ರಾಮನಾಥಪುರದಲ್ಲಿ ಕಾರ್ತಿಕ ಪೂಜೆ, ರಾಮೇಶ್ವರಸ್ವಾಮಿ ಉತ್ಸವ
ಹಾಸನ

ರಾಮನಾಥಪುರದಲ್ಲಿ ಕಾರ್ತಿಕ ಪೂಜೆ, ರಾಮೇಶ್ವರಸ್ವಾಮಿ ಉತ್ಸವ

November 28, 2018

ರಾಮನಾಥಪುರ: ಕಾರ್ತಿಕ ಮಾಸ ಮತ್ತು ವಿಷ್ಣು ದೀಪೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ಇಲ್ಲಿಯ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ, ಶ್ರೀ ಸುಬ್ರ ಹ್ಮಣ್ಯಸ್ವಾಮಿ, ವರದಾನ ಬಸವೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಉತ್ಸ ವಾದಿಗಳು ವಿಜೃಂಭಣೆಯಿಂದ ಜರುಗಿದವು.

ಪಟ್ಟಣದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವ ಸ್ಥಾನದ ಸಮಿತಿ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿಯಿಂದ ಕಾವೇರಿ ನದಿ ಸೋಪಾನಕಟ್ಟೆ ಸ್ವಚ್ಛಗೊಳಿಸ ಲಾಯಿತು. ಮೆಟ್ಟಿಲುಗಳ ಮೇಲೆ ನೂರಾರು ಭಕ್ತರು ಕಾರ್ತಿಕ ದೀಪ ಬೆಳಗಿಸಿದರು. ಅಲ್ಲದೆ, ಶ್ರೀ ಸುಬ್ರಹ್ಮಣ್ಯಸ್ವಾಮಿ, ರಾಮೇಶ್ವರ ಸ್ವಾಮಿ ದೇವಸ್ಥಾನಗಳ ಆವರಣಗಳಲ್ಲೂ ಭಕ್ತರು ಹಣತೆ ಹಚ್ಚಿದರು. ಇದರಿಂದ ದೇವಾಲಯಗಳು ಕಂಗೊಳಿಸಿದವು. ವಿದ್ಯುತ್ ದೀಪಗಳಿಂದ ಅಲಂಕಾರ ಸಹ ಮಾಡಲಾಗಿತ್ತು.

ಚಿಕ್ಕ ರಥೋತ್ಸವ: ರಾಮೇಶ್ವರಸ್ವಾಮಿ ದೇವಾಲಯದಲ್ಲಿ ಚಿಕ್ಕ ರಥೋತ್ಸವ ಜರುಗಿತು. ರಾಮೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತ ಚಿಕ್ಕ ರಥವನ್ನು ಮಂಗಳವಾದ್ಯ, ಮದ್ದಳೆ ನಿನಾದ ಹಾಗೂ ವಿಪ್ರರು, ಸುಮಂಗಲಿಯರ ವೇದ- ಮಂತ್ರಗಳ ಉದ್ಗಾರದೊಂದಿಗೆ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ರಥ ಬೀದಿಯಲ್ಲಿ ಸಂಚರಿಸಿದ ಚಿಕ್ಕ ತೇರು ಸುಸೂತ್ರವಾಗಿ ಸ್ವಸ್ಥಾನಕ್ಕೆ ಮರಳಿತು.

ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವ ಸ್ಥಾನದ ಪಾರುಪತ್ತೇಗಾರ ಶ್ರೀ ರಮೇಶ್ ಭಟ್, ಅರ್ಚಕರಾದ ಶ್ರೀನಾಥ್, ರಾಘುವ, ಮೋಹನ್, ರಾಘವೇಂದ್ರ ಪಠರ್ಶರೀ ಕನಕ ಚಾರ್, ರಾಮೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ಶ್ರೀನಿವಾಸಯ್ಯ ಸಮಿತಿ ಸದಸ್ಯ ರಾದ ರಘು, ಸಿದ್ದರಾಜು, ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ, ಸದಸ್ಯ ಕೇಶವ, ಸಮಾಜ ಸೇವಕರಾದ ಜಯರಾಂಜಿ, ನೇಮಿ ಚಂದು, ಮಂಜು ಮುಂತಾದವರಿದ್ದರು.

Translate »