ಜಮ್ಮು-ಕಾಶ್ಮೀರ ಪುನಾರಚನಾ ಮಸೂದೆಗೆ ಲೋಕಸಭೆ ಅಂಗೀಕಾರ
ಮೈಸೂರು

ಜಮ್ಮು-ಕಾಶ್ಮೀರ ಪುನಾರಚನಾ ಮಸೂದೆಗೆ ಲೋಕಸಭೆ ಅಂಗೀಕಾರ

August 7, 2019

ನವದೆಹಲಿ, ಆ. 6- ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಿಗೆ ಕೇಂದ್ರಾ ಡಳಿತ ಸ್ಥಾನಮಾನ ನೀಡುವ ಜಮ್ಮು-ಕಾಶ್ಮೀರ ಪುನಾರಚನಾ ಮಸೂದೆ ಲೋಕ ಸಭೆಯಲ್ಲಿ ಅಂಗೀಕಾರವಾಗಿದೆ. ಇದ ರೊಂದಿಗೆ ಕಾನೂನಾಗಿ ಜಾರಿಗೊಂಡಿದೆ.

ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ನಂತರ ಗೃಹ ಸಚಿವ ಅಮಿತ್ ಷಾ ಮಸೂದೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕರ ಆಕ್ಷೇಪಗಳಿಗೆ ಸಮರ್ಥ ಉತ್ತರ ನೀಡಿದರು. ಈ ಮಧ್ಯೆ ಸರ್ಕಾರದ ನಡೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಅಧಿ ರಂಜನ್ ಚೌಧರಿ ವಿವಾ ದಕ್ಕೆ ಗುರಿಯಾದರು. ಅಂತೂ ಸುದೀರ್ಘ ಚರ್ಚೆಯ ನಂತರ ಮಸೂದೆ ಲೋಕ ಸಭೆಯಲ್ಲಿ ಅಂಗೀಕಾರಗೊಂಡು, ಕಾನೂ ನಾಗಿ ಜಾರಿಗೊಂಡಿದೆ. ಈಗಾಗಲೇ ನಿನ್ನೆ ಮಸೂದೆ ರಾಜ್ಯಸಭೆ ಅಂಗೀಕಾರ ಪಡೆದಿತ್ತು.

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ರಾಜ್ಯಸಭೆಯಲ್ಲಿ ವಿಪಕ್ಷಗಳ ನಡುವೆಯೇ ಒಡಕು ಮೂಡಿದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ.

ಲೋಕಸಭೆಯಲ್ಲಿ ಮಸೂದೆ ಮಂಡನೆ ಯಾಗುತ್ತಿದ್ದಂತೆ ಟ್ವೀಟ್ ಮಾಡಿದ ಕಾಂಗ್ರೆಸ್ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಜಮ್ಮು-ಕಾಶ್ಮೀರ ಪುನರ್‍ರಚನೆ ಮಸೂದೆ ಯನ್ನು ನಾನು ಬೆಂಬಲಿಸುತ್ತೇನೆ. ಸಾಂವಿ ಧಾನಿಕ ಪ್ರಕ್ರಿಯೆ ಮೂಲಕ ಇದನ್ನು ಮಾಡಿ ದ್ದರೆ ಮತ್ತಷ್ಟು ಸೂಕ್ತವಾಗಿರುತ್ತಿತ್ತು. ಹೀಗೆ ಮಾಡಿದ್ದರೆ ಯಾವುದೇ ಆಕ್ಷೇಪಗಳಿಗೆ ಜಾಗ ವಿರುತ್ತಿರಲಿಲ್ಲ. ಆದರೂ ಕೇಂದ್ರ ಸರ್ಕಾ ರದ ನಡೆ ದೇಶದ ಹಿತಾಸಕ್ತಿಗನುಗುಣ ವಾಗಿರುವುದರಿಂದ ಈ ಮಸೂದೆಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಇತಿಹಾಸ ಮೋದಿಯನ್ನು ಸ್ಮರಿಸಲಿದೆ: ಜಮ್ಮು-ಕಾಶ್ಮೀರ ಪುನರ್‍ರಚನೆ ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಷಾ, ದೇಶದ ಬಹುತೇಕ ಜನರ ಆಶಯವಾಗಿದ್ದ 370ನೇ ವಿಧಿಯನ್ನು ರದ್ದುಪಡಿಸುವ ವಿಚಾರದಲ್ಲಿ ಕೈಗೊಂಡಂತಹ ದಿಟ್ಟ ನಿರ್ಧಾರಕ್ಕೆ ಇತಿಹಾಸ ಪ್ರಧಾನಿ ಮೋದಿಯನ್ನು ಸ್ಮರಿಸಲಿದೆ ಎಂದು ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಪ್ರಾಣ ಬೇಕಾದರೂ ಕೊಡುತ್ತೇವೆ ಎಂದು ಗೃಹ ಸಚಿವ ಅಮಿತ್ ಷಾ ಕಾಂಗ್ರೆಸ್‍ಗೆ ಎದಿರೇಟು ನೀಡಿದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿರುವುದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾತನಾಡಿದ ಷಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಸಹ ಸೇರುತ್ತದೆ. ಹಾಗಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಪ್ರಾಣ ಬೇಕಾದರೂ ಕೊಡುತ್ತೇವೆ ಎಂದು ವಿಪಕ್ಷಗಳಿಗೆ ಸವಾಲೆಸೆದರು.

ಜಮ್ಮು-ಕಾಶ್ಮೀರ ವಿಧೇಯಕವನ್ನು ಮಂಡಿಸಿದ ವೇಳೆ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಷಾ ಕಾಶ್ಮೀರ ಕುರಿತು ನಿಮ್ಮ ನಿಲುವೇನು? ಇಲ್ಲಿನ ಸಮಸ್ಯೆಯನ್ನು ಹಾಗೇ ಉಳಿಸಿಕೊಂಡು ಬರಬೇಕಿತ್ತಾ? ಎಂದು ಪ್ರಶ್ನಿಸಿದರು.

ನಾವು ಜಮ್ಮು-ಕಾಶ್ಮೀರದ ಬಗ್ಗೆ ಮಾತನಾಡಿದರೆ, ಅದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಸಹ ಸೇರುತ್ತದೆ. ಒಂದು ವೇಳೆ ಪಾಕ್ ಆಕ್ರಮಿತ ಕಾಶ್ಮೀರ ಇದರಲ್ಲಿ ಸೇರುವುದಿಲ್ಲ ಎಂದರೆ ಅದನ್ನು ವಶಪಡಿಸಿಕೊಳ್ಳಲು ನಾವು ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಅಮಿತ್ ಷಾ ಹೇಳಿದರು. ಅದಾಗ್ಯೂ ಸಂವಿಧಾನದ ಪ್ರಕಾರವೇ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಹಾಗಾಗಿಯೇ ನಮ್ಮ ಪ್ರಸ್ತಾಪಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಹೇಳಿದರು.

ನನ್ನ ಗೃಹಬಂಧನದಲ್ಲಿರಿಸಲಾಗಿದೆ: ನನಗೆ ಗೃಹ ಬಂಧನ ವಿಧಿಸಲಾಗಿದೆ. ಆದರೆ, ನನ್ನನ್ನು ಗೃಹಬಂಧನದಲ್ಲಿ ಇರಿಸಿಲ್ಲ ಎಂದು ಗೃಹ ಸಚಿವ ಅಮಿತ್ ಷಾ ಸಂಸತ್‍ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಜಮ್ಮ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ. ನನ್ನ ರಾಜ್ಯ ಹೊತ್ತಿ ಉರಿಯುತ್ತಿರಬೇಕಾದರೆ ನಾನು ಸ್ವಇಚ್ಛೆಯಿಂದ ಮನೆಯಲ್ಲಿ ಇರಲಾದೀತೆ. ನನ್ನ ಮಗ ಹಾಗೂ ನಮ್ಮ ಕಡೆಯ ವರನ್ನು ಜೈಲಿಗೆ ಹಾಕಲಾಗಿದೆ. ನಾನು ನಂಬಿದ ಭಾರತ ಇದಲ್ಲ ಎಂದು ಫಾರೂಕ್ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮನೆಯಿಂದ ಹೊರಬಂದರೆ ಪ್ರತಿಭಟಿಸು ತ್ತೇವೆ, ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂಬ ಕಾರಣಕ್ಕೆ ನಮ್ಮನ್ನು ಗೃಹಬಂಧನ ದಲ್ಲಿರಿಸಲಾಗಿದೆ. ನಾವೇನೂ ಗುಂಡಿನ ದಾಳಿ ನಡೆಸಿಲ್ಲ. ಗ್ರನೈಡ್ ದಾಳಿ ನಡೆಸಿಲ್ಲ, ಕಲ್ಲು ತೂರಾಟಗಾರರೂ ಅಲ್ಲ. ಆದರೆ, ಶಾಂತಿಯುತ ಪರಿಹಾರದಲ್ಲಿ ನಂಬಿಕೆ ಇರುವವರು ನಮ್ಮನ್ನು ಮಾಧ್ಯಮದವರೇ ರಕ್ಷಿಸಬೇಕೆಂದು ಭಾವೋದ್ವೇಗದಿಂದ ನುಡಿದರು.

ಮಾಧ್ಯಮದ ಮುಂದೆ ಹಾಜರು: ಆದರೆ, ಫಾರೂಕ್ ಅಬ್ದುಲ್ಲಾ ಇಂದು ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾನು ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ ಬಯಸುತ್ತೇನೆ. ಪ್ರಜಾತತ್ತಾತ್ಮಕತೆ ಮತ್ತ ಜಾತ್ಯಾತೀತ ವಾದದಲ್ಲಿ ನಂಬಿಕೆ ಉಳ್ಳವನಾಗಿದ್ದೇನೆ ಎಂದು ಹೇಳಿದರು. ಈ ಮಧ್ಯೆ ಕಾಂಗ್ರೆಸ್, ಎನ್‍ಸಿಪಿ ಹಾಗೂ ಡಿಎಂಕೆ ನಾಯಕರು ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆಯೇ ಇಲ್ಲ ಬಂಧಿಸಲಾಗಿದೆಯೇ ಎಂದು ಬಹಿರಂಗಪಡಿ ಸುವಂತೆ ಗೃಹ ಸಚಿವ ಅಮಿತ್ ಷಾ ಅವರನ್ನು ಲೋಕಸಭೆಯಲ್ಲಿ ಆಗ್ರಹಪಡಿಸಿದರು.

ಬಂಧಿಸಿಲ್ಲ: ಇದಕ್ಕೆ ಪ್ರತಿಕ್ರಿಯಿಸದ ಅಮಿತ್ ಷಾ, ಫಾರೂಕ್ ಅಬ್ದುಲ್ಲಾರನ್ನು ಬಂಧಿಸಿಯೂ ಇಲ್ಲ ಅಥವಾ ವಶಕ್ಕೆ ಪಡೆದುಕೊಂಡಿಲ್ಲ. ಅವರ ಮನೆಯಲ್ಲಿ ಮುಕ್ತವಾಗಿದ್ದಾರೆ ಎಂದರು.

Translate »