ಕೊಡಗಿನ ನೆರೆ ಸಂತ್ರಸ್ತರಿಗೆ ದೇಣಿಗೆ
ಚಾಮರಾಜನಗರ

ಕೊಡಗಿನ ನೆರೆ ಸಂತ್ರಸ್ತರಿಗೆ ದೇಣಿಗೆ

August 27, 2018

ಚಾಮರಾಜನಗರ: ಕೊಡಗಿನ ನೆರೆ ಸಂತ್ರಸ್ತರಿಗೆ ರಾಮಸಮುದ್ರ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ನಗರದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ 14,962 ರೂ. ದೇಣಿಗೆಯನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಮೂಲಕ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಮಹೇಶ್, ಸಹ ಕಾರ್ಯದರ್ಶಿ ವಿ.ರಂಗನಾಥ್, ಖಜಾಂಚಿ ಗೌತಮ್, ಸದಸ್ಯರಾದ ನೂತನ್, ಆರ್.ಸಿ. ರಾಜೇಶ್, ಮಹದೇವಪ್ರಸಾದ್, ಆರ್.ಎನ್. ಭರತ್, ಮನೋಜ್, ಪ್ರಶಾಂತ್, ಕಿರಣ, ಚಂದ್ರು, ಮಹೇಶ್, ಮನೋಹರ್ ಹಾಜರಿದ್ದರು.

Translate »