ಇಂದು 18 ಶಾಸಕರ ರಾಜೀನಾಮೆ?
ಮೈಸೂರು

ಇಂದು 18 ಶಾಸಕರ ರಾಜೀನಾಮೆ?

September 18, 2018

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕಾಂಗ್ರೆಸ್‍ನಲ್ಲಿನ ಭಿನ್ನಮತೀಯ ಚಟುವಟಿಕೆ ತಾರಕಕ್ಕೇರಿದ್ದು, ಅದು ನಾಳೆ ನಿರ್ಣಾಯಕ ಹಂತ ತಲುಪಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‍ನಲ್ಲಿ ತೀವ್ರ ಅಸಮಾಧಾನಗೊಂಡಿರುವ 18 ಶಾಸಕರು ರಾಜ್ಯಪಾಲರು ಇಲ್ಲವೇ ಸ್ಪೀಕರ್ ಭೇಟಿ ಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಲಿದ್ದಾರೆ ಎಂದು ಹೇಳಲಾ ಗುತ್ತಿದೆ. ಈಗಾಗಲೇ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂಬಂಧ ರೊಚ್ಚಿಗೆದ್ದಿ ರುವ ಸಚಿವ ರಮೇಶ್ ಜಾರಕಿಹೊಳಿ ಉತ್ತರ ಕರ್ನಾ ಟಕದ ತಮ್ಮ ಬೆಂಬಲಿತ ಶಾಸಕ ರೊಂದಿಗೆ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಕೆಲಕಾಲ ಮಾತುಕತೆ ನಡೆಸಿ ದರು. ನಂತರ ಹೊರ ಬಂದು, ನಾನೇಕೆ ರಾಜೀನಾಮೆ ನೀಡಬೇಕು? ಎಂದು ಮಾಧ್ಯಮ ದವರನ್ನೇ ಪ್ರಶ್ನಿಸಿದರು. ಆದರೆ ಮೈತ್ರಿ ಸರ್ಕಾರದಿಂದ ಬೇಸತ್ತಿರುವ ಅನೇಕ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಯೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಶಾಸಕರು ಇಂದು ರಾಜ್ಯ ಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಕೆಲ ಮೂಲಗಳು ಅಭಿಪ್ರಾಯ ಪಟ್ಟಿವೆ. ಅತ್ತ ಬಿಜೆಪಿ ಪಾಳೆಯದಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕೆಲ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಮುಖಂಡರು ಆಸೆ-ಆಮಿಷಗಳನ್ನು ತೋರಿ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿ ದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರ ಸ್ವಾಮಿ, ಹೆಚ್.ಡಿ.ಕೋಟೆ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು,
ಮುನಿಯಪ್ಪ ಇನ್ನಿತ ರರು ತಮ್ಮನ್ನು ಬಿಜೆಪಿ ಮುಖಂಡರು ಸಂಪರ್ಕಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಿನ್ನಮತೀಯ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು ನಿನ್ನೆ ವಿದೇಶದಿಂದ ವಾಪಸ್ಸಾದಂದಿ ನಿಂದಲೂ ನಿರಂತರವಾಗಿ ಮಾಡುತ್ತಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜೆಡಿಎಸ್ ಪಾಳೆಯದಲ್ಲಿ ಆತ್ಮವಿಶ್ವಾಸ ಮನೆಮಾಡಿದೆ. ಇದೆಲ್ಲಾ ಕೇವಲ ಊಹಾಪೋಹಗಳಷ್ಟೇ. ಸರ್ಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ 5 ವರ್ಷ ಮುಖ್ಯಮಂತ್ರಿ ಗಳಾಗಿರುತ್ತಾರೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಈ ಸರ್ಕಾರದ ಮಹಾ ರಕ್ಷಕರು ಎಂದು ಹೇಳಲಾಗುತ್ತಿದೆ.

Translate »