ಪೊಲೀಸರು-ಪತ್ರಕರ್ತರ ಬಾಂಧವ್ಯ ಉತ್ತಮವಾಗಿರಬೇಕು: ಸರ್ಕಲ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ
ಕೊಡಗು

ಪೊಲೀಸರು-ಪತ್ರಕರ್ತರ ಬಾಂಧವ್ಯ ಉತ್ತಮವಾಗಿರಬೇಕು: ಸರ್ಕಲ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ

October 15, 2018

ಮಡಿಕೇರಿ:  ಪತ್ರಕರ್ತರ ಮತ್ತು ಪೊಲೀಸ್ ಇಲಾಖೆ ನಡುವೆ ಬಾಂಧವ್ಯ ಉತ್ತಮ ವಾಗಿರಬೇಕು ಎಂದು ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ 17ನೇ ವಾರ್ಷಿಕೋತ್ಸವ ಪ್ರಯುಕ್ತ ಪತ್ರಿಕಾಭವನದ ಸಭಾಂ ಗಣದಲ್ಲಿ ಭಾನುವಾರ ಆಯೋಜಿಸಲಾದ ಟೇಬಲ್ ಟೆನ್ನಿಸ್ ಪಂದ್ಯವನ್ನು ಆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತ, ದಿನವೂ ತಮ್ಮ ಕರ್ತವ್ಯದ ಒತ್ತಡಗಳ ನಡುವೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮನಸ್ಸಿಗೆ ಉಲ್ಲಾಸ ಹಾಗೂ ನೆಮ್ಮದಿ ನೀಡುವ ಇಂತಹ ಕ್ರೀಡಾಕೂಟಗಳು ಆಯೋಜನೆಯೊಂದಿಗೆÉ ಪಾಲ್ಗೊಳ್ಳವಿಕೆ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಉದ್ಯಮಿ ದಾಮೋದರ್ ಅವರು ಮಾತನಾಡಿ, ದೈನಂದಿನ ಸುದ್ದಿ ಸಂಗ್ರಹ ಮುಂತಾದ ಒತ್ತಡಗಳಿಂದ ಹೊರ ಬರಲು ವರದಿಗಾರರಿಗೆ ಕ್ರೀಡಾ ಕೂಟಗಳು ಅತ್ಯಗತ್ಯ. ಇಂತಹ ಕ್ರೀಡಾಕೂಟಗಳಲ್ಲಿ ಎಲ್ಲ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕೆಂದು ಸಲಹೆ ನೀಡಿದರು.

ಆರಂಭದಲ್ಲಿ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಅವರು ಪ್ರಾಸ್ತಾವಿಕ ನುಡಿಯಾಡಿ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭ ಟ್ರಸ್ಟಿ ಶ್ರೀಧರ್ ಹೂವಲ್ಲಿ, ವಿವಿಧ ಪತ್ರಕರ್ತರಾದ ಕಾಯಪಂಡ ಶಶಿ ಸೋಮಯ್ಯ, ಜಿ.ವಿ.ರವಿಕುಮಾರ್, ಗೋಪಾಲ್ ಸೋಮಯ್ಯ, ಸುರ್ಜಿತ್, ಕೆ.ಎಂ.ಗಣೇಶ್, ಜೀವನ್ ಮತ್ತು ಸಿಬ್ಬಂದಿ ಸವಿತಾ ಉಪಸ್ಥಿತರಿದ್ದರು.

Translate »