ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು
ಹಾಸನ

ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

August 12, 2018

ಚನ್ನರಾಯಪಟ್ಟಣ: ಕೆರೆ ಯಲ್ಲಿ ರಾಸುಗಳಿಗೆ ನೀರು ಕುಡಿಸಲು ಹೋದ ರೈತ ಕಾಲು ಜಾರಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜಗಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಭೈರೇಗೌಡ (41) ಮೃತ ರೈತ. ಜಮೀನಿಂದ ಮನೆಗೆ ಬರುವಾಗ ಗ್ರಾಮದ ಹಿರೀಕೆರೆಯಲ್ಲಿ ರಾಸುಗಳಿಗೆ ನೀರು ಕುಡಿಸಲು ತೆರಳಿದ್ದ ಸಂದರ್ಭ ದಲ್ಲಿ ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »