ಯಳಂದೂರು ತಾಪಂ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಯಳಂದೂರು ತಾಪಂ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ

June 4, 2018

ಯಳಂದೂರು: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಹೊನ್ನೂರು ನಿರಂಜನ್ ಹಾಗೂ ಉಪಾ ಧ್ಯಕ್ಷರಾಗಿ ಮದ್ದೂರು ಮಲ್ಲಾಜಮ್ಮ ಅವಿ ರೋಧವಾಗಿ ಆಯ್ಕೆಯಾದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಯಲ್ಲಿ ಶುಕ್ರವಾರ ಅಧ್ಯಕ್ಷ ಮತ್ತು ಉಪಾ ಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 11 ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

ಚುನಾವಣೆಯಲ್ಲಿ ಕಾಂಗ್ರೆಸ್-6, ಬಿಜೆಪಿ-2, ಬಿಎಸ್‍ಪಿ-1 ಹಾಗೂ ಪಕ್ಷೇತರ-2 ಸದಸ್ಯರನ್ನು ಹೊಂದಿತ್ತು. ಕಾಂಗ್ರೆಸ್ 6 ಸದ ಸ್ಯರ ಹೊಂದುವ ಮೂಲಕ ಬಹು ಮತವನ್ನು ಹೊಂದಿತ್ತು. ಜೊತೆಗೆ ಪಕ್ಷೇ ತರ ಸದಸ್ಯ ಸಿದ್ದರಾಜುರವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರು.ಇದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿರಂಜನ್ ಹಾಗೂ ಮಲ್ಲಾಜಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಯಾಗಿದ್ದ ಉಪವಿಭಾಗಾಧಿಕಾರಿ ಬಿ.ಘೌಜಿಯ ತರನ್ನಮ್ ಅವರು ಅವಿರೋಧ ಆಯ್ಕೆ ಯನ್ನು ಘೋಷಿಸಿದರು.ಮುಖಂಡ ಎ.ಆರ್.ಕೃಷ್ಣಮೂರ್ತಿ ಮಾತ ನಾಡಿ, ತಾಲೂಕಿನ ಅಭಿವೃದ್ಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಶಮಿಸಬೇಕು. ಜತೆಗೆ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಬಾಲರಾಜು ಮಾತ ನಾಡಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಅಧಿಕಾರದ ಅವಧಿಯಲ್ಲಿ ತಾಲೂ ಕಿನ ಸರ್ವಾಂತಗೀಣ ಅಭಿವೃದ್ದಿಗೆ ಶ್ರಮಿಸ ಬೇಕೆಂದು ಎಂದರು.

ನೂತನ ಅಧ್ಯಕ್ಷ ನಿರಂಜನ್ ಮಾತ ನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ಸಮಸ್ಯೆಗಳನ್ನು ಬಗ್ಗೆಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಪ್ರಮುಖವಾಗಿ ಕುಡಿಯುವ ನೀರು ಸೇರಿ ದಂತೆ ತಾಲೂಕಿನ 11 ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಜಿಪಂ ಉಪಾಧ್ಯಕ್ಷ ಯೋಗೇಶ್, ಸದಸ್ಯೆ ಉಮಾವತಿ, ತಾಪಂ ಸದಸ್ಯರಾದ ನಂಜುಂಡಯ್ಯ, ಪದ್ಮಾವತಿ, ವೆಂಕಟೇಶ್, ಸಿದ್ದರಾಜು, ಪುಟ್ಟು, ಪಲ್ಲವಿಮಹೇಶ್, ಭಾಗ್ಯ, ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ತೊಟೇಶ್, ಪಪಂ ಸದಸ್ಯ ಜೆ. ಶ್ರೀನಿವಾಸ್‍ಹಳ್ಳಿ, ರಾಚಯ್ಯ, ದಾಸ್, ಲಿಂಗರಾಜುಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರು ಎಸ್.ಪುಟ್ಟ ಸ್ವಾಮಿ, ಆರ್.ಪುಟ್ಟಬಸವಯ್ಯ, ಸಿದ್ದಪ್ಪಸ್ವಾಮಿ, ಕೃಷ್ಣಪುರ ದೇವರಾಜ್ ಹಾಜರಿದ್ದರು.

Translate »