ಮಲ್ಲಿಪಟ್ಟಣದಲ್ಲಿ ಎ.ಮಂಜು ಮತ ಯಾಚನೆ
ಹಾಸನ

ಮಲ್ಲಿಪಟ್ಟಣದಲ್ಲಿ ಎ.ಮಂಜು ಮತ ಯಾಚನೆ

April 19, 2018

ರಾಮನಾಥಪುರ: ಸಚಿವನಾದ ಮೇಲೆ ತಾಲೂಕಿನಲ್ಲಿ ಹೆಚ್ಚಿನ ಅನುದಾನ ಗಳನ್ನು ತಂದು ಅಭಿವೃದ್ಧಿ ಕಾರ್ಯ ಮಾಡಿ ರುವುದೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಚಿವ .ಮಂಜು ತಿಳಿಸಿದರು.

ಹೋಬಳಿ ಮಲ್ಲಿಪಟ್ಟಣ ಗ್ರಾಮ ದಲ್ಲಿ ಮತಯಾಚಿಸಿ ಮಾತನಾಡಿದ ಅವರು, ನಾನು ಮಾಡಿರುವ ಅಭಿವೃದ್ಧಿ ಕಂಡು ಮತದಾರರು ನನಗೆ ಮತ ನೀಡುತ್ತಾರೆ. ನಾನು ಶಾಸಕನಾಗಿದ್ದ ಅವಧಿ ಹಾಗೂ ಮಂತ್ರಿಯಾದ ಮೇಲೆ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಸಂದರ್ಭದಲ್ಲಿ ಜನರಿಂದ ಸಿಗುತ್ತಿರುವ ಬೆಂಬಲ ನಾನು ಕೈಗೊಂಡಿರುವ ಅಭಿವೃದ್ಧಿಯನ್ನು ಬಿಂಬಿಸುತ್ತಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಳಿತದ ಅವಧಿಯಲ್ಲಿ ನಾನು ಭಾಗಕ್ಕೆ ಹಿಂದೆ ಬಂದು ವಾಗ್ದಾನ ಮಾಡಿ ದಂತೆ ಇಂದು ಎಲ್ಲಾ ಕೆಲಸಗಳನ್ನು ಮಾಡಿ ತೋರಿಸಿದ್ದೇನೆ. ನಿಮ್ಮ ಆಶೀರ್ವಾದದಿಂದ ನನಗೆ ಕೆಲಸ ಮಾಡುವ ಸದವಕಾಶ ಸಿಕ್ಕಿದೆ. ಸಿಕ್ಕಂತಹ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅರಕಲಗೂಡು ತಾಲೂಕು ಸಮಗ್ರ ಅಭಿವೃದ್ಧಿ ಯಾಗಿದೆ ಎಂದರೆ ಅದರ ಗೌರವ ನನ್ನ ಮತದಾರರಿಗೆ ಸಲ್ಲುತ್ತದೆ. ವಿವಿಧ ರಾಜ ಕೀಯ ಪಕ್ಷದಲ್ಲಿರುವ ಮುಖಂಡರು, ಕಾರ್ಯ ಕರ್ತರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ದಿನÀಗಳಲ್ಲಿ ಸಂಖ್ಯೆ ಅಧಿಕಗೊಳ್ಳಲಿದೆ. ನಾನು ಕೈಗೊಂಡಿರುವ ಅಭಿವೃದ್ಧಿ ಕೆಲಸ ಗಳನ್ನು ಮನಗಂಡು ನನ್ನನ್ನು ಕ್ಷೇತ್ರದ ಮತದಾರರು ಗೆಲ್ಲಿಸುವ ಮೂಲಕ ಮತ್ತೆ ಸೇವೆ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಮಾಡಿದರು.

ಸಂದರ್ಭದಲ್ಲಿ ತಾಲೂಕು ಜಿಪಂ ಮಾಜಿ ಸದಸ್ಯೆ ತಾರಾ ಮಂಜು, ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಗೆರೆ ಭೈರೇಗೌಡ,  ಹೋಬಳಿ ಅಧ್ಯಕ್ಷ ಜಿ.ಸಿ.ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, .ಕುಮಾರ್, ನಾಗಣ್ಣ, ಧನಂಜಯ, ಪದ್ಮನಾಭ, ಕುಮಾರ್, ಅರುಣ್ ಗೀರೀಶ್, ಮೋಹನ್, ನವೀನ್, ರಾಜ್, ಸಂಜಯ್ ಮುಂತಾದವರಿದ್ದರು.

Translate »