ಕೆಸರು ಗುಂಡಿಗೆ ಸಿಲುಕಿದ್ದ ಕಾಡಾನೆ ರಕ್ಷಣೆ
ಹಾಸನ

ಕೆಸರು ಗುಂಡಿಗೆ ಸಿಲುಕಿದ್ದ ಕಾಡಾನೆ ರಕ್ಷಣೆ

November 28, 2018

ಹಾಸನ: ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆ ಯುತ್ತಿದೆ. ಕಾಮಗಾರಿಗೆ ಬೇಕಾ ಗುವಂತಹ ಮಣ್ಣನ್ನು ಕೆಲವೆಡೆ ಗುತ್ತಿಗೆದಾರರು ಅವೈಜ್ಞಾನಿಕವಾಗಿ ತೆಗೆದಿದ್ದಾರಂತೆ. ಹೀಗೆ ಮಣ್ಣನ್ನು ಹಲವರ ಜಮೀನಿನಲ್ಲಿ ತೆಗೆದಿದ್ದಾರೆ. ಹಾಗಾಗಿ, ಇತ್ತೀಚೆಗಷ್ಟೇ ಮಳೆಯಾದ ಕಾರಣ ನೀರು ಗುಂಡಿಯಲ್ಲಿ ಶೇಖರಣೆಯಾಗಿ ಕೆಸರು ತುಂಬಿಕೊಂಡಿದೆ. ಈ ಕೆಸರಿನ ಗುಂಡಿಗೆ ಕಾಡಾನೆ ಕಾಲು ಜಾರಿ ಬಿದ್ದು, ಮೇಲೇ ಳಲು ಸಾಧ್ಯವಾಗದೆ ರೋಧಿಸು ತ್ತಿತ್ತು. ತಾಯಿ ಆನೆ ಕೆಸರಿನಲ್ಲಿ ಸಿಲುಕಿ ಕೊಂಡ ಹಿನ್ನೆಲೆ ಮರಿ ಆನೆಯೂ ಕೂಡ ಅದರ ಜೊತೆಯಲ್ಲಿಯೇ ಇದ್ದು, ಅಮ್ಮನ ಪರಿಸ್ಥಿತಿ ಕಂಡು ಮರಿಯಾನೆ ಸಂಕಟ ಪಡುತ್ತಿತ್ತು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ 2 ದಿನಗಳ ಕಾರ್ಯಾಚರಣೆ ನಡೆಸಿ, ಆನೆ ಯನ್ನು ಮೇಲೆತ್ತುವಲ್ಲಿ ಯಶಸ್ವಿ ಯಾಗಿದ್ದಾರೆ.

‘ಆನೆ ಹಸಿವಿನಿಂದ ಬಳಲಿ ನಿತ್ರಾಣಗೊಂಡಿತ್ತು. ಆದರಿಂದ ಆನೆಯನ್ನು ಮೇಲೆತ್ತಲು ಸ್ವಲ್ಪ ಅಡಚಣೆಯಾಯಿತು. ಬಳಿಕ, ಎರಡು ಸಾಕಾನೆಗಳನ್ನು ಕರೆತಂದು ಆನೆಯನ್ನು ಮೇಲೆ ತ್ತಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

Translate »