ಕೆ.ಆರ್.ನಗರ: ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗಾಗಿ ಈ ಬಾರಿ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕಿದ್ದು, ರಾಜ್ಯಾದ್ಯಂತ ಜನತೆಯ ಭಾವನೆಯು ಸಹ ಇದೇ ಆಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದವರು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಯೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ದೂರಿದರು.
ಕಳೆದ 14 ವರ್ಷಗಳಿಂದಲೂ ಪ್ರಾಮಾ ಣಿಕವಾಗಿ, ತಾಲೂಕಿನ ಜನತೆಯ ಮನೆಯ ಮಗನಾಗಿ ಮತ್ತು ಸೇವಕನಾಗಿ ತಾಲೂ ಕಿನ ಅಭಿವೃದ್ದಿಗೋಸ್ಕರ ಶ್ರಮಿಸಿದ್ದೇನೆ. ಸರ್ಕಾರದ ಅನುದಾನದಿಂದ ಮತ್ತು ನನ್ನ ವೈಯಕ್ತಿಕ ಹಣದಿಂದ ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದು, ಇದನ್ನು ಮನ ಗಂಡು ತಾಲೂಕಿನ ಜನತೆ ತನಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ದರು. ಯಾವ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂಬುದನ್ನು ಮತದಾರರೇ ನಿರ್ಧರಿಸುತ್ತಾರೆ. ಚುನಾವಣೆಯಲ್ಲಿ ಯಾರನ್ನು ಕೈ ಹಿಡಿಯುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಡ ಗೂಡಿ ತಾಲೂಕಿನ ತಿಪ್ಪೂರು, ದೆಗ್ಗನಹಳ್ಳಿ, ಕಗ್ಗೆರೆ ಗ್ರಾಮದಲ್ಲಿನ ಪ್ರತಿ ಮನೆ–ಮನೆಗೆ ತೆರಳಿ ಶಾಸಕ ಸಾ.ರಾ.ಮಹೇಶ್ ಮತಯಾಚನೆ ಮಾಡಿದರು.
ಜಾತ್ಯಾತೀತ ಜನತಾದಳದ ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಡಿ.ಸಿ ಕಾಂತ ಕುಮಾರ್, ಟಿಪಿಸಿಎಂಎಸ್ ನಿರ್ದೇಶಕ ಎಸ್.ಟಿ.ಕೀರ್ತಿ, ಎಪಿಎಂಸಿ ನಿರ್ದೇಶಕಿ ಮಲ್ಲಿಕಾ ಸತ್ಯನಾರಾಯಣ್, ತಾ.ಪಂ. ಸದಸ್ಯ ಶ್ರೀನಿವಾಸ್ಪ್ರಸಾದ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ವಿಷ್ಣು ವರ್ಧನ, ವಕೀಲ ತಿಮ್ಮೇಗೌಡ, ಮುಖಂಡ ರಾದ ಸತ್ಯನಾರಾಯಣ್, ಕಿಶೋರ್, ಎ.ಟಿ. ಗೋಪಾಲ್, ಮಂಜುನಾಥ್, ಕುಚೇಲ, ಹಂಪಾಪುರ ಸುರೇಶ್, ಕೃಷ್ಣಪ್ಪ, ಬಸವ ರಾಜನಾಯಕ ಮತ್ತಿತರರು ಭಾಗವಹಿಸಿದ್ದರು.