ಮೈಸೂರು,ಆ.7(ಎಂಕೆ)- ಮೈಸೂರಿನ ಕರ್ನಾಟಕ ಕಲಾಮಂದಿರಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಲಾಮಂದಿರ ನಿರ್ವಹಣಾ ಸಮಿತಿ ಸಭೆ ಯಲ್ಲಿ 2019-20ನೇ ಸಾಲಿನ ಸಿಎಸ್‍ಆರ್ ಯೋಜನೆಯಡಿ 80 ಲಕ್ಷ ರೂ. ವೆಚ್ಚದಲ್ಲಿ ಕಲಾಮಂದಿರ ಹಾಗೂ ಕಿರುರಂಗಮಂದಿರದ ಒಳ ಹಾಗೂ ಹೊರಾಂಗಣವನ್ನು ಮತ್ತಷ್ಟು ವಿನ್ಯಾಸಗೊಳಿಸುವುದರೊಂದಿಗೆ ಶೌಚಾ ಲಯಗಳ ಉನ್ನತೀಕರಣ, ವಿಐಪಿ ಆಸನ ವ್ಯವಸ್ಥೆ, ಕಿರುರಂಗಮಂದಿರದಲ್ಲಿ ಹೆಚ್ಚು ಆಸನಗಳ ಜೊತೆಗೆ ಹವಾನಿಯಂತ್ರಣ (ಎಸಿ) ವ್ಯವಸ್ಥೆ, ಸಿಸಿಟಿವಿ, ಪ್ರತ್ಯೇಕ ಜನರೇಟರ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ವೇದಿಕೆಗೆ ಸಾಗುವ ಮಾರ್ಗದಲ್ಲಿ ರೆಡ್ ಮ್ಯಾಟ್, ಹೊಸ ಧ್ವನಿವರ್ಧಕ, ಉತ್ತಮ ಲೈಟ್ ಗಳ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ್ತಷ್ಟು ಆಕರ್ಷಣೆ: ಈಗಾಗಲೇ ಸಿಎಸ್‍ಆರ್ ಯೋಜನೆಯಡಿಯಲ್ಲಿಯೇ ಸುಮಾರು 61 ಲಕ್ಷ ರೂ. ವೆಚ್ಚದಲ್ಲಿ ಕಲಾ ಮಂದಿರದ ಹೊರಾಂಗಣದಲ್ಲಿ ಸೌಂದ ರ್ಯೀಕರಣ ಕಾಮಗಾರಿಗಳನ್ನು ಮಾಡ ಲಾಗಿದೆ. ಮುಂದಿನ ದಿನದಲ್ಲಿ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನ ಹಾಗೂ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪ್ರತಿರೂಪ ನಿರ್ಮಿ ಸಲು ಯೋಜನೆ ರೂಪಿಸಲಾಗಿದೆ.
ಮಳೆ ನೀರು ಕೊಯ್ಲು: ಕಲಾಮಂದಿರದ ಎರಡು ಭಾಗದಲ್ಲಿ ಮಳೆ ನೀರನ್ನು ಶೇಖ ರಣೆ ಮಾಡಿ, ಭೂಮಿಗೆ ಇಂಗಿಸುವ ಉದ್ದೇಶದಿಂದ ಮಳೆ ನೀರಿನ ಕೊಯ್ಲು ಗುಂಡಿ ನಿರ್ಮಿಸಲು ಹಾಗೂ ನೀರಿನ ಪೂರೈಕೆಯಲ್ಲಿ ಕೊರತೆ ಉಂಟಾಗದಂತೆ ಎಚ್ಚರ ವಹಿಸಲು ಜಲಮಂಡಳಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. 5 ಲಕ್ಷ ರೂ. ವೆಚ್ಚದಲ್ಲಿ ರಂಗಾಯಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಕಲಾಮಂದಿರಕ್ಕೆ ಪಾರಂಪರಿಕ ಮೆರುಗು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹಲವಾರು ಪಾರಂಪರಿಕ ಕಟ್ಟಡಗಳಿದ್ದು, ಅವುಗಳಂತೆ ಕಲಾಮಂದಿರ ಕಟ್ಟಡಕ್ಕೂ ಪಾರಂಪರಿಕ ಮೆರುಗು ನೀಡುವುದರ ಜೊತೆಗೆ ಎದುರಿನ ರಸ್ತೆಯ ಉನ್ನತೀಕರಣಕ್ಕೆ ನಿರ್ಧರಿಸಲಾಗಿದ್ದು, ಈ ಸಂಬಂಧ ನಗರಪಾಲಿಕೆ ಮತ್ತು ಲೋಕೋ ಪಯೋಗಿ ಇಲಾಖೆಗೆ ಜಿಲ್ಲಾಧಿಕಾರಿ ಅಭಿರಾಂ. ಜಿ.ಶಂಕರ್ ಸೂಚನೆ ನೀಡಿದ್ದಾರೆ.
ಪೂರ್ವಾಭ್ಯಾಸ ಕಟ್ಟಡ: ಮುಡಾ ವತಿ ಯಿಂದ ಕಲಾಮಂದಿರದ ಆವರಣದಲ್ಲಿ ಪೂರ್ವಾಭ್ಯಾಸ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ತ್ವರಿತವಾಗಿ ಕಾಮಗಾರಿ ಆರಂಭಿಸುವಂತೆ ಒತ್ತಾಯಿ ಸಲು ಸಮಿತಿ ಮುಂದಾಗಿದೆ.