ಜೂ.4ರಿಂದ 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ
ಮೈಸೂರು

ಜೂ.4ರಿಂದ 14 ದಿನಗಳ ಸಿದ್ಧ ಸಮಾಧಿ ಯೋಗ ಶಿಬಿರ

June 1, 2018

ಮೈಸೂರು: ಮೈಸೂರಿನ ಋಷಿ ಸಂಸ್ಕøತಿ ವಿದ್ಯಾಕೇಂದ್ರವು ಜೂ.4ರಿಂದ 14 ದಿನಗಳ ಕಾಲ ಋಷಿ ಪ್ರಭಾಕರ ಗುರೂಜಿ ಅವರ ಧ್ಯಾನ, ಪ್ರಾಣಾಯಾಮ, ಆಹಾರ ಕ್ರಮ ಮತ್ತು ವ್ಯಕ್ತಿತ್ವ ವಿಕಾಸ ಕುರಿತ ಸಿದ್ದ ಸಮಾಧಿಯೋಗ ಶಿಬಿರ ಆಯೋಜಿಸಿದ್ದು, ಈ ಕುರಿತು ಜೂ.3ರಂದು ಸಂಜೆ 6.15ಕ್ಕೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆ ಕೆ.ಬ್ಲಾಕ್‍ನಲ್ಲಿರುವ ವಿದ್ಯಾಕೇಂದ್ರದಲ್ಲಿ ನಡೆಸಲಾಗುವುದು ಎಂದು ಕೇಂದ್ರದ ಪೋಷಕರ ಆಚಾರ್ಯ ಹೆಚ್.ಎಸ್.ರಮೇಶ್‍ಚಂದ್ರ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ಧೀಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಲಾಗುವುದು. ದೀರ್ಘ ಕಾಲದ ಕಾಯಿಲೆಗಳಾದ ರಕ್ತದೊತ್ತಡ, ಅಸ್ತಮಾ, ಮಧುಮೇಹ, ಸಂಧಿವಾತ ಮುಂತಾದ ಕಾಯಿಲೆಗಳನ್ನು ನಿಯಂತ್ರಣ ಹಾಗೂ ನಿವಾರಣೆಗೊಳಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.

ಶಿಬಿರವು ಪ್ರತಿದಿನ ಬೆಳಿಗ್ಗೆ 6ರಿಂದ 9ರವರೆಗೆ ಹಾಗೂ ಸಂಜೆ 6ರಿಂದ 9ರವರೆಗೆ ತಗತಿಗಳು ನಡೆಯದ್ದು, ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು ಮೊ- 9448826304 ಸಂಪರ್ಕಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಮೈಸೂರು ವಿಭಾಗದ ಪೋಷಕ ಆಚಾರ್ಯ ಎಸ್.ಜೆ.ವಿಜಯಕೀರ್ತಿ, ಪಿ.ಎ.ಮನೋಹರರಾವ್ ಉಪಸ್ಥಿತರಿದ್ದರು.

Translate »