ಕೇಂದ್ರದಿಂದ 100 ಕೋಟಿ ಬಿಡುಗಡೆ, ಇನ್ನಷ್ಟು ಅನುದಾನಕ್ಕೆ ಪ್ರಯತ್ನ ಮಾಜಿ ಸಿಎಂ ಯಡಿಯೂರಪ್ಪ
ಮೈಸೂರು

ಕೇಂದ್ರದಿಂದ 100 ಕೋಟಿ ಬಿಡುಗಡೆ, ಇನ್ನಷ್ಟು ಅನುದಾನಕ್ಕೆ ಪ್ರಯತ್ನ ಮಾಜಿ ಸಿಎಂ ಯಡಿಯೂರಪ್ಪ

August 20, 2018

ಮೈಸೂರು:  ಮಳೆಯಿಂದಾಗಿ ರುವ ಹಾನಿ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನಷ್ಟು ಅನು ದಾನ ಬಿಡುಗಡೆ ಮಾಡುವಂತೆ ತಾವು ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಹಾಗೂ ಇತರೆ ಜಿಲ್ಲೆಗಳಲ್ಲಿ ಮಳೆಯಿಂದಾಗಿರುವ ಹಾನಿ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರ ಇನ್ನಷ್ಟು ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಮಳೆ ಸಂತ್ರಸ್ಥರಿಗೆ ನೆರವಾಗುವ ವಿಚಾರದಲ್ಲಿ ರಾಜ್ಯ ಸರ್ಕಾದ ಕಾರ್ಯ ವೈಖರಿ ಸಾಲುತ್ತಿಲ್ಲ. ಸರ್ಕಾರ ಇನ್ನೂ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಪ್ರಧಾನಿ ಅವಾಸ್ ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗುವುದು. ನಮ್ಮ ಶಾಸಕರು ಹಾಗೂ ಸಂಸದರು ಮಳೆ ಅವಾಂತರದಿಂದ ತತ್ತರಿಸಿದ ಕೊಡಗು ಜಿಲ್ಲೆಯಲ್ಲಿ ಸ್ಥಳದಲ್ಲಿಯೇ ಇದ್ದಾರೆ ಎಂದರು.

ಎಲ್ಲ ವರ್ಗದವರಿಗೂ ಅವಕಾಶ: ಸ್ಥಳೀಯ ಚುನಾವಣೆ ವಿಚಾರದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಅರವಿಂದ ಲಿಂಬವಾಳಿ ನೇತೃತ್ವದಲ್ಲಿ ಅಭ್ಯರ್ಥಿಗಳ ಅಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕುರುಬ ಸಮುದಾಯ ಸೇರಿದಂತೆ ಎಲ್ಲ ವರ್ಗದವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ ಎಂದು ತಿಳಿಸಿದರು.

Translate »