ಪರೀಕ್ಷೆಗಿಂತ ಸಮಾಜ ನೀಡುವ ಅಂಕ ಬಹುಮುಖ್ಯ
ಹಾಸನ

ಪರೀಕ್ಷೆಗಿಂತ ಸಮಾಜ ನೀಡುವ ಅಂಕ ಬಹುಮುಖ್ಯ

June 1, 2018

ಅರಸೀಕೆರೆ: ಕೆಲಸದ ಒತ್ತಡ ದಲ್ಲೂ ಸಿಬ್ಬಂದಿ ತಮ್ಮ ಮಕ್ಕಳ ವಿದ್ಯಾ ಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ಅಂಕಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸು ತ್ತಿರುವುದು ಇಲಾಖೆಗೆ ಹೆಮ್ಮೆ ಸಂಗತಿ ಎಂದು ಅರಸೀಕೆರೆ ವಲಯದ ಉಪ ಪೊಲೀಸ್ ಅಧೀಕ್ಷಕ ಸದಾನಂದ ತಪ್ಪಣ್ಣನವರ್ ಶ್ಲಾಘಿಸಿದರು.

ನಗರದ ಡಿವೈಎಸ್‍ಪಿ ಕಚೇರಿ ಆವರಣ ದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಇಲಾಖೆ ಸಿಬ್ಬಂದಿ ಮಕ್ಕಳನ್ನು ಸನ್ಮಾನಿಸಿ ಮಾತ ನಾಡಿದ ಅವರು, ಇಲಾಖೆಯ ಕೆಲಸವೂ ಸೇರಿದಂತೆ ವೈಯಕ್ತಿಕ ಬದುಕಿನ ಜಂಜಾಟ ದಲ್ಲೂ ಹೆಚ್ಚಿನ ಶ್ರಮ ವಹಿಸುವ ಇಲಾಖೆ ಇದೆ ಎಂದರೆ ಅದು ಪೊಲೀಸ್ ಇಲಾಖೆ ಮಾತ್ರ. ಇಂತಹ ಇಲಾಖೆಯಲ್ಲಿ ಮಾನಸಿಕ ನೆಮ್ಮದಿ ಇರದಿದ್ದರೂ ಅದನ್ನು ತೋರ್ಪ ಡಿಸಿಕೊಳ್ಳದೇ ಸದಾ ನಗು ಮೊಗದಲ್ಲಿಯೇ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ಮಕ್ಕಳ ವಿದ್ಯಾ ಭ್ಯಾಸದ ಕಡೆಗೆ ಗಮನ ನೀಡಿ ಹೆಚ್ಚಿನ ಅಂಕಗಳನ್ನು ಪಡೆಯಲು ಮತ್ತು ಭವಿಷ್ಯ ರೂಪಿಸಿಕೊಳ್ಳಲು ತಮ್ಮನ್ನು ತಾವು ತೊಡಗಿಸಿ ಕೊಂಡಿರುವುದು ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ. ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳನ್ನು ಪಡೆದ ಮಕ್ಕಳು ಮುಂದಿನ ವಿದ್ಯಾಭ್ಯಾಸ ವನ್ನು ಪೂರ್ಣಗೊಳಿಸಿದ ನಂತರವೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಸಮಾಜ ನೀಡುವ ಅಂಕ ಗಳು ಬಹುಮುಖ್ಯವಾಗಿರುತ್ತವೆ ಎಂದರು.

ಕಸಬಾ ಹೋಬಳಿ ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಪುರುಷೋತ್ತಮ್ ಮಾತ ನಾಡಿ, ನಮ್ಮ ಇಲಾಖೆ ಸಿಬ್ಬಂದಿ ಒಂದಲ್ಲ ಒಂದು ಒತ್ತಡದಲ್ಲಿ ಸದಾ ಕರ್ತವ್ಯ ಸಲ್ಲಿಸು ತ್ತಾರೆ. ಇಂತಹ ಸಿಬ್ಬಂದಿ ಮಕ್ಕಳು ಪರೀಕ್ಷೆ ಗಳಲ್ಲಿ ಹೆಚ್ಚು ಅಂಕ ಪಡೆದಿರುವುದನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಮ್ಮ ಜಿಲ್ಲೆಗೆ ಪ್ರಥಮವಾಗಿದೆ. ಇಂತಹ ಆರೋಗ್ಯಕರ ಬೆಳವಣಿಗೆಗಳು ಸಿಬ್ಬಂದಿಯಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಕಾರಣವಾಗುವು ದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಹಿರಿಯ ಪತ್ರಕರ್ತ ಹೆಚ್.ಡಿ.ಸೀತಾರಾಮ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಯು ವಿಜ್ಞಾನ ವಿಭಾಗ ಗೌತಮ್( ಶೇ.99.8), ಶೋಧನ್(ಶೇ.94), ಶಮನ್(ಶೇ.91), ಅಂಕ ಲಕ್ಷ್ಮೀಕಾಂತ್(ಶೇ.84), ಎಸ್‍ಎಸ್ ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆದ ಅಮೂಲ್ಯ (ಶೇ.97.6) ರನ್ನು ಸನ್ಮಾನಿಲಾಯಿತು. ಈ ಸಂದರ್ಭದಲ್ಲಿ ಪೇದೆಗಳಾಗ ಕೃಷ್ಣ, ಮಲ್ಲೇಶ್, ರಮೇಶ್, ವೇಣುಕುಮಾರ್ , ಮಂಜು ನಾಥ್, ಚಿದಾನಂದ ಇನ್ನಿತರರಿದ್ದರು.

Translate »