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಇರುವುದಿಲ್ಲ, ಭಾರತದ್ದೇ ಏಕ ಧ್ವಜ. ಕಾಶ್ಮೀರದವರಿಗೆ ದ್ವಿಪೌರತ್ವ ಇನ್ನು ಇರುವುದಿಲ್ಲ. ಅವರು ಭಾರತದ ಪ್ರಜೆಯೇ. ಇನ್ನು ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಹೂಡಿಕೆ ಮಾಡಿ, ಕೈಗಾರಿಕೆ, ಉದ್ಯಮಗಳ ಅಭಿವೃದ್ಧಿಗೆ ಮುಂದಾಗಬಹುದು. ಬೇರೆ ರಾಜ್ಯದಿಂದ ಬಂದು ನೆಲೆಸಿದವರಿಗೂ ಅಲ್ಲಿ ಮತದಾನದ ಹಕ್ಕು ಇರುತ್ತದೆ. ಇತರ ರಾಜ್ಯಗಳಲ್ಲಿರು ವಂತೆಯೇ ಅಲ್ಲಿ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ. ಕಾಶ್ಮೀರದ ಹುಡುಗಿಯರು ದೇಶದ ಬೇರೆ ರಾಜ್ಯಗಳ/ಜಮ್ಮು ಮತ್ತು ಕಾಶ್ಮೀರದ ಕಾಯಂ ಅಲ್ಲದ ನಿವಾಸಿ ಹುಡುಗರನ್ನು ವರಿಸಿದರೆ, ಅವರ ಮಕ್ಕಳು ಈ ರಾಜ್ಯದಲ್ಲಿ ಉತ್ತರಾಧಿಕಾರದ ಹಕ್ಕುಗಳು ಇರಲಿಲ್ಲ. ಇನ್ನು ಈ ನಿಯಮವೂ ಹೋಗುತ್ತದೆ. ಕಳೆದ ಕೆಲವು ದಿನಗಳಿಂದ ಜಮ್ಮು -ಕಾಶ್ಮೀರದಲ್ಲಿ ಯುದ್ಧದ ಪರಿಸ್ಥಿತಿ ಇದೆ ಎಂದು ಪ್ರತಿಪಕ್ಷಗಳು ಜನರ ದಾರಿತಪ್ಪಿಸಿದ್ದೇಕೆ ಎಂಬುದಕ್ಕೂ ಈಗ ಉತ್ತರ ಸಿಕ್ಕಿದೆ. ಸಂವಿಧಾನದ 370ನೇ ವಿಧಿ ರದ್ದತಿಯಿಂದ ವಿರೋಧಿಗಳು, ಉಗ್ರಗಾಮಿಗಳಿಂದ ಉಂಟಾಗಬಹುದಾದ ಯಾವುದೇ ಸಂಭವನೀಯ ದಾಳಿ, ಹಿಂಸೆ ತಡೆಗಟ್ಟಲು ಸಾವಿರಾರು ಸಂಖ್ಯೆಯಲ್ಲಿ ಸೇನಾಪಡೆಗಳನ್ನು ಮುನ್ನೆಚ್ಚರಿಕೆಗಾಗಿ ನೇಮಿಸಲಾಗಿತ್ತು.

ಕಾಶ್ಮೀರಿಗಳಿಗೆ ಸಂವಿಧಾನ ವಿಧಿ 35ಎ ಬಂದಿದ್ದು ಹೇಗೆ…
ನವದೆಹಲಿ, ಆ.5- ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‍ಡಿಎ ಸರ್ಕಾರ ಸೋಮವಾರ ಭಾರಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರಕ್ಕೆ ಸ್ವಾಯತ್ತತೆ ಕಲ್ಪಿಸುವ 370ನೇ ವಿಧಿ ಯನ್ನು ರದ್ದುಪಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಈ ಸಂಬಂಧ ಹೇಳಿಕೆ ನೀಡಿದ ವೇಳೆ ಪ್ರತಿಪಕ್ಷ ಗಳು ಭಾರಿ ಪ್ರತಿಭಟನೆ ನಡೆಸಿದವು ವಿರೋಧಪಕ್ಷಗಳ ಆಕ್ರೋ ಶದ ನಡುವೆಯೇ ಅಮಿತ್ ಶಾ ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷಾಧಿಕಾರಗಳನ್ನು ರದ್ದುಪಡಿಸಲು ಸಂಬಂಧಿಸಿದ ವಿಧೇಯಕ ಗಳನ್ನು ಮಂಡಿಸಿದರು. ಸಂವಿಧಾನದ 35ಎ ವಿಧಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ.

ಜಮ್ಮು-ಕಾಶ್ಮೀರದ ಖಾಯಂ ನಿವಾಸಿ ಯಾರು ಎಂಬು ದನ್ನು 35ಎ ವಿಧಿ ವಿವರಿಸುತ್ತದೆ. ಅವರ ಸ್ಥಿರಾಸ್ತಿ ಹಕ್ಕುಗಳನ್ನು ನಿರ್ಧರಿಸುತ್ತದೆ. ಕಲಂ -35 ಎ ಅನ್ನು 1954 ರ ರಾಷ್ಟ್ರಪತಿ ಆದೇಶದ ಮೂಲಕ ಸಂವಿಧಾನಕ್ಕೆ ಸೇರ್ಪಡೆಗೊಳಿಸಲಾಯಿತು.

35(ಎ)ರ ಪ್ರಕಾರ ….. 1954ರ ಮೇ 14ರ ಮೊದಲು ಅಥವಾ ನಂತರ ರಾಜ್ಯದಲ್ಲಿ ಜನಿಸಿದ ಅಥವಾ 10 ವರ್ಷಗಳ ಕಾಲ ರಾಜ್ಯದಲ್ಲಿ ವಾಸಿಸಿದ ವ್ಯಕ್ತಿಯು ಕಾಶ್ಮೀರದ ಖಾಯಂ ನಿವಾಸಿ ಯಾಗುತ್ತಾನೆ. ವ್ಯಕ್ತಿಯು ರಾಜ್ಯದಲ್ಲಿ ಸ್ಥಿರಾಸ್ತಿ ಹೊಂದಬಹುದು. ರಾಜ್ಯ ಸರ್ಕಾರದ ಉದ್ಯೋಗ, ಸರ್ಕಾರಿ ವಿದ್ಯಾರ್ಥಿ ವೇತನ ಮುಂತಾದ ವಿಶೇಷ ಸೌಲಭ್ಯ ಪಡೆಯಬಹುದು. ರಾಜ್ಯದಲ್ಲಿ ದೀರ್ಘಕಾಲ ವಾಸಿಸುತ್ತಿರುವವರಿಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ನೀಡಬಹುದು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ, ರಾಜ್ಯದ ನಿವಾಸಿ ಯಾರು ಎಂದು ವ್ಯಾಖ್ಯಾನಿಸಿ ಕಾನೂನುಗಳನ್ನು ಮಾಡುವ ಅಧಿಕಾರವನ್ನು ವಿಧಿ 35 ಎ ನೀಡುತ್ತದೆ. ರಾಜ್ಯ ವಿಧಾನಸಭೆ ವಿಧಿ 35 ಎ ಅಡಿ 3ನೇ ಎರಡು ಬಹುಮತ ದಿಂದ ಅಧಿಕಾರ ಚಲಾಯಿಸಬಹುದು. ಕಾಶ್ಮೀರದ ಮಹಿಳೆ ಇತರ ರಾಜ್ಯಗಳ ವ್ಯಕ್ತಿಯನ್ನು ಮದುವೆಯಾದರೆ ಈ ರಾಜ್ಯದಲ್ಲಿ ಆಸ್ತಿ ಯನ್ನು ಹೊಂದಲು ಆಕೆಗೆ ಸಾಧ್ಯವಿಲ್ಲ. ಅವಳ ಮಕ್ಕಳಿಗೆ ಸಹ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ. ಮಕ್ಕಳಿಗೆ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ. ಜುಲೈ 1952ರಲ್ಲಿ ಅಂದಿನ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಶೇಖ್ ಅಬ್ದುಲ್ಲಾ( ಫಾರೂಕ್ ಅಬ್ದುಲ್ಲಾ ತಂದೆ, ಓಮರ್ ಅಬ್ದುಲ್ಲಾ ತಾತ) ಮತ್ತು ಆಗಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ನಡುವೆ ಮಾಡಿಕೊಂಡ ಒಪ್ಪಂ ದದ ಪ್ರಕಾರ, ಎಲ್ಲಾ ಕಾಶ್ಮೀರಿಗಳಿಗೆ ಭಾರತೀಯ ಪೌರತ್ವ ನೀಡ ಲಾಗುತ್ತದೆ. ರಾಜ್ಯದ ಜನರಿಗೆ ವಿಶೇಷ ಹಕ್ಕುಗಳನ್ನು ನೀಡಲು ಕಾನೂನುಗಳನ್ನು ರೂಪಿಸುವ ಅಧಿಕಾರ ವಿಧಾನಸಭೆಗೆ ನೀಡಲಾ ಗುತ್ತದೆ. ಈ ನಿಬಂಧನೆಯನ್ನು ಮೇ 14, 1954ರಂದು ರಾಷ್ಟ್ರಪತಿ ಆದೇಶದ ಪ್ರಕಾರ 35 ಎ ವಿಧಿ ಅಡಿಯಲ್ಲಿ ಸೇರಿಸಲಾಯಿತು.

Translate »