ಏಡ್ಸ್ ನಿರ್ಮೂಲನೆಗಾಗಿ ಮೈಸೂರಲ್ಲಿ ಜನಜಾಗೃತಿ
ಮೈಸೂರು

ಏಡ್ಸ್ ನಿರ್ಮೂಲನೆಗಾಗಿ ಮೈಸೂರಲ್ಲಿ ಜನಜಾಗೃತಿ

December 2, 2018

ಮೈಸೂರು: ಸಾಮಾಜಿಕ ಪಿಡುಗಾಗಿರುವ ಹೆಚ್‍ಐವಿ ಏಡ್ಸ್ ಮಾರಕ ರೋಗವನ್ನು ಸಂಪೂರ್ಣವಾಗಿ ನಿರ್ಮೂ ಲನೆ ಮಾಡಬೇಕಿದೆ ಎಂದು ಮೈಸೂರು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ನಾಗರಾಜು ಹೇಳಿದರು.

ಜೆಎಸ್‍ಎಸ್ ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸಮುದಾಯ ಆರೋಗ್ಯ ಶಿಕ್ಷಣ ವಿಭಾಗ, ಜೆಎಸ್‍ಎಸ್ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಹಾಗೂ ಹೆಚ್‍ಡಿಎಫ್‍ಸಿ ಬ್ಯಾಂಕ್ ಸರಸ್ವತಿಪುರಂ ಶಾಖೆ ಸಂಯುಕ್ತಾಶ್ರಯದಲ್ಲಿ ಇಂದು ಜೆಎಸ್‍ಎಸ್ ಹಳೇ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ಬಾರದಂತೆ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಕೇವಲ ಸರ್ಕಾರ ಕಾರ್ಯ ಕ್ರಮ ಮಾಡಿ ಅರಿವು ಮೂಡಿಸಿದರೆ ಸಾಲದು, ಈ ಸಾಮಾಜಿಕ ಪಿಡುಗನ್ನು ಬೇರು ಸಮೇತ ತೆಗೆದು ಹಾಕಲು ಸಾರ್ವ ಜನಿಕರು, ಸಂಘ-ಸಂಸ್ಥೆಗಳು ಹಾಗೂ ಯುವಕರು ಕೈಜೋಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

‘ನಿಮ್ಮ ಹೆಚ್‍ಐವಿ ಸ್ಥಿತಿ ತಿಳಿಯಿರಿ’ ಘೋಷಣೆಯೊಂದಿಗೆ ಆಚರಿಸುತ್ತಿರುವ ಈ ಬಾರಿಯ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಏಡ್ಸ್ ರೋಗ ಕಂಡು ಹಿಡಿಯುವುದು (ಡಯಾಗ್ನೈಸ್), ಚಿಕಿತ್ಸೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಅವರು ನುಡಿದರು. ಡಾ.ನಾಗರಾಜು, ಜೆಎಸ್‍ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ದಂತೆ 45 ಮಂದಿ ರಕ್ತದಾನ ಮಾಡಿದರು. ಜೆಎಸ್‍ಎಸ್ ಮೆಡಿಕಲ್ ಕಾಲೇಜು ಸಹಾ ಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್, ಜೆಎಸ್‍ಎಸ್ ನರ್ಸಿಂಗ್ ಕಾಲೇಜು ಪ್ರಾಂಶು ಪಾಲರಾದ ಪ್ರೊ.ಶೀಲಾ ವಿಲಿಯಮ್ಸ್, ಹೆಚ್‍ಡಿ ಎಫ್‍ಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಕೆ.ಆರ್.ಶ್ರೀಕರ್ ಹಾಗೂ ಇತರರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಾರೂಖಿಯ ಫಾರ್ಮಸಿ ಕಾಲೇಜು: ಫಾರೂಖಿಯ ಫಾರ್ಮಸಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾ ಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂ ತ್ರಣ ಘಟಕ, ಐಎಂಎ ಮೈಸೂರು, ಆಶೋದಯ ಸಮಿತಿ, ಆನಂದಜ್ಯೋತಿ ಪಾಸಿಟಿವ್ ನೆಟ್‍ವರ್ಕ್ ಮತ್ತಿತರ ಸಂಘ ಟನೆಗಳ ಆಶ್ರಯದಲ್ಲಿ ಮೈಸೂರಿನ ತಿಲಕ್ ನಗರದಲ್ಲಿರುವ ಫಾರೂಖಿಯ ಫಾರ್ಮಸಿ ಕಾಲೇಜಿನಲ್ಲಿ ಇಂದು ವಿಶ್ವ ಏಡ್ಸ್ ದಿನ ವನ್ನು ಆಚರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳು ಬೀದಿ ನಾಟ ಕದ ಮೂಲಕ ಹೆಚ್‍ಐವಿ ಬಾರದಂತೆ ಮುಂಜಾಗ್ರತೆ ವಹಿಸಬೇಕೆಂದು ಜನರಲ್ಲಿ ಅರಿವು ಮೂಡಿಸಿದರು. ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಚಿದಂಬರ, ಫಾರೂಖಿಯ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ.ಮೊಹಮದ್ ಸಲಾಹು ದ್ದೀನ್, ಜೆಎಸ್‍ಎಸ್ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಟಿಎಂ ಪ್ರಮೋದ್ ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿ ಕಾರಿ ಡಾ.ಪಿ.ರವಿ, ಐಎಂಎ ರಾಜ್ಯ ಉಪಾ ಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಮೈಸೂರು ಶಾಖೆ ಅಧ್ಯಕ್ಷ ಡಾ.ಹೆಚ್.ಪಿ.ಪ್ರಕಾಶ್, ಆಶಾ ಕಿರಣ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಹೆಚ್. ಟಿ.ಸ್ವಾಮಿ, ಆನಂದಜ್ಯೋತಿ ಪಾಸಿಟಿವ್ ನೆಟ್ ವರ್ಕ್ ಅಧ್ಯಕ್ಷ ಪಿ.ಚಂದ್ರಶೇಖರ್ ಹಾಗೂ ಆಶೋದಯ ಸಮಿತಿ ಕಾರ್ಯದರ್ಶಿ ಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಡಾ.ಚಿದಂ ಬರ ಅವರು, 1980ರಲ್ಲಿ ಆರಂಭವಾದ ಏಡ್ಸ್ ರೋಗ ನಂತರದ ದಿನಗಳಲ್ಲಿ ವಿಸ್ತಾರವಾಗಿ ಹರಡಿದೆ. ಸರ್ಕಾರ ಉಚಿತ ಚಿಕಿತ್ಸೆ, ಸಲಹೆ ಗಳನ್ನು ನೀಡಿ ಮುಂಜಾಗ್ರತಾ ಕಾರ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಏಡ್ಸ್ ರೋಗಿಗಳೂ ಸಮಾಜದಲ್ಲಿ ಗುಣಮಟ್ಟದ ಜೀವನ ನಡೆಸುವಂತಹ ವಾತಾವರಣ ಮೂಡಿದೆ ಎಂದರು.

ಸೇಂಟ್ ಫಿಲೋಮಿನಾ: ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನ ಉಪ ನ್ಯಾಸಕರು ಹಾಗೂ ವಿದ್ಯಾರ್ಥಿಗಳು ಏಡ್ಸ್ ರೋಗದ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಮೈಸೂರು ಡಯಾಸಿಸ್‍ನ ಎಜುಕೇಷನಲ್ ಸೊಸೈಟಿ, ಆಲ್ ಇಂಡಿಯಾ ಕ್ಯಾಥೋಲಿಕ್ ಯುನಿವರ್ಸಿಟಿ ಫೆಡರೇಷನ್ ಆಶ್ರಯದಲ್ಲಿ ಏರ್ಪ ಡಿಸಿದ್ದ ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಳು, ಘೋಷಣಾ ಫಲಕಗಳನ್ನು ಹಿಡಿದು ಫೌಂಟೇನ್ ವೃತ್ತದವರೆಗೆ ಜಾಥಾ ನಡೆಸಿದರು.

Translate »