ವಿಷ ಸೇವಿಸಿ ಚಿಕಿತ್ಸೆಗೆ ದಾಖಲಾಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು
ಮಂಡ್ಯ

ವಿಷ ಸೇವಿಸಿ ಚಿಕಿತ್ಸೆಗೆ ದಾಖಲಾಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು

June 1, 2018

ಮಂಡ್ಯ:  ವಿಷಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಯುವ ತಿಯ ಮೃತದೇಹ ಪಡೆಯುವ ವಿಷಯ ದಲ್ಲಿ ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆದಿರುವ ಘಟನೆ ನಗರದ ಹೊರ ವಲಯದ ಸಾಂಜೋ ಆಸ್ಪತ್ರೆಯಲ್ಲಿಂದು ನಡೆದಿದೆ.

ಮದ್ದೂರು ತಾಲೂಕಿನ ಲಕ್ಷ್ಮೇಗೌಡನ ದೊಡ್ಡಿಯ ಮಂಚೇಗೌಡರ ಪುತ್ರಿ ಭವ್ಯಾ (19) ಎಂಬ ಯುವತಿಯ ಶವ ಪಡೆ ಯುವ ವಿಚಾರದಲ್ಲೇ ಈ ಘಟನೆ ನಡೆದಿದೆ.

ಮಂಡ್ಯದ ಮಿಮ್ಸ್‍ನಲ್ಲಿ ಪ್ಯಾರ ಮೆಡಿಕಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಕ್ಷ್ಮೇಗೌಡ ನದೊಡ್ಡಿ ಗ್ರಾಮದ ವಿದ್ಯಾರ್ಥಿನಿ ಭವ್ಯಾ ಮೂರು ದಿನಗಳ ಹಿಂದೆ(ಮೇ.26 ರಂದು) ಮಾರ್ಗಮಧ್ಯೆ ಬಸ್ಸಿನಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಚಿಕಿತ್ಸೆಗಾಗಿ ಮಂಡ್ಯದ ಸಾಂಜೋ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಇಂದು ಮೃತ ಪಟ್ಟಿದ್ದಾಳೆ ಎನ್ನ ಲಾಗಿದೆ.

ಹಣದಾಸೆಗೆ ಶವವನ್ನಿಟ್ಟುಕೊಂಡಿದ್ದ ಆರೋಪ: ಭವ್ಯಾಳ ಮೃತದೇಹವನ್ನು ಪಡೆಯಲು ಪೋಷಕರು ಇಂದು ಮುಂದಾಗಿದ್ದರು. ಆದರೆ ಆಸ್ಪತ್ರೆಯ ಆಡಳಿತ ಮಂಡಳಿ ಬಾಕಿ ಬಿಲ್ ಪಾವತಿ ಸದೇ ಶವ ನೀಡಲು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಭವ್ಯಾ ಪೋಷಕರು ಮತ್ತು ಲಕ್ಷ್ಮೇಗೌಡನದೊಡ್ಡಿಯ ಗ್ರಾಮಸ್ಥರು, ಹಣದ ಆಸೆಯಿಂದ ಮೃತ ಭವ್ಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಲು ಸಾಂಜೋ ಆಸ್ಪತ್ರೆ ಆಡಳಿತ ನಿರಾಕರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಆಸ್ಪತ್ರೆಗೆ ಮುತ್ತಿಗೆ ಹಾಕಿದರು. ನಿನ್ನೆ ಸಂಜೆಯೇ ಯುವತಿ ಭವ್ಯ ಮೃತಪಟ್ಟಿದ್ದಾಳೆ. ಆದರೆ ವೈದ್ಯರು ಹೆಚ್ಚಿನ ಹಣಕ್ಕಾಗಿ ಶವ ನೀಡದೆ ಪೀಡಿಸುತ್ತಿದ್ದಾರೆ ಎಂದು ಆರೋಪಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟವೂ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತು.

ಗಲಾಟೆಯ ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಗ್ರಾಮಸ್ಥರು ಅವರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಲ್ಲದೆ, ತಳ್ಳಾಡಿ ನಿಂದಿಸಿ ದ್ದಾರೆ. ಬಳಿಕ ಮಂಡ್ಯ ಡಿವೈಎಸ್ಪಿ ಗಂಗಧರ ಸ್ವಾಮಿ ನೇತೃತ್ವದ ಪೊಲೀಸರ ತಂಡ ಬಿಗಿ ಬಂದೋಬಸ್ತ್‍ನೊಂದಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರ್ ರಸ್ತೆ ಮೇಲೆ ಬರೆದಿಟ್ಟು ನೇಣ ಗೆ ಶರಣು

Translate »