ಇಂದಿನಿಂದ ಮಡಿಕೇರಿಯಲ್ಲಿ ಆಧಾರ್ ಅದಾಲತ್
ಕೊಡಗು

ಇಂದಿನಿಂದ ಮಡಿಕೇರಿಯಲ್ಲಿ ಆಧಾರ್ ಅದಾಲತ್

November 19, 2018

ಮಡಿಕೇರಿ: ಜಿಲ್ಲಾಡಳಿತ ಹಾಗೂ ಬೆಂಗಳೂರಿನ ಇ-ಆಡಳಿತ ಕೇಂದ್ರದ ಸಹ ಯೋಗದೊಂದಿಗೆ ನ.19 ರಿಂದ 24 ರವರೆಗೆ ನಗರದ ನಗರಸಭಾ ಕಟ್ಟಡದ ಆವರಣದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಅತ್ಯಂತ ಪ್ರಯೋಜನಕಾರಿಯಾಗಿ ರುವ ಹಿನ್ನಲೆಯಲ್ಲಿ ಆಧಾರ್ ನೋಂದಣಿ ಮಹತ್ವ ಪಡೆದಿದೆ. ಜಿಲ್ಲೆಯ ನಾಗರಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆಧಾರ್ ತಿದ್ದುಪಡಿ, ಅಪಡೇಷನ್, ಹೊಸ ನೋಂದಣಿ ಹಾಗೂ ಆಧಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಪಡಿತರ ಚೀಟಿ, ಬ್ಯಾಂಕ್ ಪಾಸ್‍ಪುಸ್ತಕ, ಪಾನ್‍ಕಾರ್ಡ್ ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಚಾಲನಾ ಪರವಾನಗಿ ಪ್ರತಿ ಅಥವಾ ಇನ್ನಿತರ ವಿಳಾಸ ದಾಖಲಾತಿ ಗಳೊಂದಿಗೆ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅವರು ಕೋರಿದ್ದಾರೆ.

Translate »