ಇಡಿ ಅಧಿಕಾರಿಗಳಿಂದ ವಾದ್ರಾ ಹೆಚ್ಚಿನ ವಿಚಾರಣೆ
ಮೈಸೂರು

ಇಡಿ ಅಧಿಕಾರಿಗಳಿಂದ ವಾದ್ರಾ ಹೆಚ್ಚಿನ ವಿಚಾರಣೆ

February 8, 2019

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಇಂದು ಸಹ ಜಾರಿ ನಿರ್ದೇಶ ನಾಲಯ ಅಧಿಕಾರಿಗಳು ವಿಚಾರಣೆ ಗೊಳಿಸಿದ್ದಾರೆ. ಇಬ್ಬರು ಉಪ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರನ್ನೊಳಗೊಂಡ ತಂಡ ದಿಂದ ರಾಬರ್ಟ್ ವಾದ್ರಾ ಅವರ ವಿಚಾ ರಣೆ ನಡೆಸಲಾಗಿದೆ ಎಂಬುದು ಇಡಿ ಮೂಲಗಳಿಂದ ತಿಳಿದುಬಂದಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ಅವರ ಪತಿ ಆಗಿರುವ ರಾಬರ್ಟ್ ವಾದ್ರಾ ಬುಧವಾರ ಐದೂವರೆ ತಾಸು ಗಳ ಕಾಲ ವಿಚಾರಣೆ ಎದುರಿಸಿದ್ದರು. ಮತ್ತೆ ಇಂದು ಬೆಳಗ್ಗೆ 11-25ಕ್ಕೆ ಕೇಂದ್ರ ದೆಹಲಿಯ ಜಾಜ್ ನಗರ್ ಹೌಸ್‍ನಲ್ಲಿ ರುವ ಇಡಿ ಕಚೇರಿಗೆ ಆಗಮಿಸಿದ ವಾದ್ರಾ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನಿಸಿ ದ್ದಾರೆ. ಲಂಡನ್‍ನಲ್ಲಿರುವ ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸ ಲಾಗುತ್ತಿದ್ದು, ಇಂದು ಸಹ ವಾದ್ರಾರನ್ನು ವಿಚಾರಣೆ ನಡೆಸಲಾಗುತ್ತಿದೆ. ಫೆ.12 ರಂದು ಜೈಪುರದಲ್ಲಿರುವ ಇಡಿ ಕಚೇರಿ ಯಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಬರ್ಟ್ ಅವರಿಗೆ ಸೂಚಿಸಲಾಗಿದೆ.

Translate »