ಮಾದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಅಹೋರಾತ್ರಿ ಕಥಾ ಗಾಯನಕ್ಕೆ ಸಂಭ್ರಮದ ಚಾಲನೆ
ಮೈಸೂರು

ಮಾದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಅಹೋರಾತ್ರಿ ಕಥಾ ಗಾಯನಕ್ಕೆ ಸಂಭ್ರಮದ ಚಾಲನೆ

November 11, 2018

ಮೈಸೂರು: ಆಗಸದ ಸೂರ್ಯ ಮರೆಯಾಗಿ ಕಾರ್ಮೋಡ ಕವಿ ದಂತೆ ಇಳಿ ಸಂಜೆಯ ಮಬ್ಬಿನಲಿ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆ ಯಲ್ಲಿ ಜನಪದ ಗಾಯನದ ಮಾಧು ರ್ಯದ ಕಂಪು ಎಲ್ಲೆಡೆ ಪಸರಿಸಿತು.

ಕಲಾಮಂದಿರದ ಆವರಣದಲ್ಲಿ `ಧರೆಗೆ ದೊಡ್ಡವರು’ ಶೀರ್ಷಿಕೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶನಿವಾರ ಆಯೋಜಿಸಿದ್ದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳ ಆಹೋರಾತ್ರಿ ಕಥಾ ಗಾಯನ ಕಾರ್ಯಕ್ರಮದಲ್ಲಿ ಮಾದೇಶ್ವರ ಹಾಗೂ ಮಂಟೇಸ್ವಾಮಿ ಅವರನ್ನು ಕುರಿತ ಹಾಡು ಗಳು ಪ್ರೇಕ್ಷಕರ ಮನ ತಣಿಸಿದವು.

ಮೊದಲಿಗೆ ಮೈಸೂರು ಗುರುರಾಜು ಮತ್ತು ಮಳವಳ್ಳಿ ಮಾದೇವಸ್ವಾಮಿ ತಂಡಗಳು ಮಾದೇಶ್ವರ- ಮಂಟೇಸ್ವಾಮಿ ಕಾವ್ಯಗಳ ಜುಗಲ್ ಬಂದಿಯಲ್ಲಿ ಮಾದೇಶ್ವರ ವೇದಿಕೆಯಲ್ಲಿ ಮಾದೇವಸ್ವಾಮಿ ತಂಡದವರು `ಚೆಲ್ಲಿದರೂ ಮಲ್ಲಿಗೇಯಾ ಬಾಣಾಸೂರೇರಿ ಮೇಲೆ’, `ಮಾದೇಶ್ವರ ದಯಬಾರದೆ. ಬರಿದಾದ ಬಾಳಲ್ಲಿ ಬರಬಾರದೆ’ ಎಂದು ಹಾಡಿದರೆ, ಮಂಟೇಸ್ವಾಮಿ ವೇದಿಕೆಯಲ್ಲಿ ಮೈಸೂರು ಗುರುರಾಜ್ ತಂಡದವರು `ಎಡಗಾಡೆ ಕಂಡಾಯ, ಬಲಗಾಡೆ ತಂಬೂರಿ’ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಭಕ್ತಿಯ ಅಲೆಯನ್ನೇ ಮೂಡಿಸಿದರು.

ಇದಕ್ಕೂ ಮುನ್ನ ಸಚಿವ ಜಿ.ಟಿ.ದೇವೇ ಗೌಡ ಅವರು ದೂಪ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಜಾನಪದ ಸಿರಿ ನಮ್ಮ ಸಂಪತ್ತು. ಇಂದು ನಶಿಸಿ ಹೋಗುತ್ತಿದ್ದು, ಉಳಿಸಿ, ಬೆಳೆಸಬೇಕಿದೆ ಎಂದರು.

ಹಿಂದೆ ಯಾವುದೇ ನಾಟಕಗಳು ರಾತ್ರಿ 10 ಗಂಟೆಗೆ ಆರಂಭವಾದರೆ ಬೆಳಿಗ್ಗೆ 8 ಗಂಟೆ ಯಾದರೂ ಮುಗಿಯುತ್ತಿರಲಿಲ್ಲ. ಆದರೆ ಇಂದು ನಾಟಕಗಳ ಸಮಯವು ಕಡಿಮೆ ಯಾಗುತ್ತಿದೆ. ಆದರೆ, ಜಾನಪದ ಪರಂಪರೆ ಯನ್ನು ಉಳಿಸಿ, ಬೆಳೆಸಬೇಕೆಂಬ ಉದ್ದೇಶ ದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ಇಂತಹ ಕಾರ್ಯ ಕ್ರಮಗಳು ಹೆಚ್ಚು ನಡೆಯಬೇಕು. ಜತೆಗೆ ಯುವಕರು ಜನಪದ ಕಲೆಯನ್ನು ಉಳಿಸಿ, ಬೆಳೆಸಬೇಕು ಎಂದರು.

ಮೆಟ್ಟಿಲಲ್ಲಿ ಕುಳಿತು ವೀಕ್ಷಣೆ: ಮಾದೇ ಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳ ಕಥಾಗಾಯನ ಆಲಿಸಲು ಮೈಸೂರು, ಮಂಡ್ಯ, ಚಾಮರಾಜನಗರ ಮತ್ತಿತರೆ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿಂದ ಆಗಮಿ ಸಿದ್ದರಿಂದ ಹಾಕಲಾಗಿದ್ದ ಕುರ್ಚಿಗಳು ಭರ್ತಿ ಯಾಗಿ ಕಲಾಮಂದಿರದ ಮುಂಭಾಗದ ಮೆಟ್ಟಿಲುಗಳ ಮೇಲೆ ಕುಳಿತು ಗಾಯನ ಆಲಿಸಿದರು. ನೀಲಗಾರರ ಗಾಯನವನ್ನು ಆಲಿಸಿದ ಸಚಿವ ಜಿ.ಟಿ.ದೇವೇಗೌಡರು, ನಾನು ಒಂದು ಸಾಲು ಹಾಡುತ್ತೇನೆಂದು ಜಾನಪದ ಕಲಾವಿದರೊಟ್ಟಿಗೆ `ಗುರು ಮುಟ್ಟಿ ಗುರು ವಾಗಿ, ಅರಿವಿನೋಳ್ ಅರಿವಾಗಿ’ ಎಂದು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.

ರಾಜ ಬೊಪ್ಪೆಗೌಡನಪುರ ಶ್ರೀ ಮಂಟೇ ಸ್ವಾಮಿ ಮಠದ ಧರ್ಮಾಧಿಕಾರಿ ಬಿ.ಎಲ್. ಪ್ರಭುದೇವರಾಜೇ ಅರಸ್, ಶಾಸಕ ಎಲ್. ನಾಗೇಂದ್ರ, ಸಮಾಜವಾದಿ ಪ.ಮಲ್ಲೇಶ್, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್, ಚಿಂತಕ ಹೆಚ್.ಗೋವಿಂ ದಯ್ಯ, ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹೆಚ್.ಚೆನ್ನಪ್ಪ, ವೆಂಕಟೇಶ್ ಇಂದು ವಾಡಿ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಮೈಸೂರು ಗುರುರಾಜ್ ಮತ್ತು ತಂಡ-ಜಗತ್ ಸೃಷ್ಟಿ-ಕಲ್ಯಾಣ ಪಟ್ಟಣ ಸಾಲು, ಬೇವಿನ ಹಟ್ಟಿ ಕಾಳ ಮ್ಮನ ಸಾಲು. ಮಳವಳ್ಳಿ ಮಾದೇವಸ್ವಾಮಿ ಮತ್ತು ತಂಡ-ಮಹದೇಶ್ವರ ಹುಟ್ಟಿ ಬೆಳೆದ ಸಾಲು, ಆಲಂಬಾಡಿ ಜುಂಜೇಗೌಡನ ಸಾಲು, ಸೆಟ್ಟಿ ಸರಗೂರಯ್ಯ ಸಾಲು. ದೊಡ್ಡಗವಿ ಬಸಪ್ಪ ಮತ್ತು ತಂಡ-ರಾಚಪ್ಪಾಜಿ ಸಾಲು, ಬೊಪ್ಪೇ ಗೌಡನಪುರದ ಸಾಲು. ಬನ್ನೂರು ಕೆಂಪಮ್ಮ ಮತ್ತು ತಂಡ-ದೊಡ್ಡಮ್ಮತಾಯಿ ಸಾಲು. ಕಬ್ಬೇಪುರ ಸಿದ್ದರಾಜು ಮತ್ತು ತಂಡ-ಮಡಿ ವಾಳ ಮಾಚಪ್ಪ ಸಾಲು. ಮಲಾರ ಕಾಲೋ ನಿಯ ಚಿನ್ನಮಾದು ಮತ್ತು ತಂಡ-ಕೆಂಪಾ ಚಾರಿ ಸಾಲು. ಶ್ರೀ ಕೈಲಾಸ ಮೂರ್ತಿ ಮತ್ತು ತಂಡ-ಸಂಕಮ್ಮನ ಸಾಲು. ಬಿ.ಜಿ.ಪುರ ಕುಮಾರ್ ಮತ್ತು ತಂಡದಿಂದ ಸಿದ್ದಪ್ಪಾಜಿ ಸಾಲು ಪ್ರಸಂಗಗಳನ್ನು ಆಯೋಜಿಸಲಾಗಿತ್ತು.
ಅಲ್ಲದೆ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಆಗಮಿಸಿದ್ದ ನೀಲ ಗಾರರು, ತಂಬೂರಿ ಪದಕಾರರು, ಸೋಬಾನೆ ಪದಗಳನ್ನು ಹಾಡುವ ಮಹಿಳಾ ಕಲಾ ವಿದರು ಭಾಗವಹಿಸಿದ್ದರು.

Translate »