ಇಬ್ಬರು ಸರಗಳ್ಳರ ಸೆರೆ, ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಇಬ್ಬರು ಸರಗಳ್ಳರ ಸೆರೆ, ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

July 16, 2018

ಮೈಸೂರು: ಇಬ್ಬರು ಸರಗಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ ಲಕ್ಷ ರೂ. ಮೌಲ್ಯದ 37 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಅಜೀಜ್‍ಸೇಠ್‍ನಗರದ ಅಫ್ಜಲ್‍ಪಾಷ ಹಾಗೂ ಮಹಮ್ಮದ್ ಅಖಲ್ ಷಾಹೀದ್ ಎಂಬ ಯುವಕರೇ ಬಂಧಿತರು. ಶುಕ್ರವಾರ ಮೈಸೂರಿನ ಲಷ್ಕರ್‍ಮೊಹಲ್ಲಾದ ಅಶೋಕ ರಸ್ತೆಯಲ್ಲಿ ಕಳವು ಮಾಲನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಇವರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಡಿ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದರ ಬಗ್ಗೆ ವಿಚಾರಣೆ ವೇಳೆ ಖದೀಮರು ಬಾಯಿಬಿಟ್ಟಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ 37 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಿಸ್ಕವರ್ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರ ಮಾರ್ಗದರ್ಶನ, ಸಿಸಿಬಿ ಘಟಕದ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಸಿಸಿಬಿ ಪಿಐ ಆರ್.ಜಗದೀಶ್, ಎಎಸ್‍ಐಗಳಾದ ಚಂದ್ರೇಗೌಡ, ಅಲೆಕ್ಸಾಂಡರ್ ಮತ್ತು ಸಿಬ್ಬಂದಿಯಾದ ಎಂ.ಆರ್.ಗಣೇಶ್, ಸಿ.ಚಿಕ್ಕಣ್ಣ, ಲಕ್ಷ್ಮೀಕಾಂತ್, ರಾಮಸ್ವಾಮಿ, ಶಿವರಾಜು, ಯಾಕುಬ್ ಷರೀಫ್, ಅಸ್ಗರ್‍ಖಾನ್, ರಾಜೇಂದ್ರ, ನಿರಂಜನ, ಪ್ರಕಾಶ್, ಆನಂದ್, ಚಾಮುಂಡಮ್ಮ, ಶಿವಕುಮಾರ್, ಗೌತಮ್ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಸಿಬ್ಬಂದಿಯ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Translate »