ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ
ಕೊಡಗು

ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ

September 18, 2018

ಒಮ್ಮತದಿಂದ ಧರ್ಮದ ಪಾಲನೆ ಅಗತ್ಯ
ವಿರಾಜಪೇಟೆ: ಇಂದಿನ ಸಮಾಜದಲ್ಲಿ ಆಧ್ಯಾತ್ಮಿಕತೆ ಎಂಬುದು ಶಾಂತಿ ನೆಮ್ಮದಿಯನ್ನು ತರಬಲ್ಲಹ ಶಕ್ತಿಯನ್ನು ಹೊಂದಿದೆ. ವಿಶ್ವಕರ್ಮ ಸಮುದಾಯವು ತನ್ನ ಸಂಸ್ಕøತಿ ಆಚರಣೆ ಪದ್ಧತಿ ಪರಂಪರೆಯಿಂದ ವಿಶಿಷ್ಟತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಹಿಂದೂಗಳು ಒಗ್ಗಟ್ಟನ್ನು ಸಾಧಿಸಿ ಸಮಾಜದ ಸುಧಾರಣೆಯೊಂದಿಗೆ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವಿರಾಜಪೇಟೆ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪುರಭವನ ದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವದ ಕಾರ್ಯಕ್ರಮದ ಮೊದಲಿಗೆ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಇಂದಿನ ದಿನದಲ್ಲಿ ಪ್ರತಿಯೊಂದು ಸಮುದಾಯವು ಶಿಕ್ಷಣಕ್ಕೆ ಒತ್ತು ನೀಡುವುದರಿಂದ ಸಮಾಜ ಅಭಿವೃದ್ಧಿಯತ್ತ ಮುಖಮಾಡಲು ಸಾಧ್ಯವಾಗಿದೆ. ಹಿಂದೂ ಬಾಂಧವರಲ್ಲಿ ಹಬ್ಬ ಹರಿದಿನಗಳ ಆಚರಣೆ ಬೇರೆಯಾದರೂ ಧರ್ಮ ಎಂಬುದು ಒಂದೇ ಆಗಿದ್ದು, ವಿವಿಧತೆಯಲ್ಲಿ ಏಕತೆ ಯನ್ನು ಕಂಡಿದೆ. ಪ್ರತಿಯೊಂದು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಿರಂ ತರವಾಗಿ ಏರ್ಪಡಿಸುವಂತಾಗಬೇಕು. ಸಮುದಾಯದ ಪ್ರತಿ ಯೊಬ್ಬರು ಸುಶಿಕ್ಷಿತರಾದರೆ ಸಮುದಾಯವು ಏಳಿಗೆಯನ್ನು ಕಾಣಬಹುದಾಗಿದೆ. ವಿಶ್ವಕರ್ಮ ಸಮುದಾಯದ ಒಗ್ಗಟ್ಟು ಒಮ್ಮತ ನಿರಂತರ ಮುಂದುವರೆಯಲಿ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಬಿಳಿಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿದ್ವಾನ್ ಬಿ.ಎಸ್. ಗಂಗಾಧರ ಆಚಾರ್ ಮಾತನಾಡಿ, ಶ್ರೀ ವಿಶ್ವಕರ್ಮ ದೇವರು ಸಮುದಾಯದವರಿಗೆ ಮಾತ್ರ ಸೀಮಿತವಲ್ಲ ವಿಶ್ವಕ್ಕೆ ದೇವರು. ಇಂದಿನ ಮನು ಕುಲದಲ್ಲಿ ಹಿಂದೂಗಳು ವಿಶ್ವಕರ್ಮ ದೇವರನ್ನು ಪೂಜಿಸುತ್ತಾರೆ. ಇದರಲ್ಲಿ ಯಾವ ಭಿನ್ನ ಬೇಧಗಳಿಲ್ಲ, ಶ್ರೀಬ್ರಹ್ಮನ ಮೂಲ ಸ್ವರೂಪವೇ ವಿಶ್ವಕರ್ಮ ದೇವರು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸಂಸ್ಕಾರ ಹಾಗೂ ಆಚಾರ ವಿಚಾರಗಳನ್ನು ಮತ್ತು ಮುಂದಿನ ಪೀಳಿಗೆಗೆ ಶಿಕ್ಷಣವನ್ನು ನೀಡುವಂತಾಗಬೇಕು ಎಂದ ಗಂಗಾಧರ, ವಿಶ್ವಕರ್ಮ ಕುರಿತು ಹಿಂದಿನ ಪುರಾಣದ ಬಗ್ಗೆ ಸಭೆಗೆ ತಿಳಿಸಿದರು.

ವೇದಿಕೆಯಲ್ಲಿ ತಾಲೂಕು ತಹಸಿಲ್ದಾರ್ ಆರ್.ಗೋವಿಂದ ರಾಜು, ಚಿನ್ನ ಬೆಳ್ಳಿ ವರ್ತಕರ- ಕೆಲಸಗಾರರ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್, ತಾಲೂಕು ಸಂಘದ ಅಧ್ಯಕ್ಷ ಕೆ.ಪಿ.ಪ್ರಶಾಂತ್, ವಿರಾಜಪೇಟೆ ಪಶುವೈದ್ಯ ಡಾ. ಗಿರೀಶ್, ಪೊನ್ನಂಪೇಟೆಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ವಿವಿಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮು ದಾಯದ ವಿದ್ಯಾರ್ಥಿಗಳಿಗೆ ಕಿರುಕಾಣಿಕೆ ಬಹುಮಾನ ವಿತರಿಸಿದರು. ವಿರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಎ.ಪಿ.ಲೋಕೇಶ್ ಸ್ವಾಗತಿಸಿ, ನಿರೂಪಿಸಿದರು. ಕೊನೆಯಲ್ಲಿ ವಿಮಲಾ ದಶರಥ್ ವಂದಿಸಿದರು. ಸಮಾರಂಭದ ನಂತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ತಾಲೂಕಿನಾದ್ಯಂತ ಸಮು ದಾಯ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು. ವಿಶ್ವಕರ್ಮದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗಣಪತಿ ದೇವಾಲಯದ ಪ್ರಮೋಷ ಸಭಾಂಗಣದಲ್ಲಿ ವಿಶ್ವಕರ್ಮ ಮಹಾ ಪೂಜೆ ಏರ್ಪಡಿಸಲಾಗಿತ್ತು.

Translate »