ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆ
ಕೊಡಗು

ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆ

August 31, 2018

ಸೋಮವಾರಪೇಟೆ:  ಅಸ್ಸಾಂ ಮೂಲದ ಯುವತಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಅಸ್ಸಾಂ ಮೂಲಕ ಕಾರ್ಮಿಕ ಷಾಆಲಿ ಅವರ ಮಗಳು ರುಕಿಯಾ ಬೇಗಂ(20) ಆತ್ಮಹತ್ಯೆ ಮಾಡಿ ಕೊಂಡವಳು. ಕಿರಗಂದೂರು ಗ್ರಾಮದ ಕಾಫಿ ಬೆಳೆಗಾರ ಶಿವಕುಮಾರ್ ಅವರ ಲೈನ್‍ಮನೆ ಯಲ್ಲಿ ವಾಸವಿದ್ದ ಕಾರ್ಮಿಕ ಕುಟುಂಬದ ಸದ ಸ್ಯರು ಎಂದಿನಂತೆ ಬುಧವಾರ ಕೆಲಸಕ್ಕೆ ಹೋಗಿ ದ್ದರು. ಆದರೆ ರುಕಿಯಾ ಹೋಗಿರಲಿಲ್ಲ ಎನ್ನ ಲಾಗಿದ್ದು, ಸಂಜೆ ಪೋಷಕರು ಮನೆಗೆ ಬಂದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ ಪ್ರಕ ರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿ ದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಪೋಷಕರಿಗೆ ಒಪ್ಪಿಸಲಾಗಿದೆ.

Translate »