ಬಸವಣ್ಣನವರ ತತ್ವಾದರ್ಶ ಅನುಕರಣೀಯ
ಮಂಡ್ಯ

ಬಸವಣ್ಣನವರ ತತ್ವಾದರ್ಶ ಅನುಕರಣೀಯ

April 19, 2018

ಮಂಡ್ಯ: ಮಹಾನ್ ಮಾನವತಾ ವಾದಿ, ಸಮಾಜ ಸುಧಾರಕ ಬಸವಣ್ಣ ನವರ ಕಾಯಕ, ಚಿಂತನೆ, ತತ್ವಾದರ್ಶಗಳು ಇಂದಿಗೂ ಸಮಾಜದ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ ಎಂದು ಜಿಲ್ಲಾಧಿ ಕಾರಿ ಎನ್.ಮಂಜುಶ್ರೀ ಅಭಿಪ್ರಾಯಪಟ್ಟರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರಳವಾಗಿ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವೇ ಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಸಮಾಜದಲ್ಲಿ ಮೇಲುಕೀಳೆಂಬ ಭೇದ ಹೋಗಲಾಡಿಸಲು ಹಾಗೂ ಸ್ತ್ರೀ ಸಮಾನತೆ ಗಾಗಿ 12ನೇ ಶತಮಾನದಲ್ಲಿಯೇ ಕ್ರಾಂತಿ ಕಾರಕ ಬದಲಾವಣೆ ತರಲು ಶ್ರಮಿಸಿದರು. ಸಮಾಜ ಸುಧಾರಣೆಯ ಪರಿಕಲ್ಪನೆ ಹಾಗೂ ಸಿದ್ಧಾಂತಗಳನ್ನು ನಾವು ಅಳವಡಿಸಿ ಕೊಂಡು ಬಸವಣ್ಣನವರ ಕನಸನ್ನು ಸಾಕಾರಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಶರತ್ ಮಾತ ನಾಡಿ, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅನುಭವ ಮಂಟಪದ ಮೂಲಕ ವಿಶ್ವಧರ್ಮ ವನ್ನು ಸ್ಥಾಪಿಸಲು ಹೊರಟ ಬಸವಣ್ಣನವ ರನ್ನು ಕೇವಲ ಒಂದು ವರ್ಗಕ್ಕೆ ಸೀಮಿತ ಗೊಳಿಸಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಉದ್ಧಾರಕ್ಕೆ ಒತ್ತು ನೀಡಿದ ಬಸವಣ್ಣ ನವರು ಎಲ್ಲ ವರ್ಗದವರಿಗೂ ಆದರ್ಶ ವಾಗಿದ್ದಾರೆ ಎಂದು  ಅಭಿಪ್ರಾಯಪಟ್ಟರು.

ಬಸವಣ್ಣನವರು ವಚನಗಳು, ವಿಚಾರಗಳು ಇಂದು ವಿಶ್ವಕ್ಕೆ ಅಗತ್ಯವಾಗಿವೆ. ಎಲ್ಲಾ ಚಿಂತನೆ, ತತ್ವ ಸಿದ್ಧಾಂತಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೂ ವಿಶಾಲ ಮನೋಭಾವ ದಿಂದ ಕೆಲವನ್ನಾದರು ಅಳವಡಿಸಿಕೊಳ್ಳು ವುದರ ಮೂಲಕ ಅವರಿಗೆ ಗೌರವ ಸಲ್ಲಿಸ ಬೇಕು. ಯಾವುದೇ ಭೇದ ಭಾವವಿಲ್ಲದ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಭಾಗಿತ್ವ ಅನಿವಾರ್ಯ ಎಂದರಲ್ಲದೇ, ಬಸವಣ್ಣನವರ ಕಾಯಕ, ವಚನಗಳು, ತತ್ವ ಸಿದ್ಧಾಂತ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳ ವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕಿ ಶಾಂತಮ್ಮ, ಅಧಿಕಾರಿಗಳು ಹಾಗೂ ಇತರೆ ಗಣ್ಯರು ಭಾಗವಹಿಸಿದರು.

 

Translate »